ಸಮಗಾರ ಹರಳಯ್ಯ ಸಂಘದಿಂದ ಪ್ರತಿಭಟನೆ
ಸಮಗಾರ ಸಮಾಜದ ಮೂಲ ವೃತ್ತಿ ಕಸಬಿಗೆ ಅವಮಾನ ಮಾಡಲಾಗುತ್ತಿದೆ.
Team Udayavani, Nov 25, 2021, 3:35 PM IST
ಬಾಗಲಕೋಟೆ: ಕರವೇ ಕಾರ್ಯಕರ್ತರು ವಿವಿಧೆಡೆ ಬೂಟ್ (ಶೂ) ಪಾಲಿಶ್ ಮೂಲಕ ಹಣ ಸಂಗ್ರಹಿಸುವ ಪ್ರತಿಭಟನೆ ನಡೆಸಿ, ಸಮಗಾರ ಸಮಾಜವನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿ ಸಮಗಾರ ಹರಳಯ್ಯ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಾಜದ ಪ್ರಮುಖರು, ಕರವೇ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಹಿರಿಯ ಮುಖಂಡ ಯಪ್ಪಲ್ಲ ಬೆಂಡಿಗೇರಿ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಹಣ ಸಂಗ್ರಹಿಸಲು ಕರವೇ ಕಾರ್ಯಕರ್ತರು ಸಾರ್ವಜನಿಕರ ಸ್ಥಳದಲ್ಲಿ ಬೂಟ್ ಪಾಲಿಶ್ ಹೋರಾಟದ ಮೂಲಕ, ಸಮಗಾರ ಸಮಾಜದ ಮೂಲ ವೃತ್ತಿ ಕಸಬಿಗೆ ಅವಮಾನ ಮಾಡಲಾಗುತ್ತಿದೆ. ಕರವೇ ಕಾರ್ಯಕರ್ತರು ಇಂತಹ ಅವಮಾನಕರ ಪ್ರತಿಭಟನೆ ಕೈಬಿಡುವಂತೆ ಆಗ್ರಹಿಸಿದರು.
ಈ ವೇಳೆ ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಸಮಾಜದ ಪ್ರಮುಖರಾದ ಎಂ.ಬಿ. ಯಾದವಾಡ, ಪರಮೇಶ್ವರ ಬಾವಲತ್ತಿ, ಪಿ.ಎಂ. ಹೊಸಮನಿ, ಜಿ.ಎಚ್. ಮುಂಡೇವಾಡಿ, ಶನಸು ಬೀಳಗಿ ಸೇರಿದಂತೆ ಹರಳಯ್ಯ ಸಮಗಾರ ಸಂಘದ ಪ್ರಮುಖರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.