ಕೆಜಿ ಪ್ಲಾಸ್ಟಿಕ್ ಕೊಟ್ಟರೆ ಒಂದು ಊಟ ಉಚಿತ
Team Udayavani, Oct 21, 2019, 12:05 PM IST
ಜಮಖಂಡಿ: 1 ಕೆಜಿ ಪ್ಲಾಸ್ಟಿಕ್ ಕೊಟ್ಟರೆ ಒಂದು ಊಟ ಉಚಿತ. ಹೌದು. ನಗರದ ಹೋಟೆಲ್ ಉದ್ಯಮಿಯೊಬ್ಬರು ಪ್ಲಾಸ್ಟಿಕ್ ಬಳಕೆಯನ್ನು ಮುಕ್ತಗೊಳಿಸಲು ಇಂತಹ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ತಾವು ಬಳಸಿ ಬೀಸಾಡುವ ಬದಲು 1 ಕೆ.ಜಿ. ಪ್ಲಾಸ್ಟಿಕ್ ನಿರುಪಯುಕ್ತ ಸಾಮಗ್ರಿಗಳನ್ನು ತಂದು ಕೊಟ್ಟರೆ ಅವರಿಗೆ ಒಂದೊತ್ತಿನ ಊಟವನ್ನು ಉಚಿತವಾಗಿ ನೀಡುತ್ತಿದ್ದಾರೆ ಅನ್ನಪೂರ್ಣೇಶ್ವರ ಫ್ಯಾಮಿಲಿ ರೆಸ್ಟೋರೆಂಟ್ ಮಾಲಿಕ ಬಸಲಿಂಗಯ್ಯ ಕಲ್ಯಾಣಿ. ಕಳೆದು 3 ದಿನಗಳ ಹಿಂದೆ ಆರಂಭಿಸಿದ ಹೊಸ ಪ್ರಯೋಗಕ್ಕೆ ಎಲ್ಲ ಕಡೆಯಿಂದಲೂ ಬೆಂಬಲ, ಪ್ರೋತ್ಸಾಹ ಬರುತ್ತಿದೆ. ಜನರಲ್ಲಿ ಜಾಗೃತಿ, ಪ್ರಚಾರದ ಅವಶ್ಯಕತೆ ಇದೆ ಎನ್ನುತ್ತಾರೆ ಬಸಲಿಂಗಯ್ಯ.
ರಾಷ್ಟ್ರೀಯ ಹಬ್ಬ-ಸೈನಿಕರ ಕುಟುಂಬಕ್ಕೆ ರಿಯಾಯಿತಿ: ಕಳೆದ 3 ವರ್ಷಗಳಿಂದ ಅನ್ನಪೂರ್ಣೇಶ್ವರಿ ರೆಸ್ಟೋರೆಂಟ್ ಸಾರ್ವಜನಿಕ, ಸಾಮಾಜಿಕ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದೆ. ಆಗಸ್ಟ್ 15, ಜನವರಿ 26, ಗಾಂಧಿ ಜಯಂತಿ, ಭಗತಸಿಂಗ್ ಜಯಂತಿ ಹೀಗೆ ಮಹಾನ್ ನಾಯಕರ ಜಯಂತಿ ದಿನದಂದು ಛದ್ಮವೇಷಧರಿಸಿದ ಮಕ್ಕಳಿಗೆ ಉಚಿತವಾಗಿ ಉಪಹಾರ ನೀಡಲಾಗುತ್ತಿದೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರು, ಮಾಜಿ ಸೈನಿಕರಿಗೆ ಹಾಗೂ ಯುದ್ಧದಲ್ಲಿ ಮೃತಗೊಂಡ ಸೈನಿಕರ ತಂದೆ-ತಾಯಿಗೆ ಹಾಗೂ ಕುಟುಂಬ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಊಟ-ಉಪಹಾರ ನೀಡಲಾಗುತ್ತಿದೆ. ಯುದ್ಧದಲ್ಲಿ ಮೃತಗೊಂಡ ಯೋಧನ ತಂದೆ-ತಾಯಿಗೆ ಉಚಿತವಾಗಿ ಉಪಹಾರ ನೀಡಲಾಗುತ್ತದೆ.
ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಶೇ.25 ರಿಯಾಯತಿ, ನಿವೃತ್ತ ಯೋಧರಿಗೆ ಶೇ.5 ರಿಯಾಯತಿ ನೀಡುತ್ತಾರೆ. ಎಲ್ಲ ಯೋಧರು ಕಡ್ಡಾಯವಾಗಿ ಸೇನೆಯ ಗುರುತಿನ ಚೀಟಿ ಹೊಂದಿರಬೇಕು. ಪ್ಲಾಸ್ಟಿಕ್ ನಿಷೇಧ ವ್ಯವಸ್ಥೆಯಲ್ಲಿ ಸಂಪೂರ್ಣ ತೊಡಗಿಕೊಂಡಿರುವ ಅನ್ನಪೂರ್ಣೇಶ್ವರಿ ಹೋಟೆಲ್ ಮಾಲಿಕರು ಪ್ಲಾಸ್ಟಿಕ್ ಬಳಸದ ಮನೆಗಳ ಸ್ಪರ್ಧೆ ಕೂಡ ಏರ್ಪಡಿಸಿದ್ದರು. ಅದರಲ್ಲಿ ಪ್ರತಿನಿತ್ಯ ಪ್ಲಾಸ್ಟಿಕ್ ಬಳಸದ ನಗರದ 3 ಕುಟುಂಬದವರನ್ನು ಸನ್ಮಾನಿಸಿ, ಗೌರವಿಸುವ ಮೂಲಕ ಉಚಿತವಾಗಿ ಉಪಹಾರ ನೀಡಿ ಉಪಚರಿಸಿದ್ದಾರೆ.
-ಮಲ್ಲೇಶ ರಾ.ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.