![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jul 4, 2022, 6:08 PM IST
ರಬಕವಿ-ಬನಹಟ್ಟಿ: ನೇಕಾರರಲ್ಲಿ ತಾರತಮ್ಯವನ್ನುಂಟು ಮಾಡುತ್ತಿರುವ ಮತ್ತು ನೇಕಾರರನ್ನು ಕಡೆಗಣಿಸುತ್ತಿರುವ ಸರ್ಕಾರದ ನಡೆಯನ್ನು ಖಂಡಿಸಿ ಜು. 6ರಂದು ಹುಬ್ಬಳ್ಳಿಯಲ್ಲಿರುವ ಜವಳಿ ಸಚಿವರ ಮನೆಗೆ ಮುತ್ತಿಗೆ ಹಾಕಲಾಗುವುದು. ರಾಜ್ಯದ ಮೂಲೆ ಮೂಲೆಗಳಿಂದ ನೇಕಾರರು ಆಗಮಿಸಿ ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ಸ್ಥಳೀಯ ಕಾಡಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ನೇಕಾರರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನೇಕಾರರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬಾದಾಮಿಯಲ್ಲಿ ನೇಕಾರರ ಬೃಹತ್ ಸಮಾವೇಶ ಕರೆಯಲಾಗಿತ್ತು. ಸರ್ಕಾರದ ಯಾವುದೆ ಪ್ರತಿನಿಧಿ ಬಂದು ಅಲ್ಲಿ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸದೆ ಇರುವುದು ಖೇದಕರ ಸಂಗತಿಯಾಗಿದೆ. ಸರ್ಕಾರ ನೇಕಾರರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದರಿಂದ ನೇಕಾರಿಕೆಯ ಉದ್ಯೋಗ ಮತ್ತು ನೇಕಾರರು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನೇಕಾರರ ಹಕ್ಕೊತ್ತಾಯಳನ್ನು ಮಂಡಿಸಲಾಗುವುದು ಎಂದು ಶಿವಲಿಂಗ ಟಿರಕಿ ತಿಳಿಸಿದರು.
ಸರ್ಕಾರ ಕೈಮಗ್ಗಗಳನ್ನು ಉಳಿಸುವ ನಿಟ್ಟಿನಲ್ಲಿ ಪವರಲೂಮ್ ಮಗ್ಗಗಳ ಮೇಲೆ ಕೇವಲ ಕಪ್ಪು ಬಿಳಿ ಬಟ್ಟೆಗಳನ್ನು ಮಾತ್ರ ತಯಾರಿಸಬೇಕು ಎಂದು ಹೇಳಿದೆ. ಈ ನಿಟ್ಟಿನಲ್ಲಿ ಇದೇ 19ರಂದು ವೀಕ್ಷಣೆಗೆ ಬರಲಿದೆ. ಕೈಮಗ್ಗಗಳೇ ಇಂದು ಇಲ್ಲದಂತಾಗಿವೆ. ಅದರ ಮುಂದುವರಿದ ಭಾಗವಾಗಿ ಪವರಲೂಮ್ ಮಗ್ಗಗಳು ಬಂದಿವೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಬೇಕಾದರೆ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸುವುದರ ಜತೆಗೆ ಯುವಕರನ್ನು ಕೈಮಗ್ಗ ನೇಕಾರಿಕೆಯತ್ತ ಕರೆದುಕೊಂಡು ಬರಬೇಕು ಎಂದು ಶಿವಲಿಂಗ ಟಿರಕಿ ತಿಳಿಸಿದರು.
ಉದಯ ಕುಲಗೋಡ, ಗಂಗಪ್ಪ ಒಂಟಗುಡಿ, ಆನಂದ ಬಾಣಕಾರ, ಸುಲೋಚನಾ ಹಳ್ಯಾಳ, ಆನಂದ ಜೀರಗಾಳ, ರಾಜೇಂದ್ರ ಮಿರ್ಜಿ, ರಾಜು ಉದಗಟ್ಟಿ ಇದ್ದರು.
You seem to have an Ad Blocker on.
To continue reading, please turn it off or whitelist Udayavani.