ಸ್ವಯಂ ಘೋಷಿತ ತೆರಿಗೆ ಹೆಚ್ಚಳಕ್ಕೆ ವಿರೋಧ
Team Udayavani, May 25, 2020, 11:46 AM IST
ಹುನಗುಂದ: ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏಕಾಏಕಾಗಿ ಶೇ. 25 ಏರಿಕೆ ಮಾಡಿರುವುದು ಕೊರೊನಾ ವೈರಸ್ ನಿಂದ ಕೆಂಗೆಟ್ಟ ಜನರ ಜೀವನದ ಮೇಲೆ ಸರ್ಕಾರ ಗಾಯದ ಮೇಲೆ ತೆರಿಗೆಯ ಬರೆ ಎಳೆದಂತಾಗಿದೆ ಎಂದು ಜನ ಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಹೇಳಿದರು.
ರವಿವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರುಸುತ್ತಿರುವ ರೈರು ಹಾಗೂ ಮತ್ತಿತರ ಜನರ ಮೇಲೆ ಮತ್ತಷ್ಟು ಭಾರವನ್ನು ಏರಿದಂತಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿಯಂತೆ ಏ. 30ರೊಳಗೆ ಪಾವತಿಸುವ ಆಸ್ತಿದಾರರಿಗೆ ಮೊದಲ ಹಂತದ ಲಾಕ್‌ಡೌನ್ ಗಮನದಲ್ಲಿಟ್ಟುಕೊಂಡು ಶೇ. 5 ರಿಯಾಯತಿ ನೀಡಿ ಮೇ 31ರವರೆಗೆ ಆಸ್ತಿತೆರಿಗೆ ಕಟ್ಟಲು ಕಾಲಮಿತಿ ವಿಸ್ತರಿಸಿ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿತ್ತು. ಆದರೆ, ಎಲ್ಲ ವರ್ಗದ ಜನತೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಈ ನೀತಿಯನ್ನು ಹಿಂಪಡೆದು ಹಳೆಯ ತೆರಿಗೆ ಪದ್ದತಿ ಮುಂದುವರಿಸಬೇಕು. ಸರ್ಕಾರ ಮೇಲ್ನೋಟಕ್ಕೆ ಶೇ. 25 ತೆರಿಗೆ ಏರಿಕೆ ಮಾಡಿರುವುದು ವಾಸ್ತವದಲ್ಲಿ ಶೇ. 40ರಿಂದ 60 ತೆರಿಗೆ ಹೆಚ್ಚಳವಾಗಿರುತ್ತದೆ. 2005-06ರಲ್ಲಿ ಸ್ವಯಂ ಘೋಷಿತ ತೆರಿಗೆ ಅನುಸಾರ ಕನಿಷ್ಟ ಶೇ. 15 ದರವನ್ನು ಪ್ರತಿ 3 ವರ್ಷಕ್ಕೊಮ್ಮೆ ಹೆಚ್ಚಳ ಮಾಡುವ ನಿಯಮವಿದ್ದು ಅದನ್ನು ಲೆಕ್ಕಿಸದೇ ತೆರಿಗೆ ಹೆಚ್ಚಳ ಮಾಡಿದೆ ಎಂದು ಆರೋಪಿಸಿದರು.
ಸರ್ಕಾರ ಕೋವಿಡ್ ವೈರಸ್ ಭೀಕರತೆ ಗಣನೆಗೆ ತಗೆದುಕೊಂಡು ಏಕಾಏಕಿಯಾಗಿ ಶೇ. 25 ತೆರಿಗೆ ಹೆಚ್ಚಳದ ಕ್ರಮ ಕೈ ಬಿಡಬೇಕು ಮತ್ತು ಪ್ರಸಕ್ತ ವರ್ಷದ ತೆರಿಗೆ ಪಾವತಿಗಾಗಿ ಮೇ 31ರವರೆಗೆ ನೀಡಿರುವ ಶೇ. 5ರ ರಿಯಾಯಿತಿ ಅವ ಧಿಯನ್ನು ಡಿ. 31ರವರೆಗೆ ವಿಸ್ತರಿಸಬೇಕು. ಈ ಕುರಿತು ಈಗಾಗಲೇ ಮುಖ್ಯಮಂತ್ರಿ, ಪೌರಾಡಳಿತ ಸಚಿವರು, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶನಾಲಯದ ನಿರ್ದೇಶಕರಿಗೆ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು. ತೆರಿಗೆ ಹೆಚ್ಚಳದ ನಿರ್ಧಾರ ಸರ್ಕಾರ ಕೈಬಿಡದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನ್ಯಾಯವಾದಿ ವಿ.ಡಿ. ಜನಾದ್ರಿ, ಜಿ.ಬಿ.ಕಂಬಾಳಿಮಠ, ರೈತ ಮುಖಂಡ ಶ್ರೀಕೃಷ್ಣ ಜಾಲಿಹಾಳ, ಚನ್ನಬಸಪ್ಪ ಇಲಕಲ್ಲ, ವಿಜಯ ಚಿನ್ನನವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.