ಅಂಬಿಗರ ಚೌಡಯ್ಯನವರ ಆದರ್ಶ ಪರಿಪಾಲಿಸಿ
Team Udayavani, Jan 23, 2021, 4:43 PM IST
ಹುನಗುಂದ: 12ನೆಯ ಶತಮಾನದ ಶಿವಶರಣ ರಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟ ವಚನಗಳ ಮೂಲಕ ಹೆಸರಾದ ನಿಜಶರಣ ಅಂಬಿಗರ ಚೌಡಯ್ಯನವರ ಆದರ್ಶಪ್ರಾಯವಾದ ಬದುಕು ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ತಹಶೀಲ್ದಾರ್ ಬಸವರಾಜ ನಾಗರಾಳ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನದ ಮೂಲಕ ನಾಡಿಗೆ ತಿಳಿಸಿ ಹೆಸರಾದವರು. ಬಸವಣ್ಣವರು ಕಟ್ಟಿದ ಮೊದಲ ಸಂಸತ್ತಿನ ಸಮಾನ ಭೂಮಿಕೆಯಲ್ಲಿ ನಿಂತುಕೊಂಡು ಅವರ ಸರಿಸಮಾನ ಶಿವಶರಣರ ವಚನಗಳಿಗಿಂತ ವಿಶಿಷ್ಟ ಶೈಲಿಯಲ್ಲಿ ವಚನ ರಚಿಸಿದ್ದಾರೆ. ಅವರ ಪ್ರತಿಯೊಂದು ವಚನಗಳಲ್ಲಿ ಅಂದಿನ ಗೊಡ್ಡು ಸಂಪ್ರದಾಯವನ್ನು ವಚನದ ಮೂಲಕ ಕಳಚುವ ಬಹುದೊಡ್ಡ ಪ್ರಯತ್ನ ಮಾಡುವುದರ ಜತೆಗೆ ಸಮಾಜ ಶುದ್ಧೀಕರಣಕ್ಕಾಗಿ ಕಾರ್ಯ ಮಾಡಿದ್ದಾರೆ ಎಂದರು.
ಇದನ್ನೂ ಓದಿ:ಅಣಬೆ ಬೇಸಾಯದಿಂದ ಆದಾಯ ಹೆಚ್ಚಳ: ರಾಮರಾವ್
ಅಂಬಿಗರ ಸಮಾಜದ ತಾಲೂಕು ಅಧ್ಯಕ್ಷ ವಿಠಲ ಹಿರೇಹೊಳ್ಳಿ ಮಾತನಾಡಿ, ಅಂದಿನ ಸಮಾಜ ಮತ್ತು ಧರ್ಮಗಳಲ್ಲಿರುವ ಲೋಪದೋಷಗಳನ್ನು ಗ್ರಾಮೀಣ ಭಾಷೆಯಲ್ಲಿ ವಚನಬರೆಯುವ ಮೂಲಕ ಧರ್ಮ ಸುಧಾರಿಸುವ ಕಾರ್ಯ ಮಾಡಿದ ನಿಜಶರಣ ಅಂಬಿಗರ ಚೌಡಯ್ಯನವರ ಕಾರ್ಯ ಶ್ಲಾಘನೀಯ ಎಂದರು.
ಅಂಬಿಗರ ಸಮುದಾಯದ ಮುಖಂಡರಾದ ಲಕ್ಷ್ಮಪ್ಪ ಹುನಗುಂದ, ಸಂಗಪ್ಪ ಕಪನೂರ, ಸೋಮಪ್ಪ ಹುನಗುಂದ, ವಿಠಲ ಬಾರಕೇರ, ಶಿವಪುತ್ರಪ್ಪ ಹುನಗುಂದ, ಮಾರುತಿ ಹುನಗುಂದ, ವಿಜಯ ದಳವಾಯಿ, ರಾಮು ಹುನಗುಂದ, ರವಿ ಹುನಗುಂದ, ದೇವೇಂದ್ರ ಹುನಗುಂದ, ಹನಮಂತ ಬಾರಕೇರಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
Mudhol: ಬಸ್ ಗೆ ಡಿಕ್ಕಿ ಹೊಡೆದ ಬೈಕ್… ಸವಾರರಿಗೆ ಗಂಭೀರ ಗಾಯ
MUST WATCH
ಹೊಸ ಸೇರ್ಪಡೆ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.