ಮಲಪ್ರಭಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿ ರಕ್ಷಣೆ
Team Udayavani, Sep 16, 2021, 6:25 PM IST
ಬಾಗಲಕೋಟೆ : ಕುಳಗೇರಿ ಕ್ರಾಸ್ ನ ಗೋವನಕೊಪ್ಪ ಬಳಿ ಮಲಪ್ರಭಾ ನದಿ ಮಧ್ಯೆ 2 ಗಂಟೆಗಳ ಕಾಲ ಮುಳ್ಳಿನಕಂಟಿಯಲ್ಲಿ ಆಶ್ರಯ ಪಡೆದ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ನದಿಯಲ್ಲಿ ಸ್ನಾನಕ್ಕೆಂದು ತೆರಳಿ ಕಾಲುಜಾರಿ ಬಿದ್ದಿದ್ದ ಕೊಣ್ಣೂರ ಗ್ರಾಮದ ನಿವಾಸಿ ಬಸಪ್ಪ ಫಕ್ಕೀರಪ್ಪ ತಳವಾರ, ನೀರಿನಲ್ಲಿ ಕೊಚ್ಚಿ ಹೋಗಿ ನದಿಯಲ್ಲಿದ್ದ ಮುಳ್ಳಿನ ಕಂಟಿಯನ್ನೇ ಆಶ್ರಯಿಸಿ ನಿಂತಿದ್ದ. ಈ ಕುರಿತು ಸ್ಥಳೀಯರಿಂದ ಅಗ್ನಿಶಾಮಕ ದಳ ತಂಡಕ್ಕೆ ಮಾಹಿತಿ ನೀಡಲಾಗಿತ್ತು.
ಬಾದಾಮಿಯಿಂದ ಗೋವನಕೊಪ್ಪ ಗ್ರಾಮಕ್ಕೆ ಆಗಮಿಸಿದ ಅಗ್ನಿಶಾಮಕ ದಳ. ಕಾರ್ಯಾಚರಣೆ ನಡೆಸಿ ಬಸಪ್ಪನನ್ನು ರಕ್ಷಿಸಿದೆ.
ಇನ್ನು ನಿನ್ನೆಯಿಂದ ಮಲಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ಸ್ ನೀರಿನ ಹರಿವು ಹಿನ್ನೆಲೆ ಹೆಚ್ಚಳವಾಗಿದ್ದ ನೀರಿನ ಪ್ರಮಾಣ ಹೆಚ್ಚಾಗಿತ್ತು. ಪ್ರವಾಹದ ನೀರು ಬರುತ್ತಿದ್ದಂತೆ ಬಾದಾಮಿ ತಹಶೀಲ್ದಾರ ಸುಹಾಸ ಇಂಗಳೆ, ಕಂದಾಯ ನಿರೀಕ್ಷಕ ಎ ಡಿ ಸಾರವಾಡ, ಗ್ರಾಮ ಲೇಕ್ಕಾಧಿಕಾರಿ ಎಸ್ ಜಿ ದ್ಯಾಪೂರ, ತೌಶೀಫ್ ಧಾರವಾಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿಕೊಟ್ಟಿದ್ದು, ನದಿ ದಡದಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.