Rabkavi Banhatti ಮಾನವೀಯತೆ ಮೆರೆದ ಸಮಸ್ತ ದೈವ ಮಂಡಳಿ
ಶವ ಸಂಸ್ಕಾರದಲ್ಲಿ ಅಮಾನವೀಯ ಘಟನೆ
Team Udayavani, Jun 11, 2024, 6:21 PM IST
ರಬಕವಿ ಬನಹಟ್ಟಿ : ಶವ ಸಂಸ್ಕಾರದಲ್ಲಿ ಕೋವಿಡ್ ಸಂದರ್ಭ ಅಮಾನವೀಯ ಘಟನೆಗಳನ್ನು ನೋಡಿದ್ದೇವೆ. ಮಂಗಳವಾರ ಇಲ್ಲೊಂದು ಇಡೀ ಸಮಾಜಕ್ಕೆ ನೋವಾಗುವಂಥಹ ಕಾರ್ಯ ನಡೆದು ಕೊನೆಗೂ ಸಮಸ್ತ ದೈವ ಮಂಡಳಿಯ ಮಾನವೀಯತೆಯಿಂದ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ.
ಆಗಿದ್ದೇನು: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಗುರು ಕಿತ್ತೂರ(51) ಎಂಬಾತ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ. ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ಸ್ವತಃ ತೆರಳಿದಾಗ, ಶಸ್ತ್ರಚಿಕಿತ್ಸೆ ಮಾಡಬೇಕು. ಸರ್ಕಾರದ ಯೋಜನೆಯಿಂದ ಉಚಿತವಾಗಿ ಮಾಡಲಾಗುವುದೆಂದು ತಿಳಿಸಿದ್ದರು. ಇದಕ್ಕೆ ಕುಟುಂಬದವರ ಸಮರ್ಪಕ ಸಹಕಾರವಿಲ್ಲದ ಕಾರಣ ಚಿಕಿತ್ಸೆ ಗಗನಕುಸುಮವಾಗಿತ್ತು. ಕಳೆದೆರಡು ತಿಂಗಳಿಂದ ತನ್ನ ಹೆಂಡತಿಯ ಮನೆಯಲ್ಲಿದ್ದ ಮೃತ ಗುರು ಮನೆ ಬಿಟ್ಟು ಜಿಗುಪ್ಸೆಗೊಂಡಿದ್ದರು.
ನಗರದ ವೈಭವ ಚಿತ್ರಮಂದಿರ ಬಳಿಯ ರಸ್ತೆಯ ಪಕ್ಕ ಮೃತನಾಗಿರುವುದನ್ನು ಕಂಡು ಓಣಿಯ ಜನ ಮನೆಗೆ ಶವವನ್ನು ತಂದಾಗ, ಮನೆಯವರು ಅಮಾನವೀಯ ಕಾರ್ಯದಿಂದ ಮನೆಯೊಳಗೆ ಶವ ಕೂಡ್ರಿಸಬೇಡಿ ಎಂದಿದ್ದಾರೆ.
ಇದರಿಂದ ಬೇಸತ್ತ ಸಹಾಯಕರು ಅನಿವಾರ್ಯವಾಗಿ ಮನೆ ಮುಂದಿರುವ ವಿದ್ಯುತ್ ಕಂಬಕ್ಕೆ ಕೂಡ್ರಿಸುವಂತಾಯಿತು.
ಮಾನವೀಯತೆ ಮೆರೆದ `ಸಮಸ್ತ ದೈವ’: ಇದನ್ನು ಗಮನಿಸಿದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಹಿರಿಯರು ಕೊನೆಗೂ ಕುಟುಂಬಸ್ಥರನ್ನು ಮನವೊಲಿಸಿ ಕೆಲ ಹೊತ್ತಿನ ನಂತರ ಶವವನ್ನು ಮನೆಯಲ್ಲಿ ಕೂಡ್ರಿಸುವ ವ್ಯವಸ್ಥೆ ಮಾಡಿ ಅಂತ್ಯ ಸಂಸ್ಕಾರ ಮಾಡಿದ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.