![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 18, 2019, 11:24 AM IST
ಬಾದಾಮಿ: ತಾಲೂಕಿನ ನೆರೆಪೀಡಿತ ಚೋಳಚಗುಡ್ಡ, ನಾಗರಾಳ ಎಸ್.ಬಿ., ಖ್ಯಾಡ ಗ್ರಾಮದಲ್ಲಿ ಪ್ರವಾಹ ಸಂತ್ರಸ್ತರಿಗೆ ಸರ್ಕಾರಿ ಶಾಲೆ ಮಕ್ಕಳಿಗೆ ಬೆಂಗಳೂರಿನ ಕಾರ್ಗಿಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಿಬ್ಬಂದಿ ಕೊಡ ಮಾಡಿದ ಕಲಿಕಾ ಸಾಮಗ್ರಿಗಳನ್ನು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಶ್ರೀಗಳ ಸಮ್ಮುಖದಲ್ಲಿ ವಿತರಿಸಲಾಯಿತು. ನಂತರ ಬಾದಾಮಿ ಕಿತ್ತೂರ ಚನ್ನಮ್ಮ ಶಾಲೆಯಲ್ಲಿರುವ ಸಂತ್ರಸ್ತರ ಮಕ್ಕಳಿಗೂ ಕಲಿಕಾ ಸಾಮಗ್ರಿ ನೀಡಿದರು.
ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ, ನಾಡಿನಲ್ಲಿ ಈ ವರ್ಷ ಸಂಭವಿಸಿದ ನೆರೆ ಪ್ರವಾಹದಿಂದ ಸಾವಿರಾರು ಮನೆಗಳು, ಹೊಲಗಳು ಹಾನಿಯಾಗಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂತ್ರಸ್ತ ಮಕ್ಕಳಿಗೆ ಅನುಕೂಲ ಕಲ್ಪಿಸಲು ಬೆಂಗಳೂರಿನ ಕಾರ್ಗಿಲ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಿಬ್ಬಂದಿ ಕಲಿಕಾ ಸಾಮಗ್ರಿಗಳಾದ ನೋಟ್‌ಪುಸ್ತಕ, ಕಂಪಾಸ್ ಬಾಕ್ಸ್, ಪೆನ್ಸಿಲ್, ಪೆನ್ನು ಸೇರಿದಂತೆ ಅಗತ್ಯ ವಸ್ತು ವಿತರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕಂಪನಿಯ ಸಿಬ್ಬಂದಿ ಮಂಜುನಾಥ ಜೆ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹಕ್ಕೆ ಜನರು ನಲುಗಿದ್ದಾರೆ. ಇಲ್ಲಿಯ ಸಂತ್ರಸ್ತರ ಮಕ್ಕಳಿಗೆ ಸಹಾಯ ಕಲ್ಪಿಸಲು ಶ್ರೀಗಳ ಹೇಳಿಕೆಯಂತೆ ಕೈಲಾದ ಸಹಾಯ ಮಾಡಲು ಬಂದಿದ್ದು ಮಕ್ಕಳು ವಿದ್ಯಾಭ್ಯಾಸ ಕುಂಠಿತವಾಗಬಾರದೆಂಬ ಉದ್ದೇàಶದಿಂದ ಕಲಿಕಾ ಸಾಮಗ್ರಿ ವಿತರಿಸಿದ್ದೇವೆ ಎಂದರು ಕಾರ್ಗಿಲ್ ಪ್ರೈವೇಟ್ ಲಿಮಿಟೆಡ್‌ಸಿಬ್ಬಂದಿ ನವೀನಕುಮಾರ , ಪ್ರೀತಮ, ಮಂಜುನಾಥ ಎ.ಕೆ. ಮನೋಜ, ಪರೀಕ್ಷಿತ, ಭರತ, ಖ್ಯಾಡ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಂ.ಗೌಡರ, ಡಾ| ಶಿವು ಗಂಗಾಲ, ಈರಣ್ಣ ಹಾದಿಮನಿ, ಬಸವರಾಜ ಅಮರಗೋಳ, ವಿ.ಎನ್. ಕುಲಕರ್ಣಿ ಇದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.