ಈದ್ಗಾ ಮೈದಾನಕ್ಕೆ ಮೂಲ ಸೌಲಭ್ಯ ಕಲ್ಪಿಸಿ
Team Udayavani, Jul 15, 2021, 10:38 PM IST
ಹುನಗುಂದ: ಮುಸ್ಲಿಂ ಸಮುದಾಯದ ಪವಿತ್ರಾ ಪ್ರಾರ್ಥನಾ ಸ್ಥಳವಾದ ಈದ್ಗಾ ಮೈದಾನಕ್ಕೆ ನೀರಿನ ವ್ಯವಸ್ಥೆ ಮತ್ತು ಮೈದಾನದ ಸುತ್ತಲು ತಂತಿ ಬೇಲಿ ಅಳವಡಿಸುವಂತೆ ಆಗ್ರಹಿಸಿ ಅಂಜುಮನ್ ಏ ಇಸ್ಲಾಂ ಟ್ರಸ್ಟ್ ಕಮೀಟಿಯ ಕಾರ್ಯಕರ್ತರು ಪುರಸಭೆ ಅಧ್ಯಕ್ಷ ಶರಣು ಬೆಲ್ಲದ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡ ರಿಯಾಜ್ ಬಂಗಾರಗುಂಡ ಮಾತನಾಡಿ, ಪಟ್ಟಣದ ಮಲ್ಲಿಕಾರ್ಜುನ ನಗರದ ಗುಡ್ಡದಲ್ಲಿರುವ ಈದ್ಗಾ ಮೈದಾನದಲ್ಲಿ ಸಮುದಾಯದವರು ಪ್ರಾರ್ಥನೆ ಮತ್ತು ಅಂತ್ಯಕ್ರಿಯೆ ಸಮಯದಲ್ಲಿ ನೀರಿನ ವ್ಯವಸ್ಥೆಯಿಲ್ಲದೇ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೈದಾನದ ಸುತ್ತಲು ನೆಟ್ಟಿರುವ ಸಸಿಗಳು ನೀರಿಲ್ಲದೇ ಸಂಪೂರ್ಣ ಒಣಗಿವೆ. ಸರಿಯಾದ ತಂತಿ ಬೇಲಿ ವ್ಯವಸ್ಥೆ ಇಲ್ಲದೇ ದನಕರುಗಳು ಸಸಿಗಳನ್ನು ನಾಶ ಪಡಿಸುತ್ತಿವೆ. ಪುರಸಭೆ ವತಿಯಿಂದ ನೀರಿನ ಸೌಲಭ್ಯ, ಮೈದಾನದ ಸುತ್ತ ತಂತಿಬೇಲಿ ನಿರ್ಮಿಸಬೇಕು. ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಅಂಜುಮನ್ ಏ ಇಸ್ಲಾಂ ಟ್ರಸ್ಟ್ ಕಮಿಟಿ ಅಧ್ಯಕ್ಷ ಶಬ್ಬೀರ್ ಮೌಲ್ವಿ, ಕಾರ್ಯದರ್ಶಿ ಮುಜೀಬ್ ಕಲಬುರ್ಗಿ, ಪುರಸಭೆ ಸದಸ್ಯರಾದ ಮುನ್ನಾ ಖಾಜಿ, ಮೈನು ಧನ್ನೂರ, ಮುಖಂಡರಾದ ಹರ್ಷದ ನಾಯಕ, ಯಾಸೀನ್ ಗಡೇದ, μàರಸಾಬ್ ಸರ್ಕಾವಸ್, ಮುನ್ನಾ ಬಾಗವಾನ, ಮುಸಾ ಮುಲ್ಲಾ, ಯಾಸೀನ ಬಿಜಾಪುರ, ಅಬುಬಕರ μàರಜಾದೆ, ಇಕ್ಬಾಲ್ ಗಡೇದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.