ಸಂತ್ರಸ್ತರಿಗೆ ಯೋಗ್ಯ ಪರಿಹಾರ ನೀಡಿ
Team Udayavani, Sep 4, 2019, 9:38 AM IST
ಬಾಗಲಕೋಟೆ: ನವನಗರದ ಪತ್ರಿಕಾ ಭವನದಲ್ಲಿ ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಾಗಲಕೋಟೆ: ಜಿಲ್ಲೆಯಲ್ಲಿ ಆದ ಪ್ರವಾಹದಿಂದ ಬೆಳೆ, ಆಸ್ತಿ, ಜಾನವಾರುಗಳು, ದವಸ ಧಾನ್ಯ ಮತ್ತು ಮನೆ ಕಳೆದುಕೊಂಡು ಸಂತ್ರಸ್ತರಿಗೆ ಹಳೆ ಮಾದರಿಯ ಎನ್‌ಡಿಆರ್‌ಎಫ್ ಅಡಿಯಲ್ಲಿ ನೀಡುವ ಪರಿಹಾರ ಸಂತ್ರಸ್ತರಿಗೆ ಸಾಲುವುದಿಲ್ಲ. ಕೂಡಲೇ ಹೊಸ ಮಾನದಂಡ ರೂಪಿಸಿ ಹಾನಿ ಪ್ರಮಾಣದಷ್ಟು ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಮುಧೋಳ ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಹೇಳಿದರು.
ನವನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿಗೆ ಉತ್ಪಾದನಾ ವೆಚ್ಚ 60 ಸಾವಿರ ರೂ.ಆಗುತ್ತಿದ್ದು, ಲಾಭಾಂಶ ಸೇರಿ ರೂ. 1 ಲಕ್ಷ ಇತರೆ ಬೆಳೆಗಳಿಗೆ ಕನಿಷ್ಟ ರೂ. 50 ಸಾವಿರ ನೀಡಬೇಕು. ಬೆಳೆ ಹಾನಿಗೆ ನಿರ್ಬಂಧ ವಿಧಿಸಬಾರದು. ಎಷ್ಟು ಎಕರೆ ನಷ್ಟವಾಗಿ ಅಷ್ಟು ಪ್ರಮಾಣವನ್ನು ಪರಿಗಣಿಸಬೇಕು. ಮನೆ, ಜಮೀನು ಮುಳುಗಡೆಯಾದ ಸಂತ್ರಸ್ತರಿಗೆ ಯುಕೆಪಿ ಮಾದರಿಯಲ್ಲಿ ಪರಿಹಾರ ಒದಗಿಸಿ ಸಂಪೂಣ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
2014-15 ರಲ್ಲಿ ಕಬ್ಬಿನ ಬೆಲೆ ಕಡಿಮೆಯಾಗಿತ್ತು. ಕಾರ್ಖಾನೆಗಳು ಒಂದು ಟನ್ ಕಬ್ಬಿಗೆ 2300 ರೂ. ಬೆಲೆ ಘೋಷಣೆ ಮಾಡಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಪ್ರತಿ ಟನ್‌ಗೆ 350 ರಂತೆ ರಾಜ್ಯದಲ್ಲಿ ಒಟ್ಟು 1800 ಕೋಟಿ ರೂ. ರೈತರ ಖಾತೆಗೆ ಹಣ ಜಮೆ ಮಾಡಿದ್ದರು. ಇಂದು ಸಂಪೂರ್ಣ ಬೆಳೆ ಹಾನಿಯಾಗಿದ್ದು, ಪೂರ್ಣ ಪ್ರಮಾಣದಲ್ಲಿ ಬೆಳೆ ಹಾನಿ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ. ಕೊಡಬೇಕು ಹಾಗೂ 10 ಸಾವಿರವರೆಗೆ ಮನೆ ಬಾಡಿಗೆ ಕೊಡಬೇಕು. ಈ ಎಲ್ಲ ರೈತ ಸಂತ್ರಸ್ತರ ಬೇಡಿಕೆ ಈಡೇರದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿಸಿಎಂ ಕಾರಜೋಳಗೆ ಟಾಂಗ್: ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಡಿಕೆಶಿ ಬಗ್ಗೆ ಹೇಳಿಕೆ ನೀಡಿರುವುದು ಖಂಡನೀಯ. ಮಾಜಿ ಸಚಿವ ಡಿ.ಕೆ. ಶಿವಕುಮಾರ ಇಡಿ ವಿಚಾರಣೆಯಲ್ಲಿ ದ್ವೇಷದ ರಾಜಕಾರಣ ಇದೇ ಎನ್ನುವ ಸತ್ಯವನ್ನು ಗೋವಿಂದ ಕಾರಜೋಳ ಒಪ್ಪಿಕೊಂಡಿದ್ದಾರೆ. ಕಾರಜೋಳ ಹೇಳಿಕೆಯಲ್ಲಿ ಸತ್ಯವಿದೆ. ದ್ವೇಷದ ರಾಜಕಾರಣ ಅಡಗಿದೆ ಎಂಬುದು ಅರ್ಥವಾಗುತ್ತದೆ ಎಂದು ಕಾರಜೋಳಗೆ ಟಾಂಗ್ ನೀಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ದುಂಡಪ್ಪ ಲಿಂಗರಡ್ಡಿ, ಮುಖಂಡರಾದ ನವೀನ ಬದ್ರಿ, ಸುಭಾಸ ಗಸ್ತಿ, ಬಸವರಾಜ ಇಟ್ಟನ್ನವರ, ಕಾಶಿಮ್‌ಸಾಬ ಕೇಸರಟ್ಟಿ, ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.