ಜೀವಶಕ್ತಿ ಕೋಟೆ ಮರು ನಿರ್ಮಾಣ!
•ಕೋಟೆ ಸ್ಮಾರಕಕ್ಕೆ ಜಿಲ್ಲಾಡಳಿತ ತಯಾರಿ•ಪ್ರವಾಸಿ ತಾಣವಾಗಿ ಅಭಿವೃದ್ಧಿ
Team Udayavani, Jul 21, 2019, 10:16 AM IST
ಬಾಗಲಕೋಟೆ: ನಗರಕ್ಕೆ ಹೊಂದಿಕೊಂಡು ಘಟಪ್ರಭಾ ನದಿ ಪಾತ್ರದ ಹಿನ್ನೀರಿನಲ್ಲಿರುವ ಐತಿಹಾಸಿಕ ಬಾಗಲಕೋಟೆಯ ಕೋಟೆ. ಚಿತ್ರಗಳು : ವಿಠಲ ಮೂಲಿಮನಿ
ಬಾಗಲಕೋಟೆ: ಏಷ್ಯಾದಲ್ಲೇ ಹಿನ್ನೀರಿನಲ್ಲಿ ಮುಳುಗಡೆಯಾದ 2ನೇ ಜಿಲ್ಲಾ ಕೇಂದ್ರ ಎಂಬ ಖ್ಯಾತಿ ಪಡೆದ ಬಾಗಲಕೋಟೆಯ ಜೀವಶಕ್ತಿಯಂತಿರುವ, ಸದ್ಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ
ಅನಾಥವಾಗಿರುವ ಮುಳುಗಡೆ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ.
ನಗರಕ್ಕೆ ಜೀವಶಕ್ತಿಯಾಗಿ ನಿಂತಿದ್ದ ಇಲ್ಲಿನ ಕೋಟೆ, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆಗಿ 20 ವರ್ಷಗಳೇ ಕಳೆದಿವೆ. ಗತ ಇತಿಹಾಸ ಹೊಂದಿದ್ದ ಹಾಗೂ ನಗರಕ್ಕೆ ಕೋಟೆನಾಡು ಎಂಬ ಹೆಸರು ತಂದಿದ್ದ ಕೋಟೆಗಳೇ ಮುಳುಗಿದಾಗ, ಅದರ ಪಳಿಯುಳಿಕೆ ಉಳಿಸಿಕೊಳ್ಳುವ ಪ್ರಯತ್ನ ನಡೆಯಲಿಲ್ಲ. ಆದರೆ, ಇದೀಗ ಇಂತಹವೊಂದು ಪ್ರಯತ್ನ ಚಿಗುರೊಡೆದಿದೆ.
ಬಾಗಿಲದ ಮೆರಗು ಈ ಕೋಟೆ: ನಗರದ ಘಟಪ್ರಭಾ ನದಿ ದಡದಲ್ಲಿ ಐದು ಬಾಗಿಲುಗಳು ಇರುವ ಕೋಟೆ ಇದೆ. ಇದನ್ನು ಇಂದಿಗೂ ನೋಡಲು ಸಿಗುತ್ತದೆ. ಹಿನ್ನೀರು ಬಂದಾಗ, ಶೇ. 80 ನೀರಿನಲ್ಲಿ ಮುಳುಗಿ, ತನ್ನ ಗೋಪುರವನ್ನು ಜನರಿಗೆ ತೋರಿಸಿ, ಸುಂದರತೆ ಮರೆಯುತ್ತದೆ. ಆದರೆ, ಈ ವರೆಗೆ ಈ ಕೋಟೆಯ ಬಗ್ಗೆ ಯಾರೂ ಗಮನ ಹರಿಸಿಲ್ಲ. ಅದಕ್ಕೊಂದು ಹೊಸ ರೂಪ ಕೊಡಲು ಅಥವಾ ಬಾಗಲಕೋಟೆ ಎಂಬ ನಗರದ ಹೆಸರಿನ ಕೊನೆಯ ಅಕ್ಷರಗಳು ಕೋಟೆ ಎಂದು ಬರಲು, ಇದೇ ಸ್ಮಾರಕ ಕಾರಣ ಎಂಬುದು ಗೊತ್ತಿದ್ದರೂ, ಅದರ ಮಹತ್ವ, ಮಾಹಿತಿ ಪಡೆದು, ಸ್ಮಾರಕವಾಗಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿರಲಿಲ್ಲ.
ಹೊಸದಾಗಿ ಜಿಲ್ಲೆಗೆ ಬಂದಿರುವ ಯುವ ಐಎಎಸ್ ಅಧಿಕಾರಿ ಆರ್. ರಾಮಚಂದ್ರನ್, ಈ ನಗರಕ್ಕೆ ಕರೆಯುತ್ತಿದ್ದ ಹೆಸರಿನ ಗೊಂದಲದತ್ತ ಪ್ರಮುಖ ನೋಟ ಹರಿಸಿದ್ದರು. ಕೆಲವರು ಬಾಗಲಕೋಟ ಎಂದರೆ ಕರೆದರೆ, ಇನ್ನೂ ಕೆಲವರು ಬಾಗಲಕೋಟೆ ಎಂದು ಕರೆಯುತ್ತಿದ್ದರು. ಸರ್ಕಾರಿ ಅಧಿಕಾರಿಗಳೂ ಇಂತಹ ಬೇರೆ ಬೇರೆ ಹೆಸರಿನಲ್ಲಿ ಉಲ್ಲೇಖೀಸಿ, ಪತ್ರ ವ್ಯವಹಾರ ಮಾಡುತ್ತಿದ್ದರು. ಇದನ್ನು ಮನಗಂಡು, ಬಾಗಲಕೋಟ ಎಂಬ ಹೆಸರನ್ನು ಶಾಶ್ವತವಾಗಿ ಬಾಗಲಕೋಟೆ ಎಂದು ಮರು ನಾಮಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದಾರೆ. ಜತೆಗೆ ಈ ಹೆಸರಿನ ಮೂಲ ಸ್ಥಳದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲು ಮುಂದಾಗಿದ್ದಾರೆ.
ಸಮಗ್ರ ಮಾಹಿತಿ ಪಡೆದ ಜಿಲ್ಲಾಧಿಕಾರಿ: ಐದು ಬಾಗಿಲುಗಳ ಕೋಟೆಯನ್ನು ಹೊಸ ಜಿಲ್ಲಾಧಿಕಾರಿ ನೋಡಿರಲಿಲ್ಲ. ಶನಿವಾರ ಉತ್ತರ ಕರ್ನಾಟಕದ ಏಳು ಜನ ಫೋಟೋಗ್ರಾಫರ್‌ಗಳು ಕಸಾಪ ಆವರಣದಲ್ಲಿ ಫೋಟೋ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಲ್ಲಿ ಉದಯವಾಣಿಯ ಫೋಟೋಗ್ರಾಫರ್ ವಿಠuಲ ಮೂಲಿಮನಿ ಸೆರೆ ಹಿಡಿದ ಕೋಟೆ ಚಿತ್ರ ಕಂಡು, ಅಚ್ಚರಿಯಿಂದ ವೀಕ್ಷಿಸಿದರು. ಜತೆಗೆ ಕೋಟೆ ಬಾಗಿಲು ಇರುವ ಸ್ಥಳ, ಅದರ ವಿಶೇಷತೆ ಕುರಿತು ವಿಠuಲ ಅವರಿಂದ ಮಾಹಿತಿ ಪಡೆದರು.
ಪ್ರವಾಸೋದ್ಯಮಕ್ಕೆ ಹಸ್ತಾಂತರ: ಹಿನ್ನೀರಿನಲ್ಲಿ ಮುಳುಗಡೆಯಾದ ಭೂಮಿ ಹಾಗೂ ಕಟ್ಟಡಗಳು ಸದ್ಯ ಬಿಟಿಡಿಎ ಅಧೀನದಲ್ಲಿದ್ದು, ಕೋಟೆ ಕೂಡ ಅದರ ವ್ಯಾಪ್ತಿಗಿದೆ. ಅದನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧನಪಾಲ್ ಅವರನ್ನು ಕರೆಯಿಸಿ, ಕೋಟೆ ಸಂರಕ್ಷಣೆ, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಬೇಕಾದ ಅನುದಾನದ ಸಮಗ್ರ ವಿವರ ನೀಡಲು ನಿರ್ದೇಶನ ನೀಡಿದ್ದಾರೆ. ಹೀಗಾಗಿ ಹಲವು ವರ್ಷಗಳಿಂದ ಅನಾಥವಾಗಿದ್ದ ಬಾಗಲಕೋಟೆಯ ಕೋಟೆ, ಪ್ರವಾಸಿ ತಾಣವಾಗಿ ರೂಪುಗೊಳ್ಳುವ ನಿರೀಕ್ಷೆ ಚಿಗುರೊಡೆದಿದೆ.
•ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.