ವಿದ್ಯುತ್ ಶುಲ್ಕ ಪಾವತಿ ಹೊಣೆ ಪಂಚಾಯಿತಿಗಳದ್ದು
ಉದಯವಾಣಿ ಸರಣಿ ವರದಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ;ಸರ್ಕಾರಿ ವ್ಯವಸ್ಥೆಯಲ್ಲೇ ವಿದ್ಯುತ್ ಬಾಕಿ ಸರಿಯಲ್ಲ
Team Udayavani, Nov 14, 2022, 3:13 PM IST
ಬಾಗಲಕೋಟೆ: ಹೆಸ್ಕಾಂಗೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಶುಲ್ಕ ಪಾವತಿಯ ಹೊಣೆ ಆಯಾ ಗ್ರಾಪಂಗಳಿಗೆ ಸಂಬಂಧಿಸಿದ್ದು. ಅದು ಗ್ರಾಪಂ ಆಡಳಿತ ಮಂಡಳಿ ಜವಾಬ್ದಾರಿ ಕೂಡ. ಈ ನಿಟ್ಟಿನಲ್ಲಿ ಬಾಕಿ ಉಳಿಸಿರುವ ವಿದ್ಯುತ್ ಶುಲ್ಕ ಬಾಕಿ ಪಾವತಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಪಂ ಸಿಇಒ ಟಿ. ಭೂಬಾಲನ್ ತಿಳಿಸಿದರು.
ಉದಯವಾಣಿಯಲ್ಲಿ ಕಳೆದ 8 ದಿನಗಳಿಂದ ಹೆಸ್ಕಾಂಗೇ ವಿದ್ಯುತ್ ಶಾಕ್! ಎಂಬ ಸರಣಿ ವರದಿಗೆ ಸ್ಪಂದಿಸಿ ಮಾತನಾಡಿದ ಅವರು, ಪಂಚಾಯಿತಿ ವ್ಯವಸ್ಥೆಯಲ್ಲಿ ಮೂರು ಹಂತದ ಆಡಳಿತ ವ್ಯವಸ್ಥೆ ಇದೆ. ಗ್ರಾಪಂ ವ್ಯಾಪ್ತಿಯ ವಿದ್ಯುತ್ ಬೀದಿದೀಪ, ಕುಡಿಯುವ ನೀರು ಪೂರೈಕೆಗೆ ಸಂಪರ್ಕ ಕಲ್ಪಿಸಿದ ವಿದ್ಯುತ್ ಬಾಕಿ ಪಾವತಿಸಲು ಪ್ರತಿಯೊಂದು ಗ್ರಾಪಂಗಳಿಗೂ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯ 195 ಗ್ರಾಪಂಗಳಲ್ಲಿ ತಲಾ 10ಲಕ್ಷಕ್ಕೂ ಅಧಿಕ ಬಾಕಿ ಉಳಿಸಿಕೊಂಡ ಗ್ರಾಪಂಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವ ಕುರಿತು ನಿಖರ ಮಾಹಿತಿ ಇಲ್ಲ. ಆದರೆ ಬಾಕಿ ಪಾವತಿ ಮಾಡಬೇಕಿರುವುದು ಗ್ರಾಪಂಗಳ ಹೊಣೆ. ಜಿಲ್ಲೆಯ ಕೆಲವು ಗ್ರಾಪಂಗಳು ಪ್ರತಿ ತಿಂಗಳು ನಿರಂತರವಾಗಿ ವಿದ್ಯುತ್ ಶುಲ್ಕ ಬಾಕಿ ಪಾವತಿ ಮಾಡುತ್ತಿವೆ. ಆದರೆ ಕೆಲವು ಪಂಚಾಯಿತಿಗಳು ಹೆಚ್ಚಿನ ಬಾಕಿ ಉಳಿಸಿಕೊಂಡಿವೆ. ಈ ವಿಷಯದಲ್ಲಿ ಗ್ರಾಪಂ ಪಿಡಿಒಗಳೇ ಪೂರ್ಣ ಪ್ರಮಾಣದ ಹೊಣೆಗಾರರಲ್ಲ. ಆಯಾ ಗ್ರಾಪಂಗಳ ಆಡಳಿತ ಮಂಡಳಿ ಸಂಪೂರ್ಣ ಹೊಣೆಗಾರಿಕೆಯಾಗುತ್ತದೆ ಎಂದರು.
ನ.16ರಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿರುವ ಗ್ರಾಪಂಗಳು, ಕೂಡಲೇ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ 15ನೇ ಹಣಕಾಸು ಯೋಜನೆಯಡಿ ಪಾವತಿಸಬಹುದು. ಇದು ಬರೀ ಪಿಡಿಒಗಳು ಮಾತ್ರ ಕ್ರಮ ಕೈಗೊಳ್ಳಲು ಆಗಲ್ಲ. ಗ್ರಾಪಂ ಆಡಳಿತ ಮಂಡಳಿಗಳು, ಕೂಡಲೇ ಸಭೆ ನಡೆಸಿ ವಿದ್ಯುತ್ ಶುಲ್ಕ ಬಾಕಿ ಪಾವತಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡ ಗ್ರಾಪಂಗಳು ಬಾಕಿ ಪಾವತಿಸಬೇಕು. ಗೃಹ ಬಳಕೆ ಅಥವಾ ಇನ್ಯಾವುದೇ ವ್ಯವಸ್ಥೆಯಲ್ಲಿ ವಿದ್ಯುತ್ ಬಾಕಿ ಉಳಿಸಿಕೊಂಡರೆ ತಕ್ಷಣ ಕೈಗೊಂಡು, ಸಂಪರ್ಕ ಕಡಿತಗೊಳಿಸಲಾಗುತ್ತದೆ. ಆದರೆ ಗ್ರಾಪಂಗಳೇ ಕೋಟಿ ಕೋಟಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. –ಬಸವರಾಜ ಧರ್ಮಂತಿ, ಕರವೇ ಜಿಲ್ಲಾ ಅಧ್ಯಕ್ಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.