ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ: ತಲೆ ಮರೆಸಿಕೊಂಡಿದ್ದ ಓರ್ವನ ಬಂಧನ
Team Udayavani, Jan 13, 2023, 7:53 PM IST
ರಬಕವಿ-ಬನಹಟ್ಟಿ: ಈಚೆಗೆ ಸಮೀಪದ ಜಗದಾಳ ಗ್ರಾಮದಲ್ಲಿ ಅನಧಿಕೃತವಾಗಿ ಸಾಮಿಲ್‌ನಲ್ಲಿ ಕಟ್ಟಿಗೆ ಕೊರೆಯುವ ಯಂತ್ರದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ಅರಣ್ಯ ಅಧಿಕಾರಿಗಳು ತಮ್ಮ ಕಾರ್ಯ ನಡೆಸುತ್ತಿರುವಾಗ ತನಿಖೆಗೆ ಅಡ್ಡಿಪಡಿಸಿದ್ದಲ್ಲದೆ ಮಾರಣಾಂತಿಕ ಹಲ್ಲೆ ನಡೆಸಿದ್ದ ನಾಲ್ವರು ತಲೆ ಮರೆಸಿಕೊಂಡಿದ್ದರು.
ಈ ಹಿನ್ನಲೆಯಲ್ಲಿ ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಗೆ ಶೋಧ ನಡೆಸಿದ ಡಿವಾಯ್ ಎಸ್ಪಿ ಶಾಂತವೀರ ಹಾಗೂ ಸಿಪಿಐ ಐ ಎಂ ಮಠಪತಿ ಅವರ ಮಾರ್ಗದರ್ಶನದಲ್ಲಿ ಬನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ರಾಖೇಶ ಬಗಲಿ ನೇತೃತ್ವದ ತಂಡ ವಿಎಸ್. ಅಜ್ಜನಗೌಡರ, ಆನಂದ ಕೋಲೂರ, ಎಂ. ಡಿ ಸವದಿ, ಸತೀಶ ಬಳವಾಡ, ಮಹಾನಿಂಗ ಗೂಳಿ, ಅವರನ್ನು ಒಳಗೊಂಡ ತಂಡ ಪ್ರಮುಖ ಆರೋಪಿ ಸಾಮಿಲ್ ಮಾಲಕ ಮುತ್ತಪ್ಪ ಗಾಂಜಾಗೋಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇನ್ನೂ ಮೂವರ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.
ಸೇವಾ ಸಮಯದಲ್ಲಿದ್ದ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರ ಬಗ್ಗೆ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಜಾತಿ ನಿಂದನೆ ಪ್ರಕರಣಕ್ಕೆ ತಡೆಯಾಜ್ಷೆ
ಜಗದಾಳದ ಸಾಮಿಲ್‌ಕ್ಕೆ ತೆರಳಿದ್ದ 8-10 ಜನರ ಅರಣ್ಯ ಇಲಾಖೆ ಸಿಬಂದಿ ಗಳ ತಂಡದೊಂದಿಗೆ ಅಧಿಕಾರಿಗಳಾದ ಪವನ್‌ಕುಮಾರ ಕೆ. ಹಾಗು ಮಲ್ಲಿಕಾರ್ಜುನ ನಾವಿ ಎಂಬುವರ ಮೇಲೂ ಜಾತಿ ನಿಂದನೆ ಪ್ರಕರಣವನ್ನು ಸಾಮಿಲ್ ಮಾಲಿಕರು ಪ್ರಕರಣ ದಾಖಲಿಸಿದ್ದರು. ಈ ಕುರಿತಾಗಿ ಹೈಕೋರ್ಟ್ಗೆ ಮೊರೆ ಹೋಗಿದ್ದ ಇಲಾಖೆಗೆ ಪ್ರಕರಣಕ್ಕೆ ಶುಕ್ರವಾರ ತಡೆಯಾಜ್ಞೆ ದೊರೆತಿದೆ.
ಒಟ್ಟಾರೆ ಅರಣ್ಯ ಸಂಪತ್ತಿಗೆ ಅಕ್ರಮವಾಗಿ ನಡೆಸುತ್ತಿದ್ದ ಕಾರ್ಖಾನೆ ಹಾಗು ಸಾಮಿಲ್‌ಗಳಿಗೆ ತಕ್ಕ ಪಾಠ ಕಲಿಸುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.