ವೈದ್ಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ-ಪಿಎಸ್‌ಐಗೆ ಮನವಿ
Team Udayavani, Aug 30, 2019, 10:14 AM IST
ಬಾದಾಮಿ: ವೈದ್ಯರು ಪ್ರತಿಭಟನೆ ನಡೆಸಿ ಪಿಎಸ್‌ಐ ಪ್ರಕಾಶ ಬಾಣಕಾರ ಅವರಿಗೆ ಮನವಿ ಸಲ್ಲಿಸಿದರು.
ಬಾದಾಮಿ: ತಾಲೂಕಿನ ಸರ್ಕಾರಿ ಮತ್ತು ಖಾಸಗಿ ವೈದ್ಯರ ಮೇಲೆ ಹಲ್ಲೆ ಹಾಗೂ ಶೋಷಣೆ ತಡೆಯುವಂತೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ವೈದ್ಯರು ಪ್ರತಿಭಟನೆ ನಡೆಸಿದರು.
ಐಎಂಎ ಸಂಘದ ಅಧ್ಯಕ್ಷ ಡಾ. ಆರ್.ಸಿ.ಭಂಡಾರಿ ಮತ್ತು ಕಾರ್ಯದರ್ಶಿ ಡಾ| ಕಿರಣ ಕುಳಗೇರಿ ಮಾತನಾಡಿ, ಕಳೆದ ಹದಿನೈದು ದಿನಗಳಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯರ ಮೇಲೆ ಬಾದಾಮಿಯಲ್ಲಿ ನಿರಂತರವಾಗಿ ಶೋಷಣೆ ಹಾಗೂ ಹಲ್ಲೆ ನಡೆಯುತ್ತಿದೆ. ವಿವಿಧ ಸಮಾಜ ಸೇವಕ ಸಂಘಗಳ ಹೆಸರು ಹೇಳಿಕೊಂಡು ಹಾಗೂ ಇನ್ನಿತರ ವೇದಿಕೆಗಳ ಹೆಸರಿನಲ್ಲಿ ಹಣಕ್ಕಾಗಿ ಹಲ್ಲೆ ಮತ್ತು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಲ್ಲೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವವರೆಗೂ ವೈದ್ಯರು ಸೇವೆಯನ್ನು ಹಿಂಪಡೆಯುತ್ತಿದ್ದೇವೆ. ವೈದ್ಯರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ವೈದ್ಯರಾದ ಡಾ| ಬಿ.ಎಚ್.ರೇವಣಸಿದ್ದಪ್ಪ, ಡಾ| ಎಂ.ಜಿ.ಕಿತ್ತಲಿ, ಡಾ| ಬೊಂಬಲೆ, ಡಾ| ಬಸವರಾಜ ಗಂಗಲ್ಲ, ಡಾ| ಸತೀಶ ಕಟಗೇರಿ, ವಿ.ವೈ. ಭಾಗವತ, ಡಾ| ಕರವೀರಪ್ರಭು ಕ್ಯಾಲಕೊಂಡ, ಡಾ| ಸುರೇಶ ಉಗಲವಾಟ, ಡಾ| ಶಿವುಕುಮಾರ ಮಾಳವಾಡ, ಔಷಧ ವ್ಯಾಪಾರಸ್ಥರ ಸಂಘದ ಸಿದ್ದು ಫತ್ತೇಪುರ, ಮಂಜು ಫತ್ತೇಪುರ, ಪ್ರವೀಣ ಹೋಳಿ, ರವಿ ದೊಡ್ಡನಿಂಗಪ್ಪನವರ, ಆಳಂದ, ಅಮರಯ್ಯ ಜಿತಗೇರಿಮಠ ಹಾಜರಿದ್ದರು.
ಪಟ್ಟಣದಲ್ಲಿ ವೈದ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಪಿಎಸ್‌ಐ ಪ್ರಕಾಶ ಬಾಣಕಾರ ಇವರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.