ವಿಚ್ಛೇದನಕ್ಕೆ ಹೋದವರನ್ನು ಮತ್ತೆ ಒಂದು ಮಾಡಿಸಿದ ನ್ಯಾಯಾಧೀಶರು !

ಜಿಲ್ಲಾ ನ್ಯಾಯಾಲಯದಲ್ಲಿ ಅಪರೂಪದ ಪ್ರಸಂಗ

Team Udayavani, Sep 14, 2019, 8:34 PM IST

Court

ಬಾಗಲಕೋಟೆ : ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟು, ಇನ್ಮುಂದೆ ಒಟ್ಟಿಗೆ ಬಾಳಲು ಆಗಲ್ಲ ಎಂದು ವಿಚ್ಛೇದನಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ್ದ ಎರಡು ಜೋಡಿ, ವಕೀಲರು ಮತ್ತು ನ್ಯಾಯಾಧೀಶರ ಮನವೋಲಿಕೆಯಿಂದ ಪುನಃ ಒಂದಾಗಿ ಜೀವನ ನಡೆಸಲು ಮುಂದಾಗಿರುವ ಪ್ರಸಂಗ ಶನಿವಾರ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು.

ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಕೃಷ್ಣಾ ಮತ್ತು ಜ್ಯೋತಿ ದಂಪತಿ ಹಾಗೂ ಕಮಲ್ ಮತ್ತು ಕೃಪಾ ಎಂಬ ಎರಡು ಜೋಡಿಗಳು, ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಆದರೆ, ವಕೀಲರಾದ ಸಂತೋಷ ಜೋಶಿ, ಎಸ್.ಎನ್. ಯಾದವಾಡ, ಕೆ.ಎಚ್. ಲಮಾಣಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನೀಲ ಕಟ್ಟಿ ಅವರ ಸಲಹೆ ತಿಳುವಳಿಕೆ ಹಿನ್ನೆಲೆಯಲ್ಲಿ ಈ ಎರಡೂ ಕುಟುಂಬ, ಪುನಃ ಒಂದಾಗಿ ಜೀವನ ನಡೆಸಲು ಒಪ್ಪಿದ್ದಾರೆ. ಹೀಗಾಗಿ ಇವರ ವಿಚ್ಛೇದನ ಕೋರಿದ ಅರ್ಜಿಯನ್ನು ಲೋಕ ಅದಾಲತ್‌ನಲ್ಲಿ ಪರಸ್ಪರ ಪುನಃ ಒಂದಾಗಿಸುವಂತೆ ಇತ್ಯರ್ಥಪಡಿಸಲಾಯಿತು.

ಕುಟುಂಬದಲ್ಲಿ ಪತಿ ಪತ್ನಿಯರ ನಡುವೆ ವಿರಸ ಉಂಟಾಗಿ ಬೇರೊಬ್ಬರ ಕಿವಿ ಮಾತಿಗೆ ತಲೆದೂಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿರುವ ದಂಪತಿಗಳು ಪರಸ್ಪರ ವಿಶ್ವಾಸದಿಂದ ವಿಚಾರಿಸಿ ಸಂಸಾರ ನಡೆಸಿದಾಗ ಇಂತಹ ಘಟನೆಗಳು ಜರುಗುವುದಿಲ್ಲ. ಆದರೆ ಸಂಸಾರಗಳಲ್ಲಿ ಪತಿ ಪತ್ನಿಯರ ನಡುವೆ ಮೂರನೇ ವ್ಯಕ್ತಿಯ ಮಾತಿನಿಂದಾಗಿ ವಿರಸ ಉಂಟಾಗಿ ವಿಚ್ಛೇದನ ಹಂತಕ್ಕೆ ತಲುಪುತ್ತವೆ. ಸಂಸಾರ ಎಂದರೆ ಕೇವಲ ಪತಿ ಪತ್ನಿಯರಲ್ಲದೇ ತಂದೆ ತಾಯಿ, ಸಂಬಂಧಿಕರು ಇವರಿಬ್ಬರ ವ್ಯಾಜ್ಯದಿಂದಾಗಿ ನಲುಗಿ ಹೋಗಿರುತ್ತಾರೆ. ಇವರಿಬ್ಬರನ್ನು ಕುಡಿಸುವುದರ ಜೊತೆಗೆ ಒಡೆದ ಕುಟುಂಬಗಳನ್ನು ಒಂದಾಗಿಸುವ ಕಾರ್ಯ ನಿರಂತರವಾಗಿ ನಡೆಸುತ್ತಾ ಬಂದಿದ್ದು, ಈ ಅದಾಲತ್‌ನಿಂದ ನ್ಯಾಯಾಲಯದ ಸಮಯ ವ್ಯಯವಾಗದೇ ಹಾಗೂ ಬಾಕಿ ಪ್ರಕರಣಗಳು ಇತ್ಯರ್ಥಗೊಳಿಸಲಾಗುತ್ತಿದೆ. ನೊಂದ ಕುಟುಂಬಗಳು ಸಂತಸದಿಂದ ಒಂದಾಗುವ ಅವಕಾಶ ದೊರಕಿಸಿಕೊಟ್ಟಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನೀಲ ಕಟ್ಟಿ ತಿಳಿಸಿದ್ದಾರೆ.

ಪತಿ ಪತ್ನಿಯರು ಸ್ವಂತ ವಿವೇಚನೆ ಇಲ್ಲದೇ ಬೇರೊಬ್ಬರ ಮಾತಿಗೆ ಮರುಳಾಗಿ ತಮ್ಮ ಸಂಸಾರ ಹಾಳು ಮಾಡಿಕೊಳ್ಳುತ್ತಿರುವುದರಿಂದ ಪರಸ್ಪರ ವಿರಸ ಉಂಟಾಗಿ ವಿಚ್ಛೇದನ ಹಂತಕ್ಕೆ ತಲುಪುತ್ತಿವೆ. ಇದರಲ್ಲಿ ವಿದ್ಯಾವಂತರಾಗಲಿ, ಅವಿದ್ಯಾವಂತರಾಗಿ ಯಾರು ಹೊರತಾಗಿಲ್ಲ. ಇದರಿಂದ ನೊಂದ ಎರಡು ಜೀವಿಗಳನ್ನು ಕೂಡಿಸುವ ಕಾರ್ಯ ಲೋಕ ಅದಾಲತ್‌ದಿಂದ ಮಾಡಲಾಗುತ್ತಿದೆ. ಲೋಕ ಅದಾಲತ್‌ಗೆ ಕೂಡಿಸುವ ಅಧಿಕಾರವಿದೆ ಹೊರತು ಅಗಲಿಸುವ ಅಧಿಕಾರವಿಲ್ಲ. ಇದರಲ್ಲಿ ಪತಿ ಪತ್ನಿಯರ ಮನವೋಲಿಸಿ, ಒಂದು ಗೂಡಿಸುವುದೇ ರಾಷ್ಟ್ರೀಯ ಲೋಕ ಅದಾಲತ್ ಉದ್ದೇಶವಾಗಿದೆ.
– ಅನೀಲ ಕಟ್ಟಿ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.