ಅಲೆ ಮಧ್ಯೆ ಸ್ಥಳೀಯರೆಂಬ ಪ್ರತಿಷ್ಠೆ!

ಈ ಕ್ಷೇತ್ರಕ್ಕಿದೆ ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯ ಬದಲಿಸಿದ ಖ್ಯಾತಿ

Team Udayavani, Apr 17, 2019, 11:39 AM IST

bag-2

ಹುನಗುಂದ: ಬೇಸಿಗೆಯ ಬಿರು ಬಿಸಲಿನ ನಡುವೆ ಹುನಗುಂದ ವಿಧಾನಸಭೆಯ ಕ್ಷೇತ್ರದಲ್ಲಿ ಲೋಕಾ ಚುನಾವಣೆಯ ಕಾವು ತಾರಕಕ್ಕೇರುತ್ತಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಹಾಗೂ ಇತರ ಪಕ್ಷಗಳು ಮತದಾರ ಪ್ರಭುಗಳ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

ಈ ಚುನಾವಣೆಯಲ್ಲಿ ಹುನಗುಂದ ವಿಧಾನಸಭೆ ಕ್ಷೇತ್ರವು ಅತೀ ಪ್ರತಿಷ್ಠತೆ ಕಣವಾಗಿದೆ. ಲೋಕಸಭೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಪಕ್ಷಗಳ ಅಭ್ಯರ್ಥಿ ವೀಣಾ ಕಾಶಪ್ಪನವರ, ಇದೇ ಕ್ಷೇತ್ರದವರಾಗಿದ್ದರಿಂದ ಚುನಾವಣೆ ಕಣ, ಮತ್ತಷ್ಟು ಕಾವು ಪಡೆದಿದೆ. ವೀಣಾ ಅವರ ಪತಿಯ ಹೊರಟುತನ ಸ್ವಭಾವವೇ ಕೈ ಅಭ್ಯರ್ಥಿಗೆ ಹಿನ್ನೆಡೆಯಾಗುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿ ಬರುತ್ತಿದೆ.

ಈ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ಘಟಾನುಘಟಿ ನಾಯಕರ ರಾಜಕೀಯ ಭವಿಷ್ಯ ಬದಲಿಸಿದ ಖ್ಯಾತಿ ಹೊಂದಿದೆ. ಈ ಕ್ಷೇತ್ರ ರೈತರ, ನೇಕಾರರು ಹಾಗೂ ವ್ಯವಹಾರಿಕ ಜನ ಅಧಿಕ ಸಂಖ್ಯೆಯಲ್ಲಿದ್ದು, ಇಳಕಲ್ಲ ಸೀರೆ, ಕೆಂಪು ಗ್ರಾನೈಟ್‌ ಮೂಲಕ ಜಗತøಸಿದ್ದಿ ಪಡೆದಿದೆ. ಇಲ್ಲಿನ ಮತದಾರರು ಯಾವಾಗ ಯಾರನ್ನು ಮೇಲೆತ್ತಿ ಆಯ್ಕೆ ಮಾಡುತ್ತಾರೋ, ಯಾವಾಗ ಪಾತಳಕ್ಕೆ ತುಳಿಯುತ್ತಾರೆ ಎಂಬ ನಾಡಿಮಿಡಿತ ತಿಳಿಯುವುದು ಸುಲಭವಲ್ಲ. ಡಾ|ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕು ಎಂಬ ಹಣಿಪಟ್ಟಿ ಕಟ್ಟಿಕೊಂಡಿದ್ದು, ಇಲ್ಲಿನ ರೈತರ ನಿರಂತರ ಹೋರಾಟದಿಂದ ಮರೋಳ ಏತ ನೀರಾವರಿ ಮೊದಲ ಹಂತದ ಕಾಲುವೆ ನೀರಾವರಿ, 2ನೇ ಹಂತದ ಅತೀ ದೊಡ್ಡ ಹನಿ ನೀರಾವರಿ ಯೋಜನೆ ಜಾರಿಗೆ ತಂದು ಅನುಷ್ಠಾನಗೊಳ್ಳಿಸಿದರೂ ಕಳಪೆ ಕಾಮಗಾರಿಯಿಂದ ತಾಲೂಕಿನ ಚಿತ್ರಣ ಮಾತ್ರ ಬದಲಾಗಿಲ್ಲ.

ಕ್ಷೇತ್ರದ ಜ್ವಲಂತ ಸಮಸ್ಯೆಗಳು: ಸತತ ಕಾಶಪ್ಪನವರ ಕುಟುಂಬದವರು ನಿರಂತರ ಆಡಳಿತ ಮಾಡುತ್ತ ಬಂದಿದ್ದು.ದಿ.ಎಸ್‌. ಆರ್‌.ಕಾಶಪ್ಪನವರ ಮೂರು ಬಾರಿ ಶಾಸಕ ಮತ್ತು ಮಂತ್ರಿಯಾಗಿದ್ದರೆ, ಅವರ ಪತ್ನಿ ಗೌರಮ್ಮ ಕಾಶಪ್ಪನವರ ಒಂದು ಬಾರಿ ಶಾಸಕಿಯಾಗಿದ್ದರು.

ವಿಜಯಾನಂದ ಕಾಶಪ್ಪನವರ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಬಿಜೆಪಿಯ ದೊಡ್ಡನಗೌಡ ಪಾಟೀಲರು ಸದ್ಯ ಮೂರನೆಯ ಬಾರಿಗೆ ಶಾಸಕರಾಗಿ ಕ್ಷೇತ್ರದ ಆಡಳಿತ ಹೊಣೆ ಹೊತ್ತಿದ್ದಾರೆ. ಆದರೂ ಇಲ್ಲಿನ ಜ್ವಲಂತ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿವೆ.

ಸತತ ಮೂರು ನಾಲ್ಕು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎನ್ನುವ ಕೊರಗು ಒಂದು ಕಡೆಯಾದರೆ, ಇನ್ನೊಂದಡೆ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳು ಮುಳಗಡೆಯಾಗಿ ಹತ್ತು ವರ್ಷಗಳಿಂದ ಸೂರು ಇಲ್ಲದೆ ಶೆಡ್ಡಿನಲ್ಲಿಯೇ ಕಾಲ ಕಳೆಯುವ ಪರಸ್ಥಿತಿ ಮುಂದುವರಿದಿದೆ.ಯಾವ ಶಾಸಕ ಮತ್ತು ಸಂಸದರು ಅವರ ಕಷ್ಟ ಸಂಕಷ್ಟ ಕೇಳುತ್ತಿಲ್ಲ, ನದಿ ಪಾತ್ರದಲ್ಲದೇ ಇರುವ 23 ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಂದಿಗೂ ತಪ್ಪಿಲ್ಲ, ಕೇಂದ್ರ ಸರ್ಕಾರ ರೈತರ ಬೆಳೆ ಹಾನಿಗೆ ಬಿಡುಗಡೆ ಮಾಡಿದ ಫಸಲ ಬೀಮಾ ಯೋಜನೆಯ ಹಣ ರೈತರ ಖಾತೆಗೆ ಜಮಾ ಆಗಿಲ್ಲ. ಇಸ್ರೇಲ್‌ ಮಾದರಿಯ ಏಷ್ಯಾ ಖಂಡದ ಅತೀ ದೊಡ್ಡ ಹನಿ ನೀರಾವರಿ ಯೋಜನೆ ಕಳಪೆ ಕಾಮಗಾರಿಯಿಂದ ಹಳ್ಳ ಹಿಡಿದಿದೆ. ಈ ತಾಲೂಕಿನ ಮಹತ್ವದ ಯೋಜನೆ ಆಲಮಟ್ಟಿಯಿಂದ ಕೊಪ್ಪಳ ರೈಲು ಮಾರ್ಗದ ಬಹುದಿನದ ಬೇಡಿಕೆಯಾಗಿದ್ದು, ಅದನ್ನು ಮೂರು ಬಾರಿ ಸಂಸದರಾಗಿ ಈ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸಿದರೂ ಅದನ್ನು ಜಾರಿಗೆ ತರುವ ಕಾರ್ಯ ಮಾತ್ರ ಆಗಿಲ್ಲ ಎಂಬ ಬೇಸರ ಮತದಾರರಲ್ಲಿದೆ.

ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಜಾತಿ ಸಮೀಕರಣದ ಆಧಾರದ ಮೇಲೆ ಟಿಕೆಟ್‌ ಹಂಚಿಕೆ ಮಾಡುತ್ತಿರುವುದು ನೋಡಿದರೆ ಯಾವ ಪಕ್ಷದಲ್ಲೂ ಜಾತ್ಯತೀತ ನಿಲುವು ಎದ್ದು ಕಾಣುತ್ತಿಲ್ಲ. ಚುನಾವಣೆಗೆನಿಂತ ಅಭ್ಯರ್ಥಿಗಳಿಗೆ ನಿರ್ದಿಷ್ಟವಾದ ಗುರಿಯಿಲ್ಲ ಎಂಬುದು ಕ್ಷೇತ್ರದ ಜನತೆಯ ಅಭಿಪ್ರಾಯವಾಗಿದೆ.

ಈ ಕ್ಷೇತ್ರ ಹಲವು ನೈಸರ್ಗಿಕ ಸಂಪನ್ಮೂಲ ಹೊಂದಿದ್ದರೂ ಕೈಗಾರಿಕೆ ಸ್ಥಾಪನೆಯಾಗದಿರುವುದರಿಂದ ಸಂಪನ್ಮೂಲ ವ್ಯರ್ಥ್ಯವಾಗುತ್ತಿದೆ ಮತ್ತು ಸಾವಿರಾರು ನಿರುದ್ಯೋಗಿ ಯುವಕರು ಕೆಲಸವಿಲ್ಲದೇ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಎಂಬುದು ಮತದಾರ ಬೇಸರದ ವಿಷಯ. ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ 2 ವರ್ಷ 8 ತಿಂಗಳ ಜಿಪಂ ಅಧ್ಯಕ್ಷೆಯಾಗಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಮಾಜಿ ಸಿ.ಎಂ ಸಿದ್ದರಾಮಯ್ಯನವರ ಸರ್ಕಾರದ ಜನಪರ ಕಾರ್ಯ ಮುಂದಿಟ್ಟಕೊಂಡು ಮತಯಾಚಿಸುತ್ತಿದ್ದು, ಇವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ ಕಳೆದ ಲೋಕಸಭೆಯಲ್ಲಿ ಬಿಜೆಪಿಯ ಗದ್ದಿಗೌಡರಿಗೆ ಕೈ ಹಿಡಿದಿದ್ದ
ಲಿಂಗಾಯತ ಸಮುದಾಯ, ಈ ಬಾರಿ ಕಾಂಗ್ರೆಸ್‌ ಕಡೆ ವಾಲುವ ಲಕ್ಷಣಗಲಿವೆ.

ಇನ್ನು ತಾಲೂಕಿನ ಉಪನಾಳ ಎಸ್‌.ಸಿ ಗ್ರಾಮದ ಕುರುಬ ಸಮಾಜಕ್ಕೆ ಸೇರಿದ ಎಂ ಶಶಿಕುಮಾರ ಹಳಪೇಡಿ ಕೂಡಾ ಇದೇ ಮೊದಲ ಬಾರಿಗೆ ಲೋಕಸಭೆಗೆ ಹೊಸ ಪಕ್ಷವಾದ ಉತ್ತಮ ಪ್ರಜಾಕೀಯ ಸ್ಪರ್ಧಿಸಿರುವುದು ಅಷ್ಟೆ ವಿಶೇಷವಾಗಿದೆ. ನಟ ಉಪೇಂದ್ರ ಅವರ ಪಕ್ಷದಿಂದ ಸ್ಪರ್ಧಿಸಿ ಕುರುಬ ಸಮಾಜದ ಮತಗಳನ್ನು ತಮ್ಮ ಕಡೆಗೆ ಸಳೆಯುವ ಪ್ರಯತ್ನವನ್ನು ಮಾಡುತ್ತಿರುವುದು ಇದು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದ ಹಿನ್ನೆಡೆಗೆ ಕಾರಣವಾದರೂ ಅಶ್ಚರ್ಯ ಪಡಬೇಕಾಗಿಲ್ಲ.

ಚುನಾವಣೆ ಬಂದಾಗ ಮಾತ್ರ ಸಂಸದ ಪಿ.ಸಿ.ಗದ್ದಿಗೌಡರ ಕಾಣಿಸುತ್ತಾರೆ. ಸಂಸದರ ಅನುದಾನ ಮಾತ್ರ ಈ ಕ್ಷೇತ್ರಕ್ಕೆ ಎಲ್ಲಿ ಬಂದಿದೆ ಎನ್ನುವುದು ಮಾತ್ರ ಗೊತ್ತಿಲ್ಲ. ಅವರ ವ್ಯಕ್ತಿತ್ವ ಒಳ್ಳೆಯದು. ಆದರೆ ಉತ್ತಮ ಕೆಲಸಗಾರ ಅಲ್ಲ ಎನ್ನುವುದು ಈ ಕ್ಷೇತ್ರದ ಜನತೆಯ ಅಭಿಪ್ರಾಯ. ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಚಾರಕ್ಕಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜೆಡಿಎಸ್‌ ಜಿಲ್ಲಾಧ್ಯಕ್ಷ ಎಸ್‌.ಆರ್‌. ನವಲಿಹಿರೇಮಠ, ಪಕ್ಷದ ಮುಖಂಡರಿಂದ ಮನೆ ಮನೆಗೆ ಹೋಗಿ ಮತಯಾಚಿಸಿದರೆ, ಇನ್ನು ಬಿಜೆಪಿ ಪರವಾಗಿ ಶಾಸಕ ದೊಡ್ಡನಗೌಡ ಪಾಟೀಲ, ಜಿಪಂ ಸದಸ್ಯ ವೀರೇಶ ಉಂಡೋಡಿ, ಡಾ| ಮಹಾಂತೇಶ ಕಡಪಟ್ಟಿ, ಸಂಗಣ್ಣ ಕಡಪಟ್ಟಿ, ಅರುಣೋದಯ ದುದ್ಗಿ ಮತ ಬೇಟೆ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ 45 ಸಾವಿರ ಪಂಚಮಸಾಲಿ, 32 ಸಾವಿರ ಕುರುಬ, 27 ಸಾವಿರ ಗಾಣಿಗ, 46 ಸಾವಿರ ಎಸ್‌ಸಿ/ಎಸ್‌ಟಿ, 20 ಸಾವಿರ ನೇಕಾರ, 10 ಸಾವಿರ ರಡ್ಡಿ, 20 ಸಾವಿರ ಮುಸ್ಲಿಂ, 14,542 ಮತದಾರರಿದ್ದಾರೆ.

ಕಳೆದ ಬಾರಿ ಲೋಕಾ ಚುನಾವಣೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದಿದ್ದ, ಕ್ಷೇತ್ರದ ಹಾಲಿ ಶಾಸಕರು, ಈಗ ಬಿಜೆಪಿಗೆ ಹೆಚ್ಚು ಮತ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಇನ್ನು 45 ವರ್ಷಗಳ ಬಳಿಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌, ತಾಲೂಕಿಗೆ ಟಿಕೆಟ್‌ ನೀಡಿದ್ದು, ಲಿಂಗಾಯತ ಬಲದೊಂದಿಗೆ ಹೆಚ್ಚು ಮತ ಪಡೆಯಲು ಕಾಂಗ್ರೆಸ್‌ ತಯಾರಿ ನಡೆಸುತ್ತಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ 63,931 ಮತ ಪಡೆದಿದ್ದರೆ, ಕಾಂಗ್ರೆಸ್‌ 58,460 ಮತ ಪಡೆದಿತ್ತು. ಇನ್ನು 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 65,012 ಮತ ಪಡೆದು ಗೆದ್ದಿದ್ದರೆ, ಕಾಂಗ್ರೆಸ್‌ 59,785 ಹಾಗೂ ಜೆಡಿಎಸ್‌ 25,850 ಮತ ಪಡೆದಿದ್ದವು. ಈ ಬಾರಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕಣದಲ್ಲಿರುವುದರಿಂದ ಎರಡೂ ಪಕ್ಷಗಳು ಪಡೆದಿದ್ದ 85,635 ಮತಗಳು ಕಾಂಗ್ರೆಸ್‌ ಅಭ್ಯರ್ಥಿಗೆ ಬರಲಿವೆ ಎಂಬ ವಿಶ್ವಾಸ ಆ ಪಕ್ಷ ಹೊಂದಿದೆ. ಇನ್ನು ಮೋದಿ ಅಲೆಯಲ್ಲಿ ಮೈತ್ರಿ ಅಭ್ಯರ್ಥಿಗಿಂತ ಬಿಜೆಪಿಗೇ ಹೆಚ್ಚು ಮತ ಬರಲಿವೆ ಎಂದು ಈ ಪಕ್ಷ ನಂಬಿಕೊಂಡಿದೆ.

ಮಲ್ಲಿಕಾರ್ಜುನ ಬಂಡರಗಲ್ಲ

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

3-

Mahalingpur: 2020ರ ಪುರಸಭೆ ಗಲಾಟೆ ಪ್ರಕರಣ: ಮರು ತನಿಖೆಗೆ ಕೋರ್ಟ್ ಆದೇಶ

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಬಾಗಲಕೋಟೆ: ಸರ್ಕಾರಿ ಕಚೇರಿ-ಆಶ್ರಯ ಮನೆಗಳೂ ವಕ್ಫ್ ಆಸ್ತಿ!

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

ಅನ್ನದಾತರ ನೋವಿಗೆ ಮಿಡಿಯದ ಜಿಲ್ಲಾಡಳಿತ; ರೈತರ ಅಹೋರಾತ್ರಿ ಧರಣಿ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.