ಢಾಣಕಶಿರೂರ ಗ್ರಾಮದ ಜನ ಸದ್ಯ ನಿರಾಳ
Team Udayavani, May 9, 2020, 11:28 AM IST
ಬಾಗಲಕೋಟೆ: ಒಂದೇ ಗ್ರಾಮದಲ್ಲಿ ಬರೋಬ್ಬರಿ 16 ಜನರಿಗೆ ಕೋವಿಡ್ ವೈರಸ್ ದೃಢಪಟ್ಟ ಢಾಣಕಶಿರೂರ ಗ್ರಾಮಸ್ಥರು ಸದ್ಯ ನಿರಾಳರಾಗಿದ್ದು, ಈ ಗ್ರಾಮದಿಂದ ಕಳುಹಿಸಿದ್ದ ಒಟ್ಟು 266 ಸ್ಯಾಂಪಲ್‌ಗಳೂ ನೆಗೆಟಿಟ್ ಬಂದಿವೆ.
ಗ್ರಾಮದ 23 ವರ್ಷದ ಐದು ತಿಂಗಳ ಗರ್ಭಿಣಿ ಮಹಿಳೆ ಪಿ-607ಗೆ ಮೇ 3ರಂದು ಸೋಂಕು ಖಚಿತಪಟ್ಟಿತ್ತು. ಅದಾದ ಬಳಿಕ ಗ್ರಾಮದಲ್ಲಿ ಬರೋಬ್ಬರಿ 16 ಜನರಿಗೆ ಸೋಂಕು ವಿಸ್ತರಿಸಿದೆ. ಮಹಿಳೆಯೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕ ಹೊಂದಿದ್ದ ಒಟ್ಟು 184 ಜನ ಹಾಗೂ ಬಾದಾಮಿ ಪಟ್ಟಣದ 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಜತೆಗೆ ಸಂಪರ್ಕ ಹೊಂದಿದ್ದ 40 ಜನರು ಒಳಗೊಂಡ ಒಟ್ಟು ಜಿಲ್ಲೆಯಿಂದ ಕಳುಹಿಸಿದ್ದ 269 ಸ್ಯಾಂಪಲ್‌ಗಳಲ್ಲಿ 266 ಸ್ಯಾಂಪಗಳು ನೆಗೆಟಿವ್ ಬಂದಿವೆ.
47 ಸ್ಯಾಂಪಲ್ ಪರೀಕ್ಷೆಗೆ: ಜಿಲ್ಲೆಯಿಂದ ಕಳುಹಿಸಿದ್ದ 269 ಸ್ಯಾಂಪಲ್‌ಗಳಲ್ಲಿ 266 ವರದಿ ನೆಗೆಟಿವ್ ಬಂದಿದ್ದು, ಬಾಕಿ ಇರುವ 3 ಹಾಗೂ ಗುರುವಾರ ಮತ್ತೆ 47 ಸೇರಿದಂತೆ ಒಟ್ಟು 50 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಜಿಲ್ಲೆಯಿಂದ ಈ ವರೆಗೆ 4068 ಜನರ ಸ್ಯಾಂಪಲ್ ಕಳುಹಿಸಿದ್ದು, ಅದರಲ್ಲಿ 3962 ಸ್ಯಾಂಪಲ್ ನೆಗೆಟಿವ್, 51 ಪಾಜಿಟಿವ್ ಬಂದಿವೆ. 1876 ಜನರು ಪ್ರತ್ಯೇಕವಾಗಿ ನಿಗಾದಲ್ಲಿದ್ದು, 18 ಜನರು ಕೋವಿಡ್ ಮುಕ್ತರಾಗಿ ಬಿಡುಗಡೆಗೊಂಡಿದ್ದಾರೆ. ಅಲ್ಲದೇ 198 ಜನರು 28 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ರಾಜೇಂದ್ರ ತಿಳಿಸಿದ್ದಾರೆ.
ಕಾರ್ಮಿಕರಿಗೆ ಕ್ವಾರಂಟೈನ್ ಕಡ್ಡಾಯ: ಮಹಾರಾಷ್ಟ್ರದ ಪುಣೆ, ಮುಂಬೈನಿಂದ ಕಾರ್ಮಿಕರು ಮರಳಿ ಬರುತ್ತಿದ್ದು, ಅವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಿ, ಹೋಂ ಕ್ವಾರಂಟೈನ್ ನಡೆಸಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಪುಣೆ ಮತ್ತು ಮುಂಬಯಿ ನಂತಹ ನಗರಗಳಲ್ಲಿ ಹೆಚ್ಚಾಗಿ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಈ ನಗರಗಳಿಂದ ಆಗಮಿಸಿದ 90 ಜನರನ್ನು ಪ್ರತ್ಯೇಕ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಕಾಮಗಾರಿ ಆರಂಭಿಸಲ್ಲ: ಜಿಲ್ಲೆಯ ವಿವಿಧ ಟೆಂಡರ್‌ಗಳಿಗೆ ವರ್ಕ್ ಆರ್ಡರ್ ನೀಡಿದರೂ ಸಹ ಆರಂಭಿಸದಿರಲು ಹಣಕಾಸು ಇಲಾಖೆಯಿಂದ ಆದೇಶ ಬಂದಿರುತ್ತದೆ. ಕೇವಲ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತ್ತಿದ್ದು, ಇದರ ಮೂಲಕ ಕಾರ್ಮಿಕರಿಗೆ ಕೂಲಿ ನೀಡಲಾಗುತ್ತದೆ. ಕಡುಬಡವರಿಗೆ ಪಡಿತರ ಹಾಗೂ ಸಂಘ ಸಂಸ್ಥೆಗಳಿಂದ ಸಹಾಯಧನ ನೀಡಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.