ರಬಕವಿ-ಬನಹಟ್ಟಿ ಪ್ರಾಥಮಿಕ ಶಾಲೆ: ಹೆಸರಿಗೆ ಐದು ಕೊಠಡಿ, ಉಪಯೋಗಕ್ಕೆ ಒಂದೇ
ನೂರಕ್ಕೂ ಅಧಿಕ ಪ್ರಾಥಮಿಕ ಶಾಲೆ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಪಾಠ, ಊಟ
Team Udayavani, May 22, 2022, 9:57 PM IST
ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ನಗರ ಪ್ರದೇಶಗಳಲ್ಲಿ ಅನೇಕ ಸರ್ಕಾರಿ ಪ್ರಾಥಮಿಕ ಶಾಲೆಗಳ ಕಟ್ಟಡಗಳು ಸಂಪೂರ್ಣ ಹಾಳಾಗಿ ಮಕ್ಕಳು ಭಯದ ವಾತವಾರಣದಲ್ಲಿ ಅಕ್ಷರಭ್ಯಾಸ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಹೌದು ಇದು ಬನಹಟ್ಟಿ ನಗರದ ಲಕ್ಷ್ಮೀ ನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಐದು ಕೊಠಡಿಗಳು ಇದ್ದು, ಅದರಲ್ಲಿ ೪ ಕೊಠಡಿಗಳು ಮಳೆ ಬಂದರೆ ಸೊರುತ್ತವೆ. ಆಗ ಎಲ್ಲ ತರಗತಿಯ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕುಳಿತುಕೊಂಡು ಅಕ್ಷರಭ್ಯಾಸ ಮಾಡುತ್ತಾರೆ.
ಇಲ್ಲಿ ಒಟ್ಟು 152 ದ್ಯಾರ್ಥಿಗಳ ಹಾಜರಾತಿ ಇದ್ದು, ಪ್ರತಿ ದಿನ 125 ಕ್ಕೂ ಅಧಿಕ ಸಂಖ್ಯೆಯ ಮಕ್ಕಳ ಹಾಜರಾತಿ ಇದೆ. ಏಳು ಜನ ಶಿಕ್ಷಕರಿದ್ದಾರೆ. ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವುದರಿಂದ ಅನೇಕ ಶ್ರೀಮಂತರ ಮಕ್ಕಳು ಸಹ ಈ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಉತ್ತಮ ಶಿಕ್ಷಕರ ತಂಡ ಇರುವುದರಿಂದ ಸರ್ಕಾರ ಮಾರ್ಗದರ್ಶನ ನೀಡಿರುವ ಎಲ್ಲ ಶೈಕ್ಷಣಿಕ ಅಭಿವೃದ್ಧಿಯ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದೆ. ಈ ಶಾಲೆಯಲ್ಲಿ ಏಳನೇ ತರಗತಿ ಪಾಸಾಗಿ ಹೊರಹೋಗುವ ಮಕ್ಕಳಿಗೆ ಖಾಸಗಿ ಪೌಢ ಶಾಲೆಯವರು ಕೈ ಹಿಡಿದು ಕರೆದುಕೊಂಡು ಹೋಗುವ ವಾತಾವರಣ ನಿರ್ಮಾಣವಾಗಿದೆ ಎನ್ನುತ್ತಾರೆ ಇಲ್ಲಿನ ಮುಖ್ಯ ಶಿಕ್ಷಕಿ ಸುನಂದಾ ಕಂಠಿಮಠ.
ಆದರೆ ಕಟ್ಟಡ ವ್ಯವಸ್ಥೆ ಇಲ್ಲ, ಶಾಲೆಯ ಗೋಡೆಗೆ ಅಂಟಿಕೊಂಡಂತೆ ಇರುವ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ತಂತಿಗಳು, ಈ ತಂತಿ ತಗುಲಿ ವಿದ್ಯಾರ್ಥಿಯೋರ್ವ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದಾನೆ. ಹೆಸ್ಕಾಂ ನವರಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದರು. ಈ ತಂತಿ ಸರಿ ಪಡಿಸಿಲ್ಲ. ಶಾಲೆಯ ಕಾಂಪೌಂಡ್ ಗೆ ಹೊಂದಿಕೊಂಡಂತೆ ಟಿಸಿ ಮತ್ತು ಬಾಗಿದ ಕಂಬಗಳಿಂದ ಜೋತುಬಿದ್ದ ತಂತಿ ಇದ್ದು, ಇವುಗಳನ್ನು ತೆರವು ಗೊಳಿಸಬೇಕು. ಹಳೆ ಕಟ್ಟಡ ಒಂದನ್ನು ಸಂಪೂರ್ಣ ನೆಲಸಮ ಮಾಡಿ ಅಲ್ಲಿಯೂ ಒಂದೆರಡು ಕೊಠಡಿಗಳನ್ನು ನಿರ್ಮಿಸಬೇಕು. ಬಿಸಿ ಊಟದ ಕೊಠಡಿ ಸೇರಿ ಹಳೆ ಕಟ್ಟಡವನ್ನು ಸಂಪೂರ್ಣ ನೆಲ ಸಮ ಮಾಡಿ ಹೊಸ ಕಟ್ಟಡ ನಿರ್ಮಿಸಿ ಕೊಟ್ಟರೆ ಸರ್ಕಾರಿ ಶಾಲೆಗೆ ಇನ್ನೂ ಹೆಚ್ಚಿನ ಮಕ್ಕಳು ವಿದ್ಯಾಬ್ಯಾಸ ಮಾಡಲು ಬರುತ್ತಾರೆ. ಅಂದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿಯಾಗಲು ಸಾಧ್ಯ. ಕ್ಷೇತ್ರದ ಶಾಸಕರು ಶೈಕ್ಷಣಿಕ ಅಭಿವೃದ್ಧಿಗೆ ಇನ್ನಷ್ಟು ಪ್ರಯತ್ನಿಸಬೇಕು ಎಂದು ಇಲ್ಲಿನ ಪಾಲಕರು ಮನವಿ ಮಾಡಿದ್ದಾರೆ.
ಕ್ಷೇತ್ರದಲ್ಲಿ ಇಂಥಹ ಅನೇಕ ಸರ್ಕಾರಿ ಶಾಲೆಗಳು ಶಿಥಿಲಗೊಂಡಿವೆ. ಈ ಕೆಲಸವನ್ನು ಶಾಸಕರೇ ಮಾಡಬೇಕಿಂದಿಲ್ಲ. ಸರ್ಕಾರ ನೇಮಿಸಿರುವ ಬಿಆರ್‌ಸಿ, ಸಿಆರ್‌ಪಿ, ಬಿಇಓ ಮತ್ತು ಶಾಶಕರ ಆಪ್ತ ಕಾರ್ಯಕರ್ತರು ಏನು ಮಾಡುತ್ತಾರೆ. ಬರೀ ಫೋಟೊ, ಸನ್ಮಾನ ಇದೇ. ಬೇರುಮಟ್ಟದಲ್ಲಿ ಶಿಕ್ಷಣ ಅಭಿವೃದ್ಧಿ ಯಾದಾಗ ಮಾತ್ರ ದೇಶದ ಮುಂದಿನ ಭವಿಷ್ಯ ಒಳ್ಳೆದಾಗಲು ಸಾಧ್ಯ ಎನ್ನುತ್ತಾರೆ ಇಲ್ಲಿನ ಮಕ್ಕಳ ಪಾಲಕರು.
ನಾನು ಸ್ವತಃ ಈ ಶಾಲೆಗೆ ಹೋಗಿ ಭೇಟಿ ನೀಡಿ ಬಂದಿದ್ದೇನೆ. ಕೂಡಲೆ ಇಲ್ಲಿನ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಕೂಡಲೇ ಕ್ರೀಯಾ ಯೋಜನೆ ರೂಪಿಸಿ ಡಿಸಿ ಯವರಿಗೆ ಕಳಿಸಿ ಸರಿಪಡಿಸಿ ವಿಷೇಶ ಅನುದಾನದಡಿ ಹಣಬಿಡುಗಡೆಗೊಳಿಸಿ ಉತ್ತಮ ಗುಣಮಟ್ಟದ ಕೊಠಡಿಗಳ ನಿರ್ಮಿಸಲು ಆದೇಶ ಮಾಡುತ್ತೇನೆ.
– ಸಿದ್ದು ಸವದಿ. ಶಾಸಕರು. ತೇರದಾಳ ಮತಕ್ಷೇತ್ರ.
ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.