ದೇವದಾಸಿ ಪದ್ಧತಿ ನಿರ್ಮೂಲನೆಗೆ ಪ್ಯಾಕೇಜ್‌


Team Udayavani, Mar 13, 2020, 4:35 PM IST

ದೇವದಾಸಿ ಪದ್ಧತಿ ನಿರ್ಮೂಲನೆಗೆ ಪ್ಯಾಕೇಜ್‌

ಬಾಗಲಕೋಟೆ: ದೇವದಾಸಿ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು, ಅವರು ಸ್ವಾವಲಂಬಿಗಳಾಗಿ ಜೀವನ ನಡೆಸುವಂತೆ ಮಾಡಲು ಒಂದು ಸಮಗ್ರ ಪ್ಯಾಕೇಜ್‌ ಅಗತ್ಯವಾಗಿದ್ದು, ಈ ಕುರಿತು ಸರಕಾದ ಗಮನಕ್ಕೆ ತರುವುದಾಗಿ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಕೆ.ರತ್ನಪ್ರಭಾ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಸಂಯುಕ್ತಾಶ್ರಯದಲ್ಲಿ ನವನಗರದ ಕಲಾಭವನದಲ್ಲಿ ಮಾಜಿ ದೇವದಾಸಿ ಮಹಿಳೆಯರಿಗೆ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಇತರೆ ಇಲಾಖೆ ಕಾರ್ಯಕ್ರಮಗಳ ಮಾಹಿತಿ ಕಾರ್ಯಾಗಾರ ಹಾಗೂ ಮಾಜಿ ದೇವದಾಸಿ ಮಕ್ಕಳ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವದಾಸಿ ಮಕ್ಕಳು ಎಲ್ಲರಂತೆ ಶಿಕ್ಷಣ ಕಲಿತು ಉತ್ತಮ ಸ್ಥಾನ ಅಲಂಕರಿಸುವಂತಾಗಬೇಕು. ಸರಕಾರ ದೇವದಾಸಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನ, ಪ್ರೋತ್ಸಾಹ, ಮಕ್ಕಳಿಗೆ ಮದುವೆ ಕಾರ್ಯಕ್ರಮಗಳಿದ್ದು, ಅನಿಷ್ಠ ಪದ್ಧತಿಯಿಂದ ಹೊರ ಬಂದು ಒಳ್ಳೆಯ ಜೀವನ ನಡೆಸಬೇಕೆಂದರು. ದೇವದಾಸಿಯರಿಗೆ ಸರಕಾರದಿಂದ ಭೂಮಿ ನೀಡುವ ಕೆಲಸವಾಗಬೇಕು. ಇದರಿಂದ ಭೂಮಾಲಿಕರಾಗಿ ಗೌರವದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಡಿಸಿ-ಜಿಪಂ ಸಿಇಒ ಅವರಲ್ಲಿ ಮನವಿ ಮಾಡಿದರು.

ಅಥಣಿಯ ದೇವದಾಸಿ ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್‌.ಪಾಟೀಲ ಮಾತನಾಡಿದರು. ಜಿಪಂ ಸಿಇಒ ಗಂಗೂಬಾಯಿ ಮಾನಕರ ಪ್ರಾಸ್ತಾವಿಕ ಮಾತನಾಡಿ, ದೇವದಾಸಿ ಮಹಿಳೆಯರು ಎಲ್ಲರಂತೆ ಸಮಾಜದಲ್ಲಿ ಬದುಕಲೆಂಬ ದೃಷ್ಟಿಯಿಂದ ಅವರ ಮಕ್ಕಳಿಗೆ ಮುದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರು ಸ್ವತಂತ್ರವಾಗಿ ಬದುಕಲು ಎಲ್ಲ ರೀತಿಯ ಸೌಲಭ್ಯ ಒದಗಿಸಿ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನರೇಗಾ ಯೋಜನೆಯಡಿ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಾಗುತ್ತಿಲ್ಲ. ಕೆಲ ಕಂಪನಿಗಳ ಜತೆ ಮಾತನಾಡಿ ಉದ್ಯೋಗ ಸೃಷ್ಟಿಸುವ ಕೆಲಸ ಆಗಬೇಕಿದೆ ಎಂದರು. ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಮಠ, ಜಿಲ್ಲಾ ಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ, ಪ್ರೋಬೇಷನರಿ ಐಎಎಸ್‌ ಅಧಿಕಾರಿ ಗರಿಮಾ ಪನ್ವಾರ, ಜಿಪಂ ಉಪ ಕಾರ್ಯದರ್ಶಿ ಎ.ಜಿ.ತೋಟದ ಸೇರಿದಂತೆ ವಿವಿಧ ಇಲಾಖೆ ಅಧಿ ಕಾರಿಗಳು ಉಪಸ್ಥಿತರಿದ್ದರು. ಶಿಕ್ಷಣ ಇಲಾಖೆಯ ಜಾಸ್ಮಿನ್‌ ಕಿಲ್ಲೆದಾರ ನಿರೂಪಿಸಿದರು.

ಕಂಕಣಭಾಗ್ಯ ಪಡೆದ 10 ಜನ ದೇವದಾಸಿ ಮಕ್ಕಳು :  ಸಂಗೊಂದೆಪ್ಪ ಯಲ್ಲವ್ವ ಮಾದರ-ಮುದಕ್ಕವ್ವಾ ಯಲಗುರ್ದಪ್ಪಾ ಬಂಡಿವಡ್ಡರ, ಚಂದ್ರಶೇಖರ ಯಲ್ಲವ್ವ ಚಲವಾದಿ-ಶಶಿಕಲಾ ವಿಠuಲ ಚಲವಾದಿ, ರೇವಣಸಿದ್ಧ ಚಂದ್ರಾಮ ವಾಲಿಕಾರ-ಕಾವೇರಿ ಕೆಂಚವ್ವ ಹಾದಿಮನಿ, ಕಿಶೋರಕುಮಾರ ಎಸ್‌. ಅಮೀನ್‌-ಶೀಮಾರೇಣುಕಾ ಮಾದರ,ದುರಗಪ್ಪ ಭೀಮಪ್ಪ ದೊಡಮನಿ-ಹುಚ್ಚವ್ವ ಶಿವಕ್ಕ ಮಲ್ಲಪೂರ,

ರವೀಂದ್ರ ಮುತ್ತಪ್ಪ ಮಾದರ-ಚೆನ್ನಮ್ಮ ಹೆಬ್ಬಳ್ಳೆವ್ವ ಮಾದರ, ಲಕ್ಷ್ಮೀಶ ಹರಿದಾಸ ಭಟ್‌ -ಹೀರಾ ಶಶಿಕಲಾ ನೀಲನಾಯಕ್‌, ರಾಜಪ್ಪ ಸೋಮಪ್ಪ ನಡಗೇರಿ-ರೇಣುಕಾ ಮರಗವ್ವ ಕೆಳಗಡೆ, ಲಕ್ಷ್ಮಣ ಮಾದೇವ ದೊಡಮನಿ-ಸೌಮ್ಯ ರೇಖಾ ದೊಡಮನಿ, ವಿನಾಯಕ ನಡೋಣಿ-ಲಕ್ಷ್ಮೀ ಹಮ್ಮಿನವರ.

ವಿವಿಧ ಸೌಲಭ್ಯ ವಿತರಣೆ :  ದೀನ್‌ ದಯಾಳ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದಡಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಗ್ರಾಪಂ ಮಹಿಳಾ ಒಕ್ಕೂಟಗಳಾದ ಗಲಗಲಿಯ ಭಾರತಾಂಬೆ ಸಂಜೀವನಿ ಒಕ್ಕೂಟ (ಪ್ರಥಮ, 2 ಲಕ್ಷ ಪುರಸ್ಕಾರ), ಕಟಗೇರಿಯ ಚಾಮುಂಡೇಶ್ವರಿ ಸಂಜೀವಿನಿ ಒಕ್ಕೂಟಕ್ಕೆ (ದ್ವಿತೀಯ, 1ಲಕ್ಷ ಪುರಸ್ಕಾರ), ಅಮರಾವತಿ ಅವರಜ್ಯೋತಿ ಸಂಜೀವಿನಿ ಒಕ್ಕೂಟಕ್ಕೆ (ತೃತೀಯ, 50 ಸಾವಿರ ಪುರಸ್ಕಾರ). ದೇವದಾಸಿ ಮಹಿಳೆಯರಿಗೆ ಜಿಪಂ ಎನ್‌.ಆರ್‌.ಎಲ್‌.ಎಮ್‌ ದಡಿ 5 ಜನರಿಗೆ, ಗ್ರಾಪಂ ಎಸ್‌ಸಿ-ಎಸ್ಟಿ ಅನುದಾನದಡಿಯಲ್ಲಿ 8 ಜನ ಮಾಜಿ ದೇವದಾಸಿ ಮಹಿಳೆಯರಿಗೆ ಟೇಲರಿಂಗ್ ಮಸೀನ್‌, ಉದ್ಯೋಗ ಖಾತ್ರಿ ಯೋಜನೆಯಡಿ ಹೆ„ನುಗಾರಿಕೆ ಸ್ವ-ಉದ್ಯೋಗ ಚಟುವಟಿಕೆ ಕೈಗೊಳ್ಳುತ್ತಿರುವ 132 ಮಾಜಿ ದೇವದಾಸಿ ಫಲಾನುಭವಿಗಳಿಗೆ ಕಾಮಗಾರಿ ಮಂಜೂರಾತಿ ಆದೇಶ ಪ್ರಮಾಣ ಪತ್ರ ವಿತರಣೆ, ಜಿಲ್ಲಾ ವಿಶೇಷ ಚೇತನರ ಇಲಾಖೆ ಅಡಿಯಲ್ಲಿ 10 ಜನ ವಿಶೇಷ ಚೇತನ ಮಾಜಿ ದೇವದಾಸಿ ಮಹಿಳೆಯರಿಗೆ ಸ್ವ-ಉದ್ಯೋಗ ಚಟುವಟಿಕೆ ಅಡಿಯಲ್ಲಿ ಸಾಲ ಮತ್ತು ಸಹಾಯಧನ ಪ್ರಮಾಣ ಪತ್ರ ವಿತರಿಸಲಾಯಿತು. ವಸತಿ ಯೋಜನೆಯಡಿ 80 ಜನ ಮಾಜಿ ದೇವದಾಸಿ ಮಹಿಳೆಯರಿಗೆ ಮನೆ ಮಂಜೂರಾತಿ ಪ್ರಮಾಣ ಪತ್ರ, ದೇವದಾಸಿ ಪುನರ್ವಸತಿ ಯೋಜನೆ ಇಲಾಖೆಯಡಿ ಆದಾಯ ಉತ್ಪನ್ನಕರ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಪ್ರಮಾಣ ಪತ್ರ ವಿತರಿಸಲಾಯಿತು.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dee

Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ

ರಬಕವಿ-ಬನಹಟ್ಟಿ: ಜಗದಾಳ ರೈತನ ಬಾಳೆಹಣ್ಣು ಇರಾನ್‌ ದೇಶಕ್ಕೆ ರಫ್ತು

ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್‌ ದೇಶಕ್ಕೆ ರಫ್ತು!

ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ

ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ

9-

Rabakavi: ರೈತರ ಬದುಕಿನ ರೊಟ್ಟಿಯನ್ನು ಕಾಂಗ್ರೆಸ್ ಕಸಿದುಕೊಳ್ಳುತ್ತಿದೆ: ಶಾಸಕ ಸಿದ್ದು ಸವದಿ

7-rabakavi

Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.