karnataka polls: ಕ್ಷೇತ್ರದಲ್ಲಿ ಬದಲಾವಣೆಗೆ ಜನರಿಂದಲೇ ಶಪಥ: ಮಲ್ಲಿಕಾರ್ಜುನ
Team Udayavani, Apr 29, 2023, 3:07 PM IST
ಬಾಗಲಕೋಟೆ: ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಯಲ್ಲೂ ಸ್ವಾಭಿಮಾನಿ ಆಟೋ ಹವಾ ಜೋರಾಗಿದೆ. ಇದು ಸ್ವಾಭಿಮಾನಿ ಕಾರ್ಯಕರ್ತರ ಶಕ್ತಿ. ಅವರಿಂದಲೇ ಇಂದು ಕ್ಷೇತ್ರದಲ್ಲಿ ಬದಲಾವಣೆಗೆ ಶಪಥ ಶುರುವಾಗಿದೆ.
ಪ್ರತಿ ಹಳ್ಳಿಯ ಜನರೂ ಈ ನಮ್ಮನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇಮ್ಮಡಿಯಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ತಾಲೂಕಿನ ಚಿಕ್ಕಗುಳಬಾಳ, ಗುಳಬಾಳ, ಮುತ್ತತ್ತಿ ಮುಂತಾದ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿದರು.
ಬಾಗಲಕೋಟೆ ಕ್ಷೇತ್ರದ ಸಾರ್ವಜನಿಕರ ಹಿತ ಕಾಪಾಡುವ ಹಾಗೂ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಒಬ್ಬ ನಾಯಕ ಅವಶ್ಯವಿದೆ. ಇದನ್ನು ಮನಗಂಡ ನಮ್ಮ ಸ್ವಾಭಿಮಾನಿ ಗೆಳೆಯರ ಬಳಗ, ನಾವು ಸುಮಾರು 30 ವರ್ಷಗಳಿಂದ ಸಂಘಟನೆ-ಶ್ರಮ ಹಾಕಿ ಬೆಳೆಸಿದ ಪಕ್ಷದಿಂದ ಟಿಕೆಟ್ ಕೇಳಿದ್ದೇವು. ಆದರೆ, ಟಿಕೆಟ್ ಕೊಡಲಿಲ್ಲ. ಆದರೂ, ನಾವು ಯಾವುದೇ ಪಕ್ಷಕ್ಕೆ ಹೋಗದೇ ಸ್ವಾಭಿಮಾನದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇವೆ ಎಂದರು.
ಹೆಸರಿಗೆ ಮಾತ್ರ ನಾನು ಅಭ್ಯರ್ಥಿ. ಆದರೆ, ಕ್ಷೇತ್ರದ ಪ್ರತಿಯೊಬ್ಬ ಸ್ವಾಭಿಮಾನಿ ಕಾರ್ಯಕರ್ತನೇ ನಿಜವಾದ ಅಭ್ಯರ್ಥಿ ಎಂದು ಭಾವಿಸಿ, ಎಲ್ಲೆಡೆ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲೂ ಒಂದು ಬಾರಿ ಪ್ರಚಾರ ಕೈಗೊಂಡು, ಜನರನ್ನು ಭೇಟಿ ಮಾಡಿದ್ದೇನೆ. ಎಲ್ಲ ಕಡೆಯೂ ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ. ಸ್ವಾಭಿಮಾನಿಗಳ ಆಟೋದ ವೇಗಕ್ಕೆ ವಿರೋಧಿಗಳು ವಿಚಲಿತರಾಗಿದ್ದಾರೆ. ಬರುವ ಮೇ 10ರಂದು ಚುನಾವಣೆಯಲ್ಲಿ ಸ್ವಾಭಿಮಾನದ ಮತದಾನ ನಮ್ಮ ಪರವಾಗಿ ಮಾಡಲಿದ್ದಾರೆ ಎಂದು ವಿಶ್ವಾಸವಿದೆ ಎಂದು ಹೇಳಿದರು.
ಮತದಾರರು ನೀಡುವ ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದೇ, ಜನರ ಸೇವೆ ಬಳಸಿಕೊಳ್ಳಬೇಕು ಎಂಬುದು ನನ್ನ ಅಭಿಲಾಸೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಗೆದ್ದುಬಂದಲ್ಲಿ ಐದು ವರ್ಷ ನಿಮ್ಮ ಸೇವಕನಾಗಿ ಕೆಲಸ ಮಾಡುವೆ. ಮತದಾರರ ಕಷ್ಟ-ನೋವು ಆಲಿಸಿ, ಸಾಂತ್ವನ ಹೇಳುವ ಜತೆಗೆ ಅವರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಅದಕ್ಕಾಗಿಯೇ ಮತದಾರರ, ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಈ ಪ್ರಜ್ಞೆಯೂ ಇಲ್ಲದವರು, ಜನರೊಂದಿಗೆ ದುರಂಹಕಾರದಿಂದ ವರ್ತಿಸಿ, ಜನರ ಮನಸ್ಸಿನಿಂದ ದೂರಾಗಿದ್ದಾರೆ ಎಂದರು.
ಮುಳುಗಡೆ ಕ್ಷೇತ್ರ ಬಾಗಲಕೋಟೆಯಲ್ಲಿ ಒಂದು ಕೈಗಾರಿಕೆ ಕೂಡ ಇಲ್ಲ. ಜನ ಉದ್ಯೋಗವಿಲ್ಲದೇ
ಎದುರಿಸುತ್ತಿರುವ ಸಂಕಷ್ಟ ಅರಿತುಕೊಳ್ಳಲೂ ಯಾರೂ ಹೋಗಿಲ್ಲ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ ಸಹಿತ ಮೂಲಭೂತ ಸೌಲಭ್ಯ ಕಲ್ಪಿಸುವುದು ಅಷ್ಟೇ ಅಲ್ಲ.
ಜನರ ಬದುಕು ಬದಲಾಗಬೇಕು, ನೆಮ್ಮದಿಯ ಜೀವನ ನಡೆಸಬೇಕು. ಅದಕ್ಕೆ ಬೇಕಾದ ಪೂರಕ ವಾತಾವರಣ
ಕ್ಷೇತ್ರದಲ್ಲಿ ನಿರ್ಮಿಸಬೇಕು. ಆಗ ಒಬ್ಬ ಜನಪ್ರತಿನಿಧಿ, ಜನ ನಾಯಕನಾಗಲು ಸಾಧ್ಯ ಎಂದು ಹೇಳಿದರು. ಮುಖಂಡರಾದ ಶಂಭುಗೌಡ ಪಾಟೀಲ, ಸಂಗನಗೌಡ ಗೌಡರ, ಸಂತೋಷ ಹೊಕ್ರಾಣಿ, ಗುರು ಅನಗಾವಡಿ,
ಬಸವರಾಜ ಸೊಕನಾದಗಿ, ಅರುಣ ಲೋಕಾಪುರ ಪಾಲ್ಗೊಂಡಿದ್ದರು.
ವಿದ್ಯಾಗಿರಿಯಲ್ಲಿ ಬಿರುಸಿನ ಪ್ರಚಾರ: ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಮತ್ತು ಯುವ
ಮುಖಂಡ ಸಂತೋಷ ಹೊಕ್ರಾಣಿ ವಿದ್ಯಾಗಿರಿಯ 14ನೇ ಕ್ರಾಸ್‌ನಲ್ಲಿ ಪ್ರಚಾರ ನಡೆಸಿದರು. ಪ್ರತಿ ಮನೆ ಮನೆಗೂ
ತೆರಳಿ, ಬಾಗಲಕೋಟೆಯಲ್ಲಿ ಬದಲಾವಣೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಹೆಸರಿಗೆ ಮಾತ್ರ ನಾನು ಅಭ್ಯರ್ಥಿ. ಆದರೆ, ಕ್ಷೇತ್ರದ ಪ್ರತಿಯೊಬ್ಬ ಸ್ವಾಭಿಮಾನಿ ಕಾರ್ಯಕರ್ತನೇ ನಿಜವಾದ ಅಭ್ಯರ್ಥಿ ಎಂದು ಭಾವಿಸಿ, ಎಲ್ಲೆಡೆ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಕ್ಷೇತ್ರದ ಎಲ್ಲ ಹಳ್ಳಿಗಳಲ್ಲೂ ಪ್ರಚಾರ ಕೈಗೊಂಡು
ಜನರನ್ನು ಭೇಟಿ ಮಾಡಿದ್ದೇನೆ. ಎಲ್ಲ ಕಡೆಯೂ ನಮ್ಮ ನಿರೀಕ್ಷೆಗೂ ಮೀರಿ ಬೆಂಬಲ ಸಿಗುತ್ತಿದೆ.
-ಮಲ್ಲಿಕಾರ್ಜುನ ಚರಂತಿಮಠ,
ಪಕ್ಷೇತರ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.