ಆಸ್ಪತ್ರೆ ಆರಂಭಿಸಲು ಸ್ಥಳಾವಕಾಶ ನೀಡಲು ಆಗ್ರಹಿಸಿ ಪ್ರತಿಭಟನೆ
Team Udayavani, Feb 19, 2020, 12:11 PM IST
ಸಾಂಧರ್ಬಿಕ ಚಿತ್ರ
ತೇರದಾಳ: ಸಸಾಲಟ್ಟಿಯಲ್ಲಿ ಆಸ್ಪತ್ರೆ ಆರಂಭಿಸಲು ಪಿಕೆಪಿಎಸ್ ಆವರಣದಲ್ಲಿ ಸ್ಥಳಾವಕಾಶ ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಸಸಾಲಟ್ಟಿಯಲ್ಲಿ ಪ್ರತಿಭಟನೆ ನಡೆಸಿದರು.
10ಸಾವಿರ ಜನಸಂಖ್ಯೆ ಹೊಂದಿರುವ ಸಸಾಲಟ್ಟಿ ಗ್ರಾಮದ ಜನರು ಅನಾರೋಗ್ಯ ಉಂಟಾದಾಗ ಚಿಕಿತ್ಸೆ ಪಡೆಯಲು 6 ಕಿ.ಮೀ. ದೂರದ ತೇರದಾಳ ಸರಕಾರಿ ಆಸ್ಪತ್ರೆಗೆ ಹೋಗಬೇಕು. ವಯೋವೃದ್ಧರು, ಅಶಕ್ತರು, ಅಂಗವಿಕಲರು ಚಿಕಿತ್ಸೆ ಪಡೆಯಲು ಆಗುತ್ತಿಲ್ಲ. ಅಲ್ಲದೆ ನಮ್ಮೂರಿಗೆ ಬಸ್ ಸೌಲಭ್ಯ ಇಲ್ಲ. 2017ರಲ್ಲಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಗ್ರಾಮಕ್ಕೆ ಮಂಜೂರಾಗಿದೆ. ಅದರ ಪ್ರಾರಂಭಕ್ಕಾಗಿ ಈ ಹಿಂದೆ ಪಿಕೆಪಿಎಸ್‌ನ ಕಟ್ಟಡವನ್ನು ಆಸ್ಪತ್ರೆಗೆ ಬಳಸುವಂತೆ ಕಮೀಟಿಯವರೇ ಒಪ್ಪಿಕೊಂಡಿದ್ದರು. ಇದೀಗ ಅದನ್ನು ತಿರಸ್ಕರಿಸುತ್ತಿರುವುದರಿಂದ ಆಸ್ಪತ್ರೆ ಮಂಜೂರಾದರು ಕೂಡ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಪಿಕೆಪಿಎಸ್‌ನವರು ಸಹಕರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಿಕೆಪಿಎಸ್ ಅಧ್ಯಕ್ಷ ಚನ್ನಮಲ್ಲಪ್ಪ ಮದಲಮಟ್ಟಿ ಸೇರಿದಂತೆ ಆಡಳಿತ ಮಂಡಳಿ, ಗ್ರಾಪಂ ಅಧ್ಯಕ್ಷ ಭರಮು ಉಳ್ಳಾಗಡ್ಡಿ ಹಾಗೂ ಸದಸ್ಯರು ಸಭೆ ಸೇರಿ, ಚರ್ಚಿಸಿ ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಕ್ಕೆ ಯತ್ನಿಸಿದರು. ಮಾಯಪ್ಪ ಬೆಂಡಿಕಾಯಿ, ಹುಕ್ಕೇರಿ ಮಾತನಾಡಿ, ಶಾಸಕರು ಶುಕ್ರವಾರ ಗ್ರಾಮಕ್ಕೆ ಬಂದು ಸಭೆಯಲ್ಲಿ ಆಸ್ಪತ್ರೆ ಸ್ಥಾಪಿಸಲು ಜಾಗದ ಸಮಸ್ಯೆ ಕುರಿತಂತೆ ಸಾರ್ವಜನಿಕವಾಗಿ ಮಾತನಾಡಲಿದ್ದಾರೆ. ಅಲ್ಲಿಯವರೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ದೇವರಾಜ ಬಳಗಾರ, ಪ್ರಕಾಶ ಬೆಂಡಿಕಾಯಿ, ವಿಠuಲ ಕಾಂಬಳೆ, ಹನಮಂತ ಪೂಜಾರಿ, ಕಂಠೆಪ್ಪ ಮಾಸ್ತಿ, ಬಾಜವ್ವ ಕಾಂಬಳೆ, ಸಾಯವ್ವ ಸರಿಕರ, ಲಕ್ಷ್ಮೀಬಾಯಿ ಕಾಂಬಳೆ, ಜುಬಾಯಿ ರಾಯನ್ನವರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahalingpur: ಎರಡು ವರ್ಷದ ಮಹಾಲಿಂಗಪುರದ ನೂತನ ಬಸ್ ನಿಲ್ದಾಣದಲ್ಲಿ ನೂರೆಂಟು ಸಮಸ್ಯೆಗಳು
ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.