ಮತದಾರರ ಪಟ್ಟಿಗೆ ಆಧಾರ ಜೋಡಣೆ: ರಾಜಕೀಯ ಮುಖಂಡರ ಸಭೆ
Team Udayavani, Jul 29, 2022, 10:10 PM IST
ರಬಕವಿ-ಬನಹಟ್ಟಿ: ಮತದಾರರ ಪಟ್ಟಿಗೆ ಆಧಾರ ಜೋಡಣೆಯ ಕಾರ್ಯಕ್ರಮ ಅಗಸ್ಟ್ 1 ರಿಂದ ನಡೆಯಲಿದ್ದು, ಈ ನಿಟ್ಟಿನಲ್ಲಿ ಮತದಾರರು ತಾವೇ ಖುದ್ದಾಗಿ ಮೊಬೈಲ್ ಆ್ಯಪ್ ಮೂಲಕ ಮಾಡಿಕೊಳ್ಳಬಹುದು ಇಲ್ಲವೆ ತಮ್ಮ ಮನೆಗಳಿಗೆ ಬರುವ ಬಿಎಲ್‌ಓಗಳಿಗೆ ಸೂಕ್ತ ಮಾಹಿತಿ ನೀಡುವುದರ ಮೂಲಕ ಮತದಾರರ ಪಟ್ಟಿಗೆ ಆಧಾರ ಜೋಡಣಿಗೆ ಸಹಕರಿಸಬೇಕು ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದರು.
ಅವರು ಶುಕ್ರವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ನಡೆದ ರಾಜಕೀಯ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಕ್ಷೇತ್ರದಲ್ಲಿ ಬಹಳಷ್ಟು ಜನರು ಆಧಾರ ಗುರುತಿನ ಚೀಟಿಯನ್ನು ಹೊಂದಿದವರಾಗಿದ್ದಾರೆ. ಆಧಾರ ಕಾರ್ಡ್ ಇಲ್ಲದೆ ಇರುವವರು ಬಿಎಲ್‌ಓಗಳು ಕೇಳುವ ದಾಖಲೆಗಳನ್ನು ನೀಡುವುದರ ಮೂಲಕ ಆಧಾರ ಜೋಡಣೆಗೆ ಸಹಕರಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಸಹಕಾರ ಮುಖ್ಯವಾಗಿದೆ.
ಇದೇ 30 ರಂದು ಸ್ಥಳೀಯ ಭದ್ರನವರ ಕಲ್ಯಾಣ ಮಂಟಪದಲ್ಲಿ ಈ ಕುರಿತು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲದಿ ಸ್ಥಳೀಯ ಸಾರ್ವಜನಿಕರು, ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಬೇಕು ಎಂದು ತಹಶೀಲ್ದಾರ್ ಎಸ್.ಬಿ.ಇಂಗಳೆ ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಎಚ್.ವೈ. ಆಲಮೇಲ ಮತದಾರರ ಪಟ್ಟಿಗೆ ಆಧಾರ ಜೋಡಣೆಯ ನಿಯಮಗಳನ್ನು ತಿಳಿಸಿದರು.
ಸಭೆಯಲ್ಲಿ ಉಪ ತಹಶೀಲ್ದಾರ್ ಎಸ್.ಎಲ್.ಕಾಗಿಯವಯರ, ರವಿ ಹುಲ್ಲೆನ್ನವರ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಮಲ್ಲಪ್ಪ ಸಿಂಗಾಡಿ, ರಾಜು ಮೇಲ್ಮನಿ ಸೇರಿದಂತೆ ಇನ್ನೀತರ ರಾಜಕೀಯ ಪಕ್ಷದ ಮುಖಂಡರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.