ನಾಳೆ ಜನತಾ ಜಲಧಾರೆ ಸಂಕಲ್ಪ ಸಮಾವೇಶ-ಭರದ ಸಿದ್ಧತೆ
ಮೇ 9- 13: ಜನತಾ ಜಲಧಾರೆ
Team Udayavani, May 8, 2022, 11:20 AM IST
ಬಾದಾಮಿ: ಮೇ 9ರಂದು ಬೆಳಗ್ಗೆ 11 ಗಂಟೆಗೆ ಪಟ್ಟಣದ ಎಪಿಎಂಸಿ ಎದುರಿನ ಕುಂದಗೋಳ ಆವರಣದ ಜನತಾ ಜಲಧಾರೆ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ಪಟ್ಟಣದ ಹೊರವಲಯದ ಎಪಿಎಂಸಿ ಎದುರಿನ ಕುಂದಗೋಳ ಆವರಣದಲ್ಲಿ ಸಮಾವೇಶದ ಪೂರ್ವ ಸಿದ್ಧತೆಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಸೋಮವಾರ ಬೆಳಿಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 11 ಗಂಟೆಗೆ ಕುಮಾರಸ್ವಾಮಿಯವರು ಶಿವಯೋಗಮಂದಿರದ ಮಲಪ್ರಭಾ ನದಿಯಲ್ಲಿ ಪೂಜೆ ಮಾಡಿ ರಥದಲ್ಲಿರುವ ಕಳಸಕ್ಕೆ ಪೂಜೆ ಮಾಡಿ ಹಾನಗಲ್, ಸದಾಶಿವ ಶ್ರೀಗಳ ದರ್ಶನ ಪಡೆದು ಬಾದಾಮಿಗೆ ಆಗಮಿಸಲಿದ್ದಾರೆ. ನಂತರ ಬಾದಾಮಿ ನಗರದ ಕಬ್ಬಲಗೇರಿ ಕ್ರಾಸ್ ನಿಂದ ಮುಖ್ಯರಸ್ತೆಯ ಮೂಲಕ ಒಂದು ಸಾವಿರ ಮಹಿಳೆಯರ ಕುಂಭ, ಸಂಗೀತ ವಾದ್ಯಗಳ ಮೂಲಕ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಲಿದೆ.
2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜನರು ಜೆಡಿಎಸ್‌ಗೆ ಅಧಿ ಕಾರ ನೀಡಿದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಬದ್ಧವಾಗಿದೆ. ಕೃಷ್ಣಾ ಯೋಜನೆಯ ಬಿ ಸ್ಕಿಂನಲ್ಲಿ ನೀರನ್ನು ಬಳಕೆ ಮಾಡಲು ಮೂರನೇ ಹಂತದ ಯೋಜನೆ ಜಾರಿ ಅಗತ್ಯವಾಗಿದ್ದು, ಜನರು ಆಶೀರ್ವಾದ ಮಾಡಿ ಜೆಡಿಎಸ್‌ಗೆ ಅಧಿ ಕಾರ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯದ 15 ಕಡೆಗಳಲ್ಲಿ ನಡೆದ ಜನತಾ ಜಲಧಾರೆಯ ರಥದಲ್ಲಿ ಸಂಗ್ರಹ ಮಾಡಿದ ಕಳಸವನ್ನು ತಂದು ಬೆಂಗಳೂರಿನ ನೆಲಮಂಗಲದಲ್ಲಿ ಮೇ 13ರಂದು ಸಮಾರೋಪ ಸಮಾರಂಭ ನಡೆಯಲಿದೆ. ಪ್ರತಿ ದಿನ ಜೆಡಿಎಸ್ ಕಚೇರಿಯಲ್ಲಿ ಜಲ ಪೂಜಾ ಕಾರ್ಯಕ್ರಮ ಇದ್ದು, ನೀರಾವರಿ ಯೋಜನೆ ಜಾರಿಗೊಳಿಸಲು 2023ರಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡಬೇಕು ಎಂದು ಹೇಳಿದರು.
ಮುಖಂಡರಾದ ಪ್ರಕಾಶ ಗಾಣಿಗೇರ, ವಿರುಪಾಕ್ಷಪ್ಪ ಹುಲ್ಲೂರ, ಎಂ.ಎಸ್.ಹಿರೇಹಾಳ, ಪುಂಡಲೀಕ ಕವಡಿಮಟ್ಟಿ, ಹುಚ್ಚೇಶ ಹದ್ದನ್ನವರ, ಕುಮಾರಗೌಡ ಪಾಟೀಲ, ಮಲ್ಲಪ್ಪ ಅಂಬಿಗೇರ, ಮುತ್ತಪ್ಪ ಗಾಡಗೊಳ್ಳಿ, ಬಸವರಾಜ ಕೋಟಿ, ಶಿವಾನಂದ ಮೆಣಸಗಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.