Rabkavi Banhatti: ಜಗದಾಳದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಗಡೆಯಾಟ
ಗಮನ ಸೆಳೆದ ಗ್ರಾಮೀಣ ಕ್ರೀಡೆ
Team Udayavani, Oct 29, 2024, 8:14 PM IST
ರಬಕವಿ-ಬನಹಟ್ಟಿ: ಸಮೀಪದ ಜಗದಾಳ ಗ್ರಾಮದಲ್ಲಿ ಬ್ರಹ್ಮದೇವರ ಜಾತ್ರೆ ನಿಮಿತ್ತ (ಅ.27-28) ಭಾನುವಾರ, ಸೋಮವಾರ ರಾಜ್ಯಮಟ್ಟದ ಹಗಲು-ರಾತ್ರಿ ಪಗಡಿ ಪಂದ್ಯಾವಳಿಗಳು ನಡೆದವು. ಪಗಡೆ ಪಂದ್ಯಗಳು ನೂರಾರೂ ಜನರನ್ನು ಆಕರ್ಷಿಸಿದವು.
ಇಂದಿನ ಆಧುನಿಕ ಕಾಲದಲ್ಲಿಯೂ ಮಹಾಭಾರತದ ಶಕುನಿ ಮತ್ತು ಪಾಂಡವರ ನಡುವಿನ ಆಟವನ್ನು ನೆನಪಿಸುವ ಈ ಆಟ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಕೂಡಾ ಮಹತ್ವವನ್ನು ಪಡೆದಿದ್ದು, ಹಿರಿಯರ ಜೊತೆ ಯುವಕರು ಕೂಡಾ ಪಗಡೆಯಾಟವನ್ನು ಆಡುವುದರ ಮೂಲಕ ಪಗಡೆಯಾಟವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದ್ದಾರೆ.
ಸಮೀಪದ ಜಾನಪದರ ಗ್ರಾಮ ಜಗದಾಳ ಗ್ರಾಮದಲ್ಲಿ ಪ್ರತಿ ವರ್ಷ ಬ್ರಹ್ಮದೇವರ ಹಬ್ಬದ ನಿಮಿತ್ತ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಪಗಡೆ ಸ್ಪರ್ಧೆಯನ್ನು ಏರ್ಪಡಿಸುವುದರ ಜೊತೆಗೆ ಅದರಲ್ಲಿ ಜಯಶಾಲಿಯಾದವರಿಗೆ ಬಾರಿ ಬಹುಮಾನ ಕೂಡಾ ಕೊಡುವ ವಾಡಿಕೆ ಇಟ್ಟುಕೊಂಡಿದ್ದಾರೆ.
ಸುಮಾರು 30 ವರ್ಷಗಳಿಂದ ಪಗಡೆಯಾಟದ ಸ್ಪರ್ಧೆಯನ್ನು ಗ್ರಾಮದ ಹಿರಿಯರು ನಡೆಸಿಕೊಂಡು ಬಂದಿದ್ದು, ಅದು ಇಂದಿಗೂ ಮುಂದುವರೆದಿದೆ. ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿರುವ ಪಗಡೆ ಸ್ಪರ್ಧೆ. ಈ ಭಾಗದಲ್ಲಿ ಹೆಚ್ಚು ಹೆಚ್ಚು ಸ್ಫರ್ಧೆಗಳು ನಡೆಯುತ್ತಿವೆ. ಸ್ಪರ್ಧೆಯಲ್ಲಿ ಬಾಗಲಕೋಟ, ಬಿಜಾಪುರ, ಗದಗ, ಬೆಳಗಾಂವ ಹಾಗೂ ಮಹಾರಾಷ್ಟ್ರ ರಾಜ್ಯದ ಸಾಂಗಲಿ, ಕೊಲ್ಲಾಪುರ ಜಿಲ್ಲೆಗಳಿಂದ ಒಟ್ಟು 56 ತಂಡಗಳು ಆಗಮಿಸಿದ್ದವು.
ಬಾರಿ ಕೂತುಹಲ ಮೂಡಿಸಿದ್ದ ಪ್ರತಿ ಪಂದ್ಯಗಳು ನೋಡುಗರ ಕಣ್ಮಣ ಸೆಳೆದವು. ಗ್ರಾಮೀಣ ಕ್ರೀಡೆಯಾಗಿರುವ ಪಗಡೆ ಈಗಲೂ ಕೂಡಾ ಇಂತಹ ಹಳ್ಳಿಗಳಲ್ಲಿ ತನ್ನದೇ ಆದ ಅಸ್ಥಿತ್ವವನ್ನು ಉಳಿಸಿಕೊಂಡು ಹೊರಟಿದ್ದು ಅದಕ್ಕೆ ಜಗದಾಳ ಗ್ರಾಮದ ಬ್ರಹ್ಮದೇವರ ಹಬ್ಬದ ಜಾತ್ರಾ ಕಮಿಟಿ ಕೂಡಾ ಟೊಂಕ ಕಟ್ಟಿ ನಿಂತಿದೆ. ದೀಪಾವಳಿಯಂದು ವಿಶೇಷವಾಗಿ ಪೂಜಿಸಲ್ಪಡುವ ಬ್ರಹ್ಮದೇವರ ಹಬ್ಬವನ್ನು ಪ್ರತಿ ವರ್ಷ ದೇವಸ್ಥಾನದ ಮುಂದೆ ವಿಶೇಷವಾಗಿ ಬ್ರಹ್ಮದೇವರ ಜಾತ್ರಾ ಕಮಿಟಿಯ ಸದಸ್ಯರು ಆಚರಿಸುತ್ತಾ ಬಂದಿದ್ದಾರೆ.
ಹಿರಿಯರಿಗೆ ಮಾತ್ರ ಸೀಮಿತವಾದ್ದ ಪಗಡೆಯಾಟ ಯುವಕರನ್ನು ಆಕರ್ಷಿಸುತ್ತಿರುವುದು ಪಗಡೆಯ ಉಳಿವಿಗೆ ಸಾಕ್ಷಿಯಾಗಿದೆ.
ಹನಮಂತ ಗೌಡ ಪಾಟೀಲ, ಹೊನ್ನಪ್ಪ ಕುಳ್ಳೊಳ್ಳಿ, ಕಾಡಪ್ಪ ಕಾಡಪ್ಪ ಕಬಾಡಗಿ, ಉಳ್ಳಾಗಡ್ಡಿ, ಮಹಾನಿಂಗ ಚಿಂಚಲಿ, ಶಿವಾನಂದ ಕಚ್ಚು, ಸುಭಾಸ ಉಳ್ಳಾಗಡ್ಡಿ ಸೇರಿದಂತೆ ಅನೇಕರಿದ್ದರು.
ಜಗದಾಳ ಗ್ರಾಮದ ಮುಖಂಡ ಶೇಖರ ನೀಲಕಂಠ ಮಾತನಾಡಿ, ಇಂದಿನ ದಿನಗಳಲ್ಲಿ ನಮ್ಮಿಂದ ದೂರವಾಗುತ್ತಿರುವ ದೇಸಿ ಕ್ರೀಡೆಗಳನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ನಮ್ಮ ಮುಂದಿನ ಪೀಳಿಗೆಗೆ ದೇಸಿ ಕ್ರೀಡೆಗಳನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿ, ಬ್ರಹ್ಮದೇವರ ಜಾತ್ರೆಯ ಸಂದರ್ಭದಲ್ಲಿ ಮೂರು ದಶಕಗಳಿಂದ ಪಗಡೆ ಪಂದ್ಯಾವಳಿಯನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಆರಂಭದಲ್ಲಿ 100ಕ್ಕೂ ಹೆಚ್ಚು ತಂಡಗಳು ಭಾಗವಹಿಸುತ್ತಿದ್ದವು. ಬೇರೆ ಕಡೆಯಿಂದ ಆಗಮಿಸುವ ತಂಡಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
50ಕ್ಕೂ ಹೆಚ್ಚು ತಂಡಗಳ ಭಾಗಿ; ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ 50ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮೂರು ದಿನಗಳ ಕಾಲ ಪಗಡೆ ಪಂದ್ಯಾವಳಿಗಳು ನಡೆಯಲಿದ್ದು, ಜೊತೆಗೆ ಚೆಸ್, ಬ್ಯಾಕ್ ಹ್ಯಾಂಡ್ ಸೈಕಲ್ ಸ್ಪರ್ಧೆ, ಓಟದ ಸ್ಪರ್ಧೆ ಮತ್ತು ಜಂಗಿ ನಿಕಾಲಿ ಕುಸ್ತಿಗಳನ್ನು ಹಮ್ಮಿಕೊಳ್ಳಲಾಗಿದೆ.
-ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.