Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
ಸಿಬ್ಬಂದಿ ಸಮಸ್ಯೆಗೆ ಸೊರಗಿದೆ ಸರ್ಕಾರಿ ಆಸ್ಪತ್ರೆ
Team Udayavani, Nov 5, 2024, 3:53 PM IST
ಮುಧೋಳ: ತಾಲೂಕಿನ ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮದ ರೋಗಿಗಳು ಗುಣಮಟ್ಟದ ಚಿಕಿತ್ಸೆಗಾಗಿ ನಗರ ಪ್ರದೇಶವನ್ನು ಅವಲಂಭಿಸುವಂತಾಗಿದೆ. ತಾಲೂಕಿನಲ್ಲಿಯೇ ದೊಡ್ಡ ಗ್ರಾಮವೆನಿಸಿಕೊಂಡುರುವ ಶಿರೋದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಸಿಬ್ಬಂದಿ ಕೊರತೆ ಸಮಸ್ಯೆ ಕಾಡುತ್ತಿದೆ. ಬಡವರು, ನಿರ್ಗತಿಕರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಕೂಡಾನಗರ ಅಥವಾ ಖಾಸಗಿ ಆಸ್ಪತ್ರೆಯತ್ತ ಮುಖಮಾಡುವಂತಾಗಿದೆ.
15ಹುದ್ದೆಗಳಲ್ಲಿ 10 ಖಾಲಿ : ಸದ್ಯ ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಟ್ಟು 15ಹುದ್ದೆಗಳಿವೆ. ಅವುಗಳಲ್ಲಿ ಮುಖ್ಯ ವೈದ್ಯಾಧಿಕಾರಿ, ಸ್ಟಾಫ್ ನರ್ಸ್, ಎಫ್ಡಿಸಿ ಹಾಗೂ ಗ್ರುಪ್ ಡಿ ಹುದ್ದೆ ಸೇರಿ ಕೇವಲ ಐದು ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
ಇನ್ನುಳಿದಂತೆ 3 ಸಮುದಾಯ ಆರೋಗ್ಯಾಧಿಕಾರಿ, 2ಹೆಲ್ತ್ ಇನ್ಸಪೆಕ್ಟರ್, 1ಎಲ್ ಎಚ್ ವಿ ಸಿನೀಯರ್, 2 ಸಮುದಾಯ ಆರೋಗ್ಯ ಅಧಿಕಾರಿ, 1 ಲ್ಯಾಬ್ ಟೆಕ್ನಿಶಿಯನ್, 1 ಫಾರ್ಮಸಿ ಆಫೀಸರ್ ಹುದ್ದೆಗಳು ಖಾಲಿ ಇವೆ.
ಇರುವ ಐದು ಜನ ಸಿಬ್ಬಂದಿ ನಿರಂತರವಾಗಿ ಸೇವೆಯಲ್ಲಿ ತೊಡಗಿದರೂ ಸಾರ್ವಜನಿಕರನ್ನು ಸಂಭಾಳಿಸುವುದು ಕಷ್ಟಕರವಾಗಿದೆ. ಆಸ್ಪತ್ರೆಗೆ ಹೆಚ್ಚಿಮ ಸಿಬ್ಬಂದಿ ಒದಗಿಸಿ ಎಂದು ಗ್ರಾಮಸ್ಥರು ಮೌಖಿಕವಾಗಿ ಮನವಿ ಮಾಡಿಕೊಂಡರು ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಜಾಣಮೌನ ವಹಿಸಿರುವುದು ಸಾರ್ವಜಿನಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪೂರ್ಣಪ್ರಮಾಣದ ಆರೋಗ್ಯ ಕೇಂದ್ರವಾಗಲಿ : ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರ ಈ ಮೊದಲು ಉತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಕೆಲ ವರ್ಷಗಖ ಹಿಂದೆ ಅದರಿಂದ ಬೇರ್ಪಡಿಸಿ ಸ್ವತಂತ್ರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನಾಗಿಸಲಾಗಿದೆ. ಆದರೆ ಇದೂವರೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆಬೇಕಾದ ಅಗತ್ಯ ಸೌಲಭ್ಯ ದೊರಕಿಸಿಕೊಡುವಲ್ಲಿ ಎಲ್ಲ ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರಿದ್ದಾರೆ. ನಾಮಕಾವಸ್ತೆ ಪ್ರಾಥಮಿಕ ಆರೋಗ್ಯ ಕೇಂದ್ರವೆನಿಸಿರುವ ಶಿರೋಳ ಆಸ್ಪತ್ರೆಗೆ ಶಾಶ್ವತವಾಗಿ ಕಾಯಕಲ್ಪ ದೊರಕಿಸಿಕೊಡಬೇಕಿದೆ.
ಶಿರೋಳ ದೊಡ್ಡ ಗ್ರಾಮ : ಮುಧೋಳ ತಾಲೂಕಿನಲ್ಲಿ ತನ್ನದೇಯಾದ ಗತ್ತು ಗಾಂಭೀರ್ಯ ಹೊಂದಿರುವ ಶಿರೋಳ ಗ್ರಾಮ ಹೋರಾಟಗಾರರ ನೆಲೆ ಎಂದು ಪ್ರಖ್ಯಾತಿ ಪಡೆದಿದೆ. ಒಟ್ಟು 31 ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಂದಾಜು 18257 ಜನಸಂಖ್ಯೆಯನ್ನು ಗ್ರಾಮ ಒಳಗೊಂಡಿದೆ. ಇಷ್ಟೊಂದು ವಿಸ್ತಾರ ಹೊಂದಿರುವ ಗ್ರಾಮಕ್ಕೆ ಸಿಬ್ಬಂದಿಕೊರತೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ.
ಸಿಬ್ಬಂದಿಗೆ ಬಿಡುವಿಲ್ಲದ ಕೆಲಸ : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇವಲ 5ಜನ ಸಿಬ್ಬಂದಿ ಇದ್ದರೂ ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ವೆಳಗ್ಗೆಯಿಂದ ಸಂಜೆವರೆಗೆ ನಿರಂತರ ಹೊರರೋಗಿಗಳನ್ನು ತಪಾಸಣೆ ಮಾಡುವ ಸಿಬ್ಬಂದಿ ಪ್ರತಿದಿನ ಒತ್ತಡದಲ್ಲಿಯೇ ಕಾರ್ಯನಿರ್ವಹಿಸಬೇಕಾಗಿದೆ. ಬಡಜನರೇ ಹೆಚ್ಚಾಗಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂಲಸೌಕರ್ಯ ಕೊರತೆಯ ನಡುವೆಯೇ ಇಲ್ಲಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
24*7ಆಸ್ಪತ್ರೆಯಾಗಲಿ : ಶಿರೋಳ ಗ್ರಾಮದಲ್ಲಿನ ಆಸ್ಪತ್ರೆಯನ್ನು 24*7 ಆಸ್ಪತ್ರೆಯನ್ನಾಗಿಸಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು ಎಂಬುದಜ ಗ್ರಾಮಸ್ಥರ ಆಗ್ರಹವಾಗಿದೆ. ಸಿಬ್ಬಂದಿ ಕೊರತೆ ಬೇಗ ನೀಗಿಸಿ ಗ್ರಾಮಸ್ಥರಿಗೆ ಸೂಕ್ತ ಸಮಯದಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುವಂತೆ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.
**
ಬಾಗಲಕೋಟೆ ಜಿಲ್ಲೆಯಾದ್ಯಂತ ಸಿಬ್ಬಂದಿ ಕೊರತೆ ಕಾಡುತ್ತಿದೆ. ಇದಕ್ಕೆ ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತಲ್ಲ. ಮುಂದಿನ ದಿನದಲ್ಲಿ ಸಿಬ್ಬಂದಿ ನನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು.
– ಸುವರ್ಣ ಕುಲಕರ್ಣಿ ಡಿಎಚ್ಒ ಬಾಗಲಕೋಟೆ
**
ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಲೇಂದ್ರದಲ್ಲಿ ಸಿಬ್ಬಂದಿ ಕೊರತೆ ಹೆಚ್ಚಿದೆ. ಕೂಡಲೇ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ. ಆರೋಗ್ಯ ಕೇಂದ್ರವನ್ನು 24*7 ಕೃಂದ್ರವನ್ಮಾಗಿ ಮೇಲ್ದರ್ಜೆಗೇರಿಸಬೇಕು.
– ವೆಂಕಣ್ಣ ಮಳಲಿ ಶಿರೋಳ ಗ್ರಾಮಸ್ಥ
– ಗೋವಿಂದಪ್ಪ ತಳವಾರ ಮುಧೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.