ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಹಳಿಂಗಳಿ ಭದ್ರಗಿರಿ ಬೆಟ್ಟದ ಶಿವಗಿರಿ ಆಯುರ್ವೇದ ವನ
Team Udayavani, Jul 25, 2022, 6:00 PM IST
ರಬಕವಿ-ಬನಹಟ್ಟಿ; ಜೈನರ ಕಾಶಿ ಎಂದೇ ಖ್ಯಾತಿ ಹೊಂದಿರುವ ರಬಕವಿ ಬನಹಟ್ಟಿ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟ ಅನೇಕರ ಪರಿಶ್ರಮದಿಂದ ಇಂದು ಹಚ್ಚ ಹಸಿರಾಗಿ ಕಂಗೋಳಿಸುತ್ತಿರುವ ಭದ್ರಗಿರಿ ಬೆಟ್ಟದ ಶಿವಗಿರಿ ಆಯೂರ್ವೇದ ವನ ನಿಸರ್ಗ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿದೆ.
ಕಳೆದ 10 ವರ್ಷಗಳ ಹಿಂದೆ ಬೆಟ್ಟಕ್ಕೆ ಆಗಮಿಸಿದ ಜೈನ ಮುನಿ 108 ಶ್ರೀ ಕುಲರತ್ನಭೂಷಣ ಮಹಾರಾಜರು. ಜೈನರ ಕಾಶಿ ಎಂದು ಹೇಳುವ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದ ಎಂದು ಹೇಳಿದರೆ ತಪ್ಪಾಗಲಾರದು. ಜೈನ ಧರ್ಮಿಯರನ್ನು ಹಾಗೂ ಅನ್ಯ ಜಾತಿಯರನ್ನೂ ತಮ್ಮ ಪ್ರವಚನದಿಂದ ಜಾಗೃತಿ ಗೊಳಿಸಿದ ಮುನಿಗಳು, ಲಕ್ಷಾಂತರ ಗಿಡಗಳನ್ನು ಹಚ್ಚುವ ದೊಡ್ಡ ಕಾಯಕಕ್ಕೆ ಮುಂದಾಗಿ ತಮ್ಮ ಪರಿಸರ ಪ್ರೇಮವನ್ನು ಭೂತಾಯಿಗೆ ಅರ್ಪಿಸಿದ್ದಾರೆ. ಅನೇಕ ಅನ್ಯ ಧರ್ಮಿಯರ ಸ್ವಾಮಿಜಿಗಳು, ಸಾಹಿತಿಗಳು, ರಾಜಕೀಯ ಮುಖಂಡರು, ರೈತ ಕುಟುಂಬಗಳು ಸೇರಿದಂತೆ ಅನೇಕ ಸಾಧಕರನ್ನು ಇಲ್ಲಿಗೆ ಕರೆಯಿಸಿ ಅವರ ಹಸ್ತದಿಂದ ಲಕ್ಷಾಂತರ ಗಿಡಗಳನ್ನು ನೆಡುವ ಸಾಧನೆ ಮಾಡಿದ ಮುನಿಗಳನ್ನು ಜನ ಮೆಚ್ಚುತ್ತಿದ್ದಾರೆ.
ಇಲ್ಲಿಗೆ ಬರುವ ಅನೇಕ ಶ್ರಾವಕ ಶ್ರಾವಕಿಯರು, ಕುಮಾರ ಕುಮಾರಿಕೆಯರು ಮಹಾರಾಜರ ಆಶೀರ್ವಾದ ಪಡೆದುಕೊಂಡು ಪ್ರತಿಯೊಬ್ಬರು ಪ್ರತಿದಿನ ಗಿಡಗಳಿಗೆ ನೀರು ಹಾಕುವ ಕಾಯಕದಲ್ಲಿ ನಿರತರಾಗುತ್ತಾರೆ. ಎರಡು ಮೂರು ಎಕರೆಯಲ್ಲಿ ಶಿವಗಿರಿ ವನ ಎಂದು ನಾಮಕರಣಮಾಡಿದ ಮುನಿಗಳು, ಅಲ್ಲಿ ಸಾವಿರಾರು ಆಯುರ್ವೇದ ಗಿಡಗಳನ್ನು ನೆಟ್ಟಿದ್ದಾರೆ. ಅವು ಈಗ ಆಳೇತ್ತರಕ್ಕೆ ಬೆಳೆದು ಆಯುರ್ವೇದ ಔಷಧಿ ನೀಡಲು ಸಿದ್ದವಾಗಿವೆ.
ಇಲ್ಲಿ ಪೆರಲು, ಚಿಕ್ಕು, ಶಿತಾಫಲ, ಮಾವು, ಹುಣಸೆ, ಟೆಂಗು, ಸುಬಾಬುಲ, ಆಲ, ಅರಳಿಮರ, ಗುಲಗಂಜಿ, ಹನುಮ ಫಲ, ರಾಮಫಲ, ನೇರಳೆ, ಬೆಟ್ಟದ ನೆಲ್ಲಿ, ನೀಲಗಿರಿ, ಸಂಪಿಗೆ, ಬೇವು, ಗುಡ್ಡದ ತುಳಸಿ, ಹೊಂಗೆ ಸೇರಿದಂತೆ ಐದು ನೂರಕ್ಕೂ ವಿವಿಧ ಮಾದರಿಯ ಆಯೂರ್ವೇಧಿಕ ಔಷದಿ ನೀಡುವ ಗಿಡಗಳು ಇಂದು ಹೆಮ್ಮರವಾಗಿ ನಿಂತಿವೆ. ಆ ವನದಲ್ಲಿ ಹಾಗೇ ಸುಮ್ಮನೆ ತಿರುಗಾಡಿ ಬಂದರೆ ಮನಸ್ಸಿಗೆ ಸಂತಸ ನೀಡುವುದರೊಂದಿಗೆ ಆರೋಗ್ಯವೆನಿಸುತ್ತದೆ.
ಇಲ್ಲಿ ಗಿಡಗಳು ಮರವಾಗಿ ಬೆಳೆದು ನಿಂತಿದ್ದರಿಂದ ಅನೇಕ ಜಾತಿಯ ಪಕ್ಷಿಗಳು ತಮ್ಮ ಸಂತತಿ ಹೆಚ್ಚಿಸಿಕೊಳ್ಳಲು ಗೂಡು ಕಟ್ಟಿ ಮರಿ ಮಾಡಿಕೊಂಡು ಹೋಗುತ್ತವೆ. ಅಲ್ಲದೆ ನವಿಲು, ಮೊಲ, ವಿಷ ಜಂತುಗಳು ಸಹ ಇಲ್ಲಿ ಭಯವಿಲ್ಲದೆ ತಿರುಗಾಡುತ್ತವೆ.
ಪ್ರವಾಸಿಗರು ಹಾಗೂ ಸಾವಿರಾರು ಭಕ್ತರನ್ನು ತನ್ನತ್ತ ಕೈ ಬೀಸಿ ಕರೆಯಲು ಇಲ್ಲಿನ ಕೆರೆಯಲ್ಲಿ ಜಲಮಂದಿರ ನಿರ್ಮಿಸಲಾಗಿದೆ. ಅದಂತೂ ನೋಡುಗರ ಮನಸ್ಸನ್ನು ಮುದನೀಡುವಂತೆ ಮಾಡುತ್ತದೆ. ಬೆಟ್ಟದಲ್ಲಿ ಜೈನ ಧರ್ಮಿಯರ ಸಾವಿರಾರು ವರ್ಷಗಳ ಹಿಂದಿನವು ಎನ್ನಲಾಗುವ 250 ಕ್ಕೂ ಹೆಚ್ಚು ಗುಂಪಾಗಳಿವೆ. ಅಲ್ಲದೆ ಜೈನಧರ್ಮವನ್ನು ಭೋದಿಸುವಂತೆ ಮುನಿಗಳು ಭಕ್ತರಿಗೆ ವಿಷಯ ಬೋಧನೆ ಮಾಡುವಂತೆ ಕಾಣುವ ಸುಂದರವಾದ ಹಸಿರಿನ ತಪ್ಪಲಿನಲ್ಲಿ ನೂತನವಾಗಿ ಕೃತಕ ಮೂರ್ಥಿಗಳನ್ನು ನಿರ್ಮಿಸಿದ್ದಾರೆ. ಇವು ನೋಡುಗರನ್ನು ಆಕರ್ಷಿಸುತ್ತವೆ. ಇವೆಲ್ಲವನ್ನು ರಕ್ಷಿಸಲು ಕೃತಕವಾಗಿ ನಿರ್ಮಿಸಿದ ಭದ್ರಗಿರಿ ಮಾತೆಯ ಮೂರ್ತಿಯಂತೂ ಭಹಳ ಸುಂದರವಾಗಿ ನಿರ್ಮಿಸಿದ್ದು ಈ ಬೆಟ್ಟಕ್ಕೆ ಮತ್ತಷ್ಟು ಮೆರಗು ನೀಡುತ್ತಿದೆ. ಸಂಜೆ ಹಾಗೂ ಬೆಳಿಗ್ಗೆ ನವಿಲುಗಳು, ಹಕ್ಕಿಗಳ ಚಿಲಿಪಿಲಿ ಹಾಗೂ ಅನೇಕ ಜಾತಿಯ ಪಕ್ಷಿಗಳು ಇಲ್ಲಿ ತಂಡತಂಡವಾಗಿ ಬಂದು ನರ್ತಿಸಿ ಹೂವಿನ ಮಕರಂದ ಹಾಗೂ ಹಣ್ಣು ಹಂಪಲ ತಿಂದು ಹೋಗುವ ಸನ್ನಿವೇಶವಂತೂ ನೋಡುಗರಿಗೆ ಮುದನೀಡುತ್ತವೆ.
ಧರ್ಮ ಜಾಗೃತಿಯೊಂದಿಗೆ ಪರಿಸರ ಬೆಳೆಸಿ ರಕ್ಷಣ ಮಾಡುತ್ತಿರುವ ಜೈನ ಮುನಿ ಕುಲರತ್ನಭೂಷಣ ಮಹಾರಾಜರ ಸೇವೆ ನಿಜಕ್ಕೂ ಶ್ಲಾಘನಿಯ ಎಂದು ಇಲ್ಲಿಗೆ ಆಗಮಿಸುತ್ತಿರುವ ಅನೇಕ ಜೈನ ಹಾಗೂ ಅನ್ಯ ಧರ್ಮಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದು ನನ್ನ ಕೆಲಸವಲ್ಲ ಎಲ್ಲವೂ ಭಕ್ತರ ಸೇವೆ, ಅವರ ಪ್ರಾಮಾಣಿಕ ಹಾಗೂ ಅರ್ಪಣಾಮನೋಭಾವದ ಸೇವೆಯೇ ಇಂದು ಬೃಹತ್ ಅರಣ್ಯ ಸಂಪತ್ತಿನಂತೆ ಈ ಬೆಟ್ಟ ಸುಂದರವಾಗಿ ಕಾಣಲು ಕಾರಣವಾಗಿದೆ. ಮುಂದಿನ ಭವದಲ್ಲಿ ಇದೊಂದು ಜೈನ ಬೃತಹ ಭಕ್ತಿ ಸೊಂಪು ಸೂಸುವ ಜೈನರ ಕಾಶಿಯ ತಾಣವಾಗಲಿದೆ.
– 108 ಶ್ರೀ ಕಲರತ್ನಭೂಷಣ ಮಹಾರಾಜರು.
-ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.