ಈ ಮನೆಯಲ್ಲಿ ತಾಯಿ – ಮಗ ಇಬ್ಬರೂ ಮಾನಸಿಕ ಅಸ್ವಸ್ಥರು : ಇವರಿಗೆ ಬೇಕಿದೆ ನೆರವಿನ ಹಸ್ತ
Team Udayavani, Aug 9, 2022, 10:55 AM IST
ರಬಕವಿ-ಬನಹಟ್ಟಿ : ಕಷ್ಟವಿಲ್ಲದ ಜೀವನ ಎಲ್ಲಿದೆ ಹೇಳಿ? ಕಷ್ಟ ಕಾಣದ ಜನ, ಮನೆ ಇರುವುದು ಸಾಧ್ಯವಿಲ್ಲ. ಆದರೆ ಈ ಬಡ ಕುಟುಂಬಕ್ಕೆ ಕಷ್ಟಗಳ ಸರಮಾಲೆಯೇ ಸುತ್ತಿಕೊಂಡಿದೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊತ್ತು ಮನೆಗೆ ಆಧಾರವಾಗಬೇಕಿದ್ದ ಇದ್ದೊಬ್ಬ ಮಗ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿದ್ದರೆ ಇಳಿವಯಸ್ಸಿನ ತಾಯಿಯೂ ಮಾನಸಿಕ ಅಸ್ವಸ್ಥಳಾಗಿದ್ದು, ಈತಳ ಪತಿ ನಿಧನವಾಗಿ 10 ವರ್ಷಗಳೇ ಕಳೆದಿವೆ.
ತಾಯಿ ಮತ್ತು ಮಗ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿರುವುದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಕೆಎಚ್‌ಡಿಸಿ ಕಾಲನಿಯ ಮಹಾದೇವಿ ಕೋಪರ್ಡೆ. ಈ ಮೊದಲು ಕೂಲಿ ನಾಲಿ ಮಾಡಿ ಇದ್ದೊಬ್ಬ ಮಗನನ್ನು ಜೋಪಾನ ಮಾಡುತ್ತಿದ್ದ ತಾಯಿಯೂ ಮಾನಸಿಕ ಅಸ್ವಸ್ಥತೆಗೀಡಾಗಿ ಇದೀಗ ಬೇರೆಯವರು ನೀಡಿದ ಆಹಾರವೇ ಗತಿ. ಇಲ್ಲದಿದ್ದರೆ ಉಪವಾಸ.
ಕುಟುಂಬಕ್ಕೆ ಜೀವನ ನಿರ್ವಹಣೆ, ವೈದ್ಯಕೀಯ ವೆಚ್ಚ ಭರಿಸುವ ಶಕ್ತಿಯಿಲ್ಲದ ಸ್ಥಿತಿ ಒಂದೆಡೆಯಾದರೆ ಇನ್ನೊಂದೆಡೆ ಕಷ್ಟಪಟ್ಟು ಕೆಎಚ್‌ಡಿಸಿ ಕಾಲನಿ ಹುಡ್ಕೋ ಯೋಜನೆಯಡಿ ಪಡೆದ ಮನೆ ಸುಣ್ಣ, ಬಣ್ಣ ಕಾಣದೇ ಮೇಲ್ಛಾವಣಿ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿದೆ.
ಇಬ್ಬರೇ ಇರುವ ಈ ಕುಟುಂಬಕ್ಕೆ ಮಾನಸಿಕ ಅಸ್ವಸ್ಥ ತಾಯಿಗೆ ಅಸ್ವಸ್ಥ ಮಗನೇ ಆಧಾರ. ಸಂಸಾರದ ರಥವನ್ನು ಎಳೆಯುವದಕ್ಕೆ ಈ ಸಂಸಾರ ಪಡುವ ಕಷ್ಟದ ಮೇಲೆ ಅನಾರೋಗ್ಯ ಮುತ್ತಿಕ್ಕಿ ಇವರ ಬದುಕು ಬೆಂದ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ಇದನ್ನೂ ಓದಿ : ಉತ್ತರಪ್ರದೇಶ: ಐಟಿ ದಾಳಿಯಲ್ಲಿ 153 ಕೋಟಿ ರೂ. ಕಪ್ಪು ಹಣ ಪತ್ತೆ, ಎಸ್ಪಿ ಮುಖಂಡನ ಅಕ್ರಮ ಬಯಲು
ತೀವ್ರ ಸಂಕಷ್ಟದಲ್ಲಿ ಬದುಕು ಸವೆಸುತ್ತಿರುವ ಈ ಕುಟುಂಬವು ಇದೀಗ ಸುರಿಯುತ್ತಿರುವ ಮಳೆಗೆ ಮೇಲ್ಛಾವಣಿ ಶಿಥಿಲಗೊಂಡು ಸೋರುತ್ತಿರುವ ಮನೆಯಲ್ಲಿಯೇ ಹಗಲು-ರಾತ್ರಿ ನೀರಿನಲ್ಲಿ ಬದುಕು ಸಾಗಿಸುತ್ತಿರುವುದು ಎಂಥವರ ಮನಸ್ಸೂ ಕಲಕುವಂಥದ್ದು.
ಮನೆಯಲ್ಲಿರುವ ಕೈಮಗ್ಗವೇ ಮಗನಿಗೆ ಮಂಚವಾದರೆ, ತಾಯಿ ನೀರಿನಲ್ಲಿ ಮುಳುಗಿರುವ ಮನೆಯೊಳಗೆ ಹಾಗೇ ಕುಳಿತುಕೊಳ್ಳುವ ರೂಢಿ.
ಇದೀಗ ಈ ಕುಟುಂಬಕ್ಕೆ ಚಿಕಿತ್ಸೆ ಹಾಗು ತಲೆಯ ಮೇಲಿನ ಸೂರು ಗಟ್ಟಿಯಾದರೆ ಉಳಿದ ಕಷ್ಟಗಳನ್ನು ಮೆಟ್ಟಿ ಹೇಗೋ ಬದುಕು ಕಟ್ಟಿಕೊಳ್ಳಬಹುದೆಂಬ ಆತ್ಮವಿಶ್ವಾಸವಿದೆ.
ಮನೆ ರಿಪೇರಿಗೆ ಸಾರ್ವಜನಿಕರ ಕಿಂಚಿತ್ತು ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುಟುಂಬಕ್ಕೆ ಮನೆ ರಿಪೇರಿಗೆ ಧನಸಹಾಯ ಮಾಡಲಿಚ್ಚಿಸುವವರು 91481-71672 ನಂಬರ್ ಗೆ ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.