ಮದ್ಯ ಬಿಟ್ಟವರಿಗೆ ಮರು ಮದುವೆ!

•1340ನೇ ಮದ್ಯವರ್ಜನ ಶಿಬಿರ •ಮದ್ಯ ತ್ಯಜಿಸಿದ 80 ಜನರು •ಧರ್ಮಸ್ಥಳ ಸಂಸ್ಥೆಯಿಂದ ವಿನೂತನ ಕಾರ್ಯಕ್ರಮ

Team Udayavani, May 28, 2019, 7:00 AM IST

bk-tdy-1..

ಬಾಗಲಕೋಟೆ: ಮದ್ಯವ್ಯಸನದಿಂದ ಮುಕ್ತರಾಗಿ ಏಳು ದಿನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಮರು ಮದುವೆ ಸಂಪ್ರದಾಯ ನೆರವೇರಿಸಿದ ಬಳಿಕ ಹೊಸ ಬದುಕಿಗೆ ಕಾಲಿಟ್ಟ ಜೋಡಿಗಳು.

ಬಾಗಲಕೋಟೆ: ನಿತ್ಯ ಮದ್ಯ ಕುಡಿದು, ಸಮಾಜದಲ್ಲಿ ಗೌರವ ಕಳೆದುಕೊಳ್ಳುವ ಜತೆಗೆ ಸಂಸರಾದಲ್ಲೂ ಬಿರುಕು ಮೂಡಿಸಿಕೊಂಡಿದ್ದ ಸುಮಾರು 80 ಜನರಿಗೆ ಮದ್ಯ ಸೇವನೆ ಬಿಡಿಸುವ ಜತೆಗೆ ಅವರ ಪತ್ನಿಯರನ್ನು ಕರೆಸಿ, ಮರು ಮದುವೆ ಮಾಡಿಸಿ, ಹೊಸ ಬಾಳು ನೆಮ್ಮದಿಯಿಂದ ಕೂಡಿರಲಿ ಎಂಬ ಹಾರೈಸಿದ ಪ್ರಸಂಗ ನಗರದಲ್ಲಿ ನಡೆಯಿತು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಹಲವು ವರ್ಷಗಳಿಂದ ಮದ್ಯವರ್ಜನ ಶಿಬಿರ ನಡೆಸಲಾಗುತ್ತಿದ್ದು, ಕಳೆದ ಏಳು ದಿನಗಳಿಂದ ವಿದ್ಯಾಗಿರಿಯ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಸುಮಾರು 80 ಜನರಿಗೆ ವಿಶೇಷ ಶಿಬಿರ ನಡೆಸಲಾಯಿತು.

ಈ ಶಿಬಿರದಲ್ಲಿ ಜಿಲ್ಲೆಯ ಜಮಖಂಡಿ, ಬಾಗಲಕೋಟೆ, ಬೀಳಗಿ, ಹುನಗುಂದ, ಬಾದಾಮಿ, ತೇರದಾಳ, ಮಹಾಲಿಂಗಪುರ, ಅಮೀನಗಡ, ಕೆರೂರ ಹೀಗೆ ವಿವಿಧ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ 80 ಜನರು ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು.

ಮರು ಮದುವೆ: ಮದ್ಯ ಬಿಟ್ಟಿರುವ ಶಿಬಿರಾರ್ಥಿಗಳಿಗೆ ಅವರ ಕುಟುಂಬದವರನ್ನು ಕರೆಯಿಸಿ, ನವ ವಧುವರರಂತೆ ಶೃಂಗಾರಗೊಳಿಸಿ, ಮತ್ತೂಮ್ಮೆ ಮರು ವಿವಾಹ ಮಾಡಿಸಿದ ವಿಶೇಷ ಪ್ರಸಂಗ ಶಿಬಿರದಲ್ಲಿ ನಡೆಸಲಾಯಿತು.

ಮದ್ಯ ವ್ಯಸನ ಶಿಬಿರಾರ್ಥಿಗಳು ಈ ಸಂಬಂಧ ತರಬೇತಿ ಪಡೆದು ಮದ್ಯ ವ್ಯಸನದಿಂದ ವಿಮುಕ್ತರಾಗಿದ್ದು, ಹೊಸ ಜೀವನಕ್ಕೆ ಅಣಿಯಾಗಿದ್ದು ಕಂಡು ಕುಟುಂಬದವರಲ್ಲಿ ಹರ್ಷ ತಂದಿತು.

ಮದ್ಯ ವ್ಯಸನ ಬಿಟ್ಟವರ ಕುಟುಂಬದವರನ್ನ ಕರೆಯಿಸಿ ಮರು ಮದುವೆ ಮಾಡಿಸಿ ಸುಗಮ ಬಾಳು ನಡೆಸಲು ಅವಕಾಶ ಕಲ್ಪಿಸಲಾಯಿತು. ಕುಡಿತದಿಂದ ತಮ್ಮ ಪತ್ನಿಯವರನ್ನು ನಿಂದನೆ ಮಾಡುವ ಪುರುಷರು ಹಾಗೂ ಬೇಸರವಾಗಿರುವ ಪತ್ನಿಯರಿಗೆ ಪರಸ್ಪರ ಹೊಸ ಸಂಬಂಧ-ಭಾಂದವ್ಯದ ಬೆಸುಗೆ ಬೇಸೆಯುವ ಮೂಲಕ ಗಮನ ಸೆಳೆಯಲಾಯಿತು.

ಗುಳೇದಗುಡ್ಡ-ಕೆಂದೂರ ಸಂಸ್ಥಾನ ಮಠದ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮರು ಮದುವೆ ಆಗಿರುವ ವಧು ವರರಿಗೆ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಎಂಬಂತೆ ಭಾಸ ಆಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಏಳು ದಿನಗಳ ವಿಶೇಷ ಶಿಬಿರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಸಿ ಟ್ರಸ್ಟ್‌, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಸಂಸ್ಥೆಗಳ ಅಶ್ರಯದಲ್ಲಿ ನವನಗರದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ನಡೆದ 1340ನೇ ಮದ್ಯವರ್ಜನ ಶಿಬಿರದಲ್ಲಿ ವಿವಿಧ ತರಬೇತಿ ನೀಡಲಾಯಿತು.

ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸಿದ ಸುಮಾರು 80ಕ್ಕೂ ಅಧಿಕ ಮದ್ಯವ್ಯಸನ ಶಿಬಿರಾರ್ಥಿಗಳಿಗೆ ಒಂದು ವಾರ ಕಾಲ ತರಬೇತಿ ನೀಡಿದ್ದು, ಬೆಳ್ಳಗೆ 5 ಗಂಟೆಯಿಂದ ರಾತ್ರಿಯವರೆಗೆ ಶಿಬಿರವನ್ನು ನಡೆಸಲಾಯಿತು. ವ್ಯಾಯಾಮ, ಯೋಗ, ವಠಾರ ಸ್ವಚ್ಛತೆ, ಶ್ರಮದಾನ, ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಹಾಗೂ ಕೌಟುಂಬಿಕ ಸಲಹೆ ಸೇರಿದಂತೆ ಕೆಲ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ವ್ಯಸನ ಮುಕ್ತರಾಗಲು ಶಿಬಿರಾರ್ಥಿಗಳಿಗೆ ಬೋಧಿಸಲಾಯಿತು.

ಕೊನೆಯ ದಿನವಾದ ಸೋಮವಾರ ಧರ್ಮಸ್ಥಳದ ಮಂಜುನಾಥ ದೇವರ ಮಂಗಳ್ಳೋತ್ಸವ, ಶಿಬಿರಾಗ್ನಿ ಸಮಾರಂಭ ಗಮನ ಸೆಳೆಯಿತು. ಮದ್ಯ ವ್ಯಸನ ಶಿಬಿರಾರ್ಥಿಗಳಿಗೆ ಮಂಜುನಾಥ ದೇವರ ಭಾವಚಿತ್ರವನ್ನು ಇಟ್ಟು ಅಲಂಕಾರ ಮಾಡಿ, ಪೂಜೆ ಪುನಸ್ಕಾರ ನೆರವೇರಿಸಿದರು. ಅಲ್ಲದೇ ಓಂಕಾರ, ಪ್ರಾರ್ಥನೆ ಸಲ್ಲಿಸುವ ಮೂಲಕ ನೂತನ ಜೀವನದ ಮಾರ್ಗದರ್ಶನ ನೀಡಲಾಯಿತು. ಶಿಬಿರಾಗ್ನಿ ಎಂದು ಸರಾಯಿ, ತಂಬಾಕು, ಸಿಗರೇಟು, ಗುಟಕಾದಿಂದ ಮಾಡಿದ್ದ ಕೃತಕ ಗೊಂಬೆಯನ್ನು ಇಟ್ಟು ಸುತ್ತಲೂ ಬೆಂಕಿಯ ಜ್ವಾಲೆಯಲ್ಲಿ ಹಿಡಿದು ಸುತ್ತು ಹಾಕುವ ಮೂಲಕ ತಮ್ಮಲ್ಲಿನ ದುಶ್ಚಟವನ್ನು ಬೆಂಕಿಯಿಂದ ಸುಟ್ಟು, ಹೊಸ ಜೀವನ ಪ್ರಾರಂಭಿಸುವುದಾಗಿ ಶಿಬಿರಾರ್ಥಿಗಳಿಂದ ಪ್ರತಿಜ್ಞೆ ಮಾಡಿಸಲಾಯಿತು.

ಒಟ್ಟಾರೆ ನಗರದಲ್ಲಿ ನಡೆದ ಮದ್ಯವ್ಯರ್ಜನ ಶಿಬಿರ ಈ ಬಾರಿ ಎಲ್ಲರ ಗಮನ ಸೆಳೆಯಿತು. ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನಪರಿಷತ್‌ ಸದಸ್ಯ ಹನಮಂತ ನಿರಾಣಿ, ಮಾಜಿ ಶಾಸಕ ಪಿ.ಎಚ್. ಪೂಜಾರಿ, ಜಿ.ಪಂ. ಸದಸ್ಯ ಹೂವಪ್ಪ ರಾಠೊಡ ಸೇರಿದಂತೆ ಧರ್ಮಸ್ಥಳ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು, ನಗರದ ಹಲವು ಪ್ರಮುಖರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

7

Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

6

Malpe ಬೀಚ್‌ ಸ್ವಚ್ಛತೆ: 3 ದಿನದಲ್ಲಿ 26 ಲೋಡ್‌ ಕಸ ಸಂಗ್ರಹ

5

Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.