Rain ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ
Team Udayavani, Jul 4, 2024, 10:34 PM IST
ಮಹಾಲಿಂಗಪುರ: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮಳೆಯಾಗಿ ಮತ್ತು ಅಂತರಾಜ್ಯದಲ್ಲಿ ಮಳೆಯಾಗಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಗೆ ಪ್ರವಾಹ ಬಂದು ಮಹಾಲಿಂಗಪುರ ಸುತ್ತಮುತ್ತಲಿನ ಗ್ರಾಮಗಳು ಪ್ರವಾಹ ಎದುರಿಸುವದರಿಂದ ವಿಪತ್ತು ನಿರ್ವಹಣೆಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.
ಪುರಸಭೆಯಲ್ಲಿ ಜರುಗಿದ ಸ್ಥಳೀಯ ಮಟ್ಟದ ಅ ಧಿಕಾರಿಗಳ ವಿಪತ್ತು ನಿರ್ವವಣಾ ಮುಂಜಾಗ್ರತೆಯ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರರಾಜ್ಯಗಳ ಜಲಾಶಯಗಳಿಂದ ನದಿಗಳಿಗೆ ನೀರು ಬಿಡುವುದರಿಂದ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದರಿಂದ ಜನ, ಜಾನುವಾರು, ಆಸ್ತಿಹಾನಿ, ಪ್ರಾಣಹಾನಿ, ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗ್ರತೆಗಾಗಿ ಕೆೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಸಿ.ಎಂ.ವಜ್ಜರಮಟ್ಟಿ ಮಾತನಾಡಿ, ರೋಗರುಜಿನಗಳು ಹರಡದಂತೆ ನಿಯಂತ್ರಣ ಹಾಗೂ ವೈದ್ಯಕೀಯ ಉಪಚಾರವನ್ನು ಸಕಾಲಕ್ಕೆ ಒದಗಿಸಲಾಗುವುದು ಎಂದರು.
ಹೆಸ್ಕಾಂನ ಸೆಕ್ಷನ್ ಆಫೀಸರ್ ಆರ್.ಆರ್.ಬಾಗೋಜಿ ಮಾತನಾಡಿ, ಮಳೆ ಗಾಳಿಗೆ ಕಂಬ ಬಿದ್ದರೆ, ತಂತಿಗಳು ಹರಿದರೆ ತಕ್ಷಣ ದುರಸ್ಥಿ ಮಾಡಲಾಗುವುದು.ಈಗಾಗಲೇ ಜನನಿಬೀಡ ಪ್ರದೇಶಗಳಲ್ಲಿನ ಟಿಸಿಗಳನ್ನು ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ. ವಿದ್ಯುತ್ ತಂತಿಗಳಿಗೆ ತಾಗುವು ಗಿಡಗಳನ್ನು ತೆರವುಗೊಳಿಸುವ ಕೆಲಸ ನಡೆದಿದೆ. ವಿದ್ಯುತ್ ಅಪಾಯಕ್ಕೆ ಸಂಬಂಸಿದ ವಿಷಯಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು.
ನೀರಾವರಿ ಇಲಾಖೆಯ ವೆಂಕಟೇಶ ಬೆಳಗಲ್ ಮಾತನಾಡಿ ಕಾಲುವೆಯ ನೀರು ಕೆಂಗೇರಿಮಡ್ಡಿಯ ಬಡಾವಣೆಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗು ಸಾಧ್ಯತೆ ಇರುವದರಿಂದ, ನೀರು ನಿಲ್ಲದಂತೆ ಅಗತ್ಯ ಮುನ್ನಚ್ಚರಿಕೆವಹಿಸಲಾಗುವುದು ಎಂದರು.
ಮಹಾಲಿಂಗಪುರ ಗ್ರಾಮಲೆಕ್ಕಾಧಿಕಾರಿ ಎಂ.ಎಸ್. ನೀಲನ್ನವರ ಮಾತನಾಡಿ ಬಿದ್ದ ಮನೆಗಳು ಹಾಗೂ ಶೀಥಿಲಾವಸ್ಥೆಯಲ್ಲಿನ ಮನೆಗಳನ್ನು ಸರ್ವೇ ಮಾಡಿ ವರದಿ ಸಲ್ಲಿಸುತ್ತೇವೆ ಎಂದರು.
ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ವ್ಹಿ.ಎಸ್.ಮಂಜೂರಕರ ಮಾತನಾಡಿ ಅಂಗನವಾಡಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯನ್ನು ಮಾಡುತ್ತೇವೆ ಎಂದರು.
ಪುರಸಭೆಯ ವಿಪತ್ತು ನಿರ್ವಹಣಾ ಸಹಾಯವಾಣಿ ಸಿಬ್ಬಂದಿ ಎಸ್.ಎಂ.ಕಲಬುರ್ಗಿ, ಎಂ.ಎಂ.ಮೂಗಳಖೋಡ, ಎಂ.ಕೆ.ದಳವಾಯಿ, ಆರ್.ಕೆ.ಮಾಂಗ ಅವರ ಮೂಲಕ ಅತಿವೃಷ್ಟಿ ವಿಪತ್ತಿನಿಂದಾಗುವು ಅನಾಹುತಗಳನ್ನು ತಡೆಯಲು ಪ್ರಯತ್ನಿಸುತ್ತೇವೆ ಎಂದು ಪುರಸಭೆಯ ವ್ಯವಸ್ಥಾಪಕ ಎಸ್.ಎನ್.ಪಾಟೀಲ ತಿಳಿಸಿದರು.
ಪುರಸಭೆ ಸದಸ್ಯ ಶೇಖರ ಅಂಗಡಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವಮಠ ಮಾತನಾಡಿದರು. ಪುರಸಭೆ ಸದಸ್ಯ ರಾಜು ಗೌಡಪ್ಪಗೋಳ, ಶಿಕ್ಷಕ ಎಂ.ಡಿ.ಕಾಮರಡ್ಡಿ, ಗ್ರಾಮಲೆಕ್ಕಾಧಿಕಾರಿ ಟಿ.ಎಂ.ದೇವರಮನಿ, ಬಸರಿಗಿಡದ, ಸಮಾಜ ಕಲ್ಯಾಣ ಇಲಾಖೆಯ ವಿ.ಎ.ಬುದ್ನಿ ಸೇರಿದಂತೆ ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Soldier: ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ; ಮಹಾಲಿಂಗಪುರದ ಯೋಧ ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.