Mahalingpur: ಭ್ರೂಣಹತ್ಯೆ ಪ್ರಕರಣ… ಆರೋಪಿ ಕವಿತಾ ಮನೆಗೆ ನೋಟಿಸ್ ಅಂಟಿಸಿದ ಅಧಿಕಾರಿಗಳು
Team Udayavani, Jun 5, 2024, 8:43 PM IST
ಮಹಾಲಿಂಗಪುರ: ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿ ಜೈಲಿನಲ್ಲಿರುವ ಆರೋಪಿ ಕವಿತಾ ಬಾಡನವರ ಮನೆಯ ಕಟ್ಟಡದ ಪರವಾನಿಗೆ, ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪುರಸಭೆಗೆ ನೀಡಬೇಕೆಂದು ನೋಟಿಸ್ ಜಾರಿ ಮಾಡಿದ ಪುರಸಭೆಯ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ವ್ಯವಸ್ಥಾಪಕ ಎಸ್.ಎನ್.ಪಾಟೀಲ, ಕಂದಾಯ ವಿಭಾಗದ ಎಂ.ಕೆ.ದಳವಾಯಿ ಅವರು ಮನೆಯಲ್ಲಿ ಕವಿತಾ ಸಂಬಂಧಿಕರು ಯಾರು ಇಲ್ಲದ ಕಾರಣ ಮನೆಯ ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದಾರೆ.
ಪುರಸಭೆಯ ಕಂದಾಯ ವಾರ್ಡ ನಂಬರ್ 4/1 ಟಿಟಿಎಸ್ ನಂ 11774/ಎ/73ಟಿಎಂಸಿ ನಂಬರ್ 2081ರಲ್ಲಿ , 1030 ಮತ್ತು 1140 ಅಳತೆಯಲ್ಲಿ ಮೂರು ಮಹಡಿಯ ಮನೆಯನ್ನು ವಾಸಕ್ಕೆ ಅಂತಾ ಅನಧಿಕೃತವಾಗಿ ಕಟ್ಟಡ ನಿರ್ಮಾಣಮಾಡಿ ನೆಲ ಮತ್ತು ಮೊದಲ ಮಹಡಿಯ ಸ್ವಯಂ ಘೋಷಿತ ಆಸ್ತಿ ತೆರಿಗೆ ಭರಣಾ ಮಾಡಿದ್ದು ಕಂಡು ಬಂದಿದೆ.
27-05-2024 ರಂದು ಸದರಿ ಕಟ್ಟಡದಲ್ಲಿ ಕಾನೂನು ಬಾಹಿರ ಕ್ರಿಮಿನಲ್ ನಡೆಸಿರುವುದು ಕಂಡು ಬಂದಿದೆ. ಕಾರಣ ನೋಟಿಸ್ ತಲುಪಿದ 15 ದಿನದೊಳಗಾಗಿ ಸದರಿ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಖುದ್ದಾಗಿ ಕಚೇರಿಗೆ ಸಲ್ಲಿಸತಕ್ಕದ್ದು ತಪ್ಪಿದ್ದಲ್ಲಿ ಪುರಸಭೆ ಕಾಯ್ದೆ 1964 ರ ಪ್ರಕಾರ ತಮ್ಮ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಲು ಸೂಕ್ತಕ್ರಮ ಕೈಗೊಳ್ಳಲಾಗುವದು ಎಂದು ಪುರಸಭೆ ಅಧಿಕಾರಿಗಳು ನೋಟಿಸ್‌ನಲ್ಲಿ ನಮೂದಿಸಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೂ ಪತ್ರ :
ಪಟ್ಟಣದ ಆಯಿಲ್‌ಮಿಲ್ ಪ್ಲಾಟ್(ಜಯಲಕ್ಷ್ಮೀನಗರ)ನ ಕವಿತಾ ಚನ್ನಪ್ಪ ಬಾಡನವರ ಮನೆಯಲ್ಲಿ ಕಾನೂನು ಬಾಹಿರವಾಗಿ ಗರ್ಭಪಾತ ಮಾಡುತ್ತಿದ್ದ ಸಂಗತಿ. ಮೇ-29 ರಂದು ಪ್ರಕರಣ ಬೆಳಕಿಗೆ ಬಂದ ನಂತರ ಪತ್ರಿಕೆಗಳ ವರದಿ ಮೂಲಕ ಪುರಸಭೆಯ ಗಮನಕ್ಕೆ ಬಂದಿದೆ. 2019 ಮತ್ತು 2022 ರಲ್ಲಿ ಕವಿತಾ ಬಾಡನವರ ಮನೆಯ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಡೆಸಿದ ದಾಳಿಯ ಮಾಹಿತಿಯನ್ನು ಪುರಸಭೆಗೆ ನೀಡಿಲ್ಲ ಯಾಕೆ?. ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ನಡೆದ ಹಾಗೂ ಪ್ರಸ್ತುತ ಪ್ರಕರಣಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ತಕ್ಷಣ ಪುರಸಭೆಗೆ ಸಲ್ಲಿಸಬೇಕೆಂದು ಕೋರಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಪುರಸಭೆ ಮುಖ್ಯಾಧಿಕಾರಿಗಳು ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.