53 ದೇಶಕ್ಕೆ ಶಾಂತಿ ಪಾಲನೆ ಹೇಳಿದ ಹೆಮ್ಮೆಯ ಯೋಧ!

­ಕಾಂಗೋ ಪಡೆಯಲ್ಲಿ 18 ತಿಂಗಳು ಸೇವೆಗೈದ ಶಿರೂರಿನ ಮಾಂತಪ್ಪ

Team Udayavani, May 16, 2022, 12:54 PM IST

7

ಬಾಗಲಕೋಟೆ: ನಿರಂತರ ಯುದ್ಧದ ಭೀತಿ ಎದುರಿಸುವ ವಿಶ್ವದ ಸುಮಾರು 53ಕ್ಕೂ ಹೆಚ್ಚು ದೇಶಗಳಿಗೆ ಜಿಲ್ಲೆಯ ಹೆಮ್ಮೆಯ ಯೋಧರೊಬ್ಬರು ಶಾಂತಿ ಪಾಲನೆಯ ನೀತಿ ಹೇಳಿದ್ದಾರೆ. ಇಂತಹವೊಂದು ಅದ್ಭುತ ಕೆಲಸಕ್ಕೆ ಇಡೀ ರಾಜ್ಯದಿಂದ ಆಯ್ಕೆಯಾದ ಇಬ್ಬರಲ್ಲಿ ಏಕೈಕ ಯೋಧ ಜಿಲ್ಲೆಯ ಸಾಧಕ ಎಂಬ ಹೆಮ್ಮೆ ಎಲ್ಲೆಡೆ ಮನೆ ಮಾಡಿದೆ.

ಹೌದು, ತಾಲೂಕಿನ ಶಿರೂರ ಪಟ್ಟಣದ ಯೋಧ ಮಾಂತಪ್ಪ ಸಿದ್ದಪ್ಪ ಮೇಳಿ ಎಂಬ ಯೋಧ, ದಕ್ಷಿಣ ಆಫ್ರಿಕಾದ ಕಾಂಗೋ ದೇಶದಲ್ಲಿ ಬರೋಬ್ಬರಿ 17 ತಿಂಗಳು 22 ದಿನಗಳ ಕಾಲ ಸೇವೆ ಸಲ್ಲಿಸಿದ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಶಾಂತಿ ಪಾಲನೆ ಪಡೆಗೆ ಆಯ್ಕೆ: ದಕ್ಷಿಣ ಆಫ್ರಿಕಾ ಸಹಿತ ವಿಶ್ವದ ಸುಮಾರು 53ಕ್ಕೂ ಹೆಚ್ಚು ದೇಶಗಳಲ್ಲಿ ನಿರಂತರ ಯುದ್ಧ ನಡೆಯುತ್ತವೆ. ಕಾರಣ ಅಲ್ಲಿನ ಖನಿಜ ಸಂಪತ್ತು ಪಡೆಯುವ ವಿಷಯದಿಂದ ಹಿಡಿದು ಹಲವು ಕಾರಣಕ್ಕೆ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಇಲ್ಲವೇ ಯುದ್ಧದ ಭೀತಿಯಾದರೂ ಎದುರಿಸುತ್ತವೆ. ಆಯಾ ದೇಶಗಳ ಸೇನಾ ಪಡೆಗಳು ಬಲಿಷ್ಠವಾಗಿದ್ದರೆ ಇಂತಹ ಯುದ್ಧದ ಭೀತಿ ಎದುರಿಸಲು ಸಾಧ್ಯವಿಲ್ಲ. ಸೇನಾ ಪಡೆ ಬಲಿಷ್ಠ ಇರದಿದ್ದರೆ ಅಕ್ಕ-ಪಕ್ಕದ ರಾಷ್ಟ್ರಗಳು, ದಾಳಿ ನಡೆಸಲು ಆರಂಭಿಸುತ್ತವೆ.

ಹೀಗಾಗಿ ವಿಶ್ವ ಸಂಸ್ಥೆಯಲ್ಲಿ ನೋಂದಾಯಿತಗೊಂಡ ಹಲವು ರಾಷ್ಟ್ರಗಳಲ್ಲಿ ಶಾಂತಿ ಪಾಲನೆಯಾಗಬೇಕು, ಯಾವ ದೇಶದ ಮೇಲೆ, ಬೇರೆ ಯಾವ ದೇಶದ ಪಡೆ ದಾಳಿ ಮಾಡಲು ಮುಂದಾಗುತ್ತದೆಯೋ, ಅಂತಹ ದೇಶಗಳ ಗಡಿ ಕಾಯಲು, ವಿಶ್ವ ಸಂಸ್ಥೆಯೇ ಬೇರೆ ಬೇರೆ ದೇಶಗಳಿಂದ (ಆಯಾ ಕೇಂದ್ರ ಸರ್ಕಾರದ ಮೂಲಕ) ಸೈನಿಕರನ್ನು ಆಯ್ಕೆ ಮಾಡಿ, ಶಾಂತಿ ಪಾಲನೆ ಪಡೆಗೆ ನಿಯೋಜನೆ ಮಾಡುತ್ತದೆ. ಅಂತಹ ಶಾಂತಿ ಪಾಲನೆ ಪಡೆಗೆ ಬಾಗಲಕೋಟೆ ತಾಲೂಕಿನ ಶಿರೂರ ಪಟ್ಟಣದ ಮಾಂತಪ್ಪ ಸಿದ್ದಪ್ಪ ಮೇಳಿ ಹಾಗೂ ಬೆಳಗಾವಿಯ ಗೋಪಾಲ ಎಫ್‌.ಎಂ ಆಯ್ಕೆಯಾಗಿದ್ದರು. ಇಡೀ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಸೈನಿಕರಲ್ಲಿ ಈ ಇಬ್ಬರು ಮಾತ್ರ. ಇವರಿಬ್ಬರು ಕಳೆದ 2020ರ ನವ್ಹೆಂಬರ್‌ 12ರಿಂದ ಬರೋಬ್ಬರಿ 17 ತಿಂಗಳು, 22 ದಿನಗಳ ಕಾಲ ದಕ್ಷಿಣ ಆಫ್ರಿಕಾದ ಕಾಂಗೋ ದೇಶದಲ್ಲಿ ವಿಶ್ವ ಸಂಸ್ಥೆಯ ಸೇನಾ ಪಡೆಯ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ.

ಹೆಮ್ಮೆ ಇದೆ; ನಾನು ಕಳೆದ 18 ವರ್ಷ, 4 ತಿಂಗಳಿಂದ ಬಿಎಸ್‌ಎಫ್‌ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಯುದ್ಧ ಭೀತಿ ಎದುರಿಸುವ 53 ರಾಷ್ಟ್ರಗಳಿಗೆ ವಿಶ್ವ ಸಂಸ್ಥೆಯೇ ಶಾಂತಿ ಪಾಲನೆ ಪಡೆ ಸಿದ್ಧಪಡಿಸಿ, ವಿವಿಧ ದೇಶಗಳಲ್ಲಿ ಸೇವೆಗೆ ನಿಯೋಜನೆ ಮಾಡುತ್ತದೆ. ಇಂತಹ ಶಾಂತಿ ಪಾಲನೆ ಪಡೆಗೆ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದೇವು. ಅದರಲ್ಲೂ ನಾನೂ ಒಬ್ಬ ಎಂಬ ಹೆಮ್ಮೆ ಇದೆ ಎಂದು ಶಿರೂರಿನ ಹೆಮ್ಮೆಯ ಬಿಎಸ್‌ಎಫ್‌ ಯೋಧ ಮಾಂತಪ್ಪ ಮೇಳಿ ಉದಯವಾಣಿಗೆ ಸಂತಸ ಹಂಚಿಕೊಂಡರು.

ಕಾಂಗೋ ದೇಶದಲ್ಲಿ ಒಟ್ಟು 17 ತಿಂಗಳು 22 ದಿನಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಕಾಂಗೋ ದೇಶದ ಸೈನ್ಯ ಪಡೆ ಬಲಿಷ್ಠವಾಗಿಲ್ಲ. ಹೀಗಾಗಿ ಬಲಿಷ್ಠ ಸೇನೆ ಹೊಂದಿರುವ ಭಾರತದಂತಹ ದೇಶದಿಂದ ಸೈನಿಕರನ್ನು ಆಯ್ಕೆ ಮಾಡಲಾಗಿತ್ತು. ನಮ್ಮ ದೇಶದ ಸೇನೆ ಅತ್ಯಂತ ಬಲಿಷ್ಠವಾಗಿದೆ ಎಂಬುದಕ್ಕೆ ನಾವು ಇಬ್ಬರು ಬಿಎಸ್‌ಎಫ್‌ ಯೋಧರು, ವಿಶ್ವ ಸಂಸ್ಥೆಯ ಶಾಂತಿ ಪಾಲನೆ ಪಡೆಗೆ ಆಯ್ಕೆಯಾಗಿರುವುದೇ ಸಾಕ್ಷಿ ಎಂದರು.

ಶಿರೂರಿನಲ್ಲಿ ಸಡಗರ-ಪೂಜೆ: ಕಾಂಗೋ ದೇಶದಲ್ಲಿ ವಿಶ್ವ ಸಂಸ್ಥೆಯ ಶಾಂತಿ ಪಾಲನೆ ಪಡೆಯಲ್ಲಿ 17 ತಿಂಗಳು ಸೇವೆ ಸಲ್ಲಿಸಿ ಸುರಕ್ಷಿತವಾಗಿ ತಾಯ್ನಾಡಿಗೆ, ಅದರಲ್ಲೂ ಹುಟ್ಟೂರು ಶಿರೂರಿಗೆ ಆಗಮಿಸುತ್ತಿರುವ ಮಾಂತಪ್ಪ ಮೇಳಿ ಅವರಿಗೆ ಪಟ್ಟಣದಲ್ಲಿ ವಿಶೇಷ ಸನ್ಮಾನ ಹಾಗೂ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಮೇ 16ರಂದು ನಸುಕಿನ 5ಕ್ಕೆ ಶಿರೂರಿನ ಸಿದ್ದಲಿಂಗ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆಯಲಿದೆ. ಮಾಂತಪ್ಪ ಅವರ ಗೆಳೆಯರು, ಕುಟುಂಬಸ್ಥರು ಹಾಗೂ ಪಟ್ಟಣದ ಕೆಲ ಹಿರಿಯರು ಈ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಕಾಂಗೋ ದೇಶದಲ್ಲಿ ಸೇವೆ ಸಲ್ಲಿಸಿದ ಯೋಧ ಮಾಂತಪ್ಪ ಕೂಡ, ಸೋಮವಾರ ಬೆಳಗ್ಗೆ ಪಟ್ಟಣ ತಲುಪಲಿದ್ದು, ಅವರನ್ನು ವಿಶೇಷವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲು ಕುಟುಂಬಸ್ಥರು, ಗೆಳೆಯರ ಬಳಗ ಸಿದ್ಧಗೊಂಡಿದೆ.

-ವಿಶೇಷ ವರದಿ

ಟಾಪ್ ನ್ಯೂಸ್

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.