ಸಮಾಜ ಅಭಿವೃದ್ಧಿಗೆ ಸಂಘಟನೆ ಅವಶ್ಯ
Team Udayavani, Jul 4, 2020, 3:01 PM IST
ಬನಹಟ್ಟಿ: ಸಮಾಜದ ಅಭಿವೃದ್ಧಿಗಾಗಿ ಸಂಘಟನೆ ಅವಶ್ಯವಿದೆ. ಶಿಕ್ಷಣ ಹಾಗೂ ಹಕ್ಕುಗಳಿಗೆ ಧ್ವನಿಯಾಗುವಲ್ಲಿ ಪಂಚಮಸಾಲಿ ಸಮಾಜ ಗಟ್ಟಿಯಾಗಬೇಕೆಂದು ಕೂಡಲಸಂಗಮದ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ನಗರದ ವಿಶ್ರಾಂತಿ ಗೃಹದಲ್ಲಿ ನಡೆದ ರಬಕವಿ-ಬನಹಟ್ಟಿ ತಾಲೂಕಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಮಾತನಾಡಿದ ಅವರು, ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ಸಮುದಾಯ ಪಂಚಮಸಾಲಿ.ಆದರೆ ಆರ್ಥಿಕವಾಗಿ ತೀವ್ರ ಹಿಂದುಳಿದು, ಕೇವಲ ಒಕ್ಕಲುತನದಿಂದದುಡಿಮೆ ಸಾಗಿಸುತ್ತ ಸಮಸ್ಯೆಗಳಿಂದಲೇ ಹಿಂದುಳಿದ ಜನಾಂಗವಾಗಿದೆ. ಸರ್ಕಾರ ಇವೆಲ್ಲವನ್ನೂ ಗುರುತಿಸಿ 2ಎ ಗುಂಪಿಗೆ ಸೇರಿಸುವಲ್ಲಿ ತಾರತಮ್ಯ ಮಾಡುತ್ತಿರುವುದು ಸಲ್ಲದು. ಆದ್ದರಿಂದ ಶೀಘ್ರ ಹಿಂದುಳಿದ ಸಮಾಜಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ಮಾತನಾಡಿ, ಶೇ.90 ಜನ ವ್ಯವಸಾಯವನ್ನೇ ನಂಬಿರುವ ಪಂಚಮಸಾಲಿ ಸಮುದಾಯ ಸೌಲಭ್ಯಗಳ ಹೋರಾಟದಲ್ಲಿಯೇ ಜೀವನ ಕಳೆಯುವಂತಾಗಿದೆ ಎಂದರು. ನಂತರ ರಬಕವಿ-ಬನಹಟ್ಟಿ ನೂತನ ತಾಲೂಕಿನ ಪಂಚಮಸಾಲಿ ಸಮಾಜದ ಅಧ್ಯಕ್ಷರನ್ನಾಗಿ ಶ್ರೀಶೈಲ ದಲಾಲ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೆಳೆ ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಬಸವರಾಜ ದಲಾಲ, ಬಾಬಾಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಈರಪ್ಪ ದಿನ್ನಿಮನಿ, ಸಿದ್ದು ಅಮ್ಮಣಗಿ, ಲಕ್ಷ್ಮಣ ಪಾಟೀಲ, ದಯಾನಂದ ಧರಿಗೊಂಡ, ವಿಜಯ ಕುಮಾರ ಪೂಜಾರಿ, ಬಸವರಾಜ ಯಾದವಾಡ, ಶೇಖರ ನೀಲಕಂಠ, ಪ್ರಭು ಪಾಲಭಾಂವಿ, ಅಲ್ಲಪ್ಪ ಮುಗಳಖೋಡ, ಹುಲ್ಲೆಪ್ಪ ಹುಕ್ಕೇರಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.