ರಾಜಕಾರಣಿಗಳಲ್ಲಿ ಕಡಿಮೆಯಾದ ಸೇವಾಭಾವ
ರಾಜಪಥ-ಹೊಸಹೆಜ್ಜೆ ಕೃತಿಗಳ ಬಿಡುಗಡೆ
Team Udayavani, Mar 31, 2022, 1:10 PM IST
ಬೀಳಗಿ: ಹಿಂದೆ ರಾಜಕೀಯ ಜನಪ್ರತಿನಿಧಿಗಳಲ್ಲಿ ಸೇವಾ ಮನೋಭಾವ, ನಿಷ್ಠೆ, ಪ್ರಾಮಾಣಿಕತೆ, ಕರ್ತವ್ಯ ಪ್ರಜ್ಞೆ ಕಾಣುತ್ತಿದ್ದವು. ಹೀಗಾಗಿ ಮೊದಲು ಜನಪ್ರತಿನಿಧಿಗಳ ಬಗ್ಗೆ ಜನರು ಅಭಿಮಾನ-ಗೌರವ ಹೊಂದಿದ್ದರು. ಇಂದು ಸೇವಾಭಾವನೆ, ಪ್ರಾಮಾಣಿಕತೆ ಕಡಿಮೆಯಾಗಿದ್ದರಿಂದ ಜನರು ರಾಜಕಾರಣಿಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ ಎಂದು ಮಾಜಿ ಸಚಿವ ಎಸ್. ಆರ್. ಪಾಟೀಲ ಬೇಸರ ವ್ಯಕ್ತಪಡಿಸಿದರು.
ಅನಗವಾಡಿಯ ಬಿ.ಎನ್. ಖೋತ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೃತಿ ಬಿಡುಗಡೆ, ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೀಳಗಿ ವಿಧಾನಸಭೆ, ಬಾಗಲಕೋಟೆ ಲೋಕಸಭೆ ಮತಕ್ಷೇತ್ರ ವಿಧಾನ ಪರಿಷತ್ ಪ್ರತಿನಿಧಿಸಿದ ಬೀಳಗಿಯ ಮಹನೀಯರ ಯಶೋಗಾಥೆ ಜೊತೆಗೆ ಚುನಾವಣೆ ಸಂಪೂರ್ಣ ಮಾಹಿತಿ ಸಾಹಿತಿ ಡಿ.ಎಂ. ಸಾವಕಾರ ರಾಜಪಥ ಮೌಲಿಕ ಕೃತಿ ಮೂಲಕ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಇದು ರಾಜ್ಯಶಾಸ್ತ್ರ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ರಾಜಶೇಖರ ಮಠಪತಿ (ರಾಗಂ) ಕೃತಿಗಳ ಪರಿಚಯ ಮಾಡಿ, ಈ ದೇಶ ನೆನಪಿಟ್ಟುಕೊಳ್ಳಬಹುದಾದ ಪ್ರಥಮ ದರ್ಜೆಯ ಪತ್ರಕರ್ತರಾದ ಮಹಾತ್ಮ ಗಾಂಧಿ, ಡಾ|ಬಿ.ಆರ್. ಅಂಬೇಡ್ಕರ್ ಮಾತುಗಳು ಲೇಖನಗಳು ಅತ್ಯಂತ ಮೌಲಿಕವಾಗಿದ್ದವು. ಮನುಕುಲಕ್ಕೆ ಮಾರ್ಗದರ್ಶನ ಮಾಡಬಲ್ಲ ದಿಕ್ಸೂಚಿಗಳು ಎಂದರು.
ಡಿ.ಎಂ. ಸಾವಕಾರ “ರಾಜಪಥ’ ಪುಸ್ತಕವು ಅಖಂಡ ವಿಜಯಪುರ ಜಿಲ್ಲೆಯಲ್ಲಿಯ ಹಿಂದಿನ ಹಾಗೂ ಇಂದಿನ ಜನಪ್ರತಿನಿಧಿಗಳ ಜೀವನ ಚರಿತ್ರೆಯನ್ನು ಅವರು ಬದುಕಿದ ಮೌಲ್ಯ ಕಟ್ಟಿಕೊಡುವ ಪುಸ್ತಕವಾಗಿದೆ. ಮುಂದೆ ಯಾರಾದರೂ ಈ ಜಿಲ್ಲೆಯ ಜನಪ್ರತಿನಿ ಧಿಗಳ ಕುರಿತಾಗಿ ಸಂಶೋಧನೆ ಮಾಡಿದರೆ ಖಂಡಿತವಾಗಿಯೂ ಇದೊಂದು ಆಕರ ಗ್ರಂಥವಾಗಬಲ್ಲದು ಎಂದರು. ಕಾವ್ಯ ಎನ್ನುವುದು ಮನದಾಳ, ಅನುಭವದಿಂದ ಹರಿದು ಬರಬೇಕು. ಅದು ಓದುಗರ ಭಾವನೆ ಅರಳಿಸಬೇಕೆ ಹೊರತು ಕೆರಳಿಸುವಂತಾಗಬಾರದು. ಡಿ.ಎಂ. ಸಾವಕಾರ ಅವರ “ಹೊಸಹೆಜ್ಜೆ’ ಕವನ ಸಂಕಲನ ಭಾವನೆ ಅರಳಿಸುವ ಕೆಲಸಕ್ಕೆ ಸಾಕ್ಷಿಯಾಗಿದೆ. ಸಾವಕಾರರು ಈ ಮೂಲಕ ಎರಡು ಉತ್ತಮ ಕೃತಿ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಸಾಹಿತಿ, ಪತ್ರಕರ್ತ ಡಿ.ಎಂ. ಸಾವಕಾರ ರಚಿತ “ರಾಜಪಥ’ ಹಾಗೂ “ಹೊಸ ಹೆಜ್ಜೆ’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕುಂದರಗಿಯ ವಿಶ್ವನಾಥ ದೇವರು, ಜಿಪಂ ಮಾಜಿ ಸದಸ್ಯ ಬಿ.ಬಿ. ಖೋತ, ವಿಪ ಮಾಜಿ ಸದಸ್ಯ ಸಿ.ಆರ್. ಸೋರಗಾವಿ, ಪತ್ರಕರ್ತ ಆನಂದ ಜಡಿಮಠ, ಕೃತಿಕಾರ ಡಿ.ಎಂ. ಸಾವಕಾರ, ಜಿ.ಕೆ. ತಳವಾರ, ಶ್ರೀಶೈಲ ಸೂಳಿಕೇರಿ, ವೀರೇಂದ್ರ ಶೀಲವಂತ, ಎಸ್.ಎಂ. ಕಟಗೇರಿ, ಆರ್.ಸಿ. ವಡವಾಣಿ, ದೊಡ್ಡಣ್ಣ ದೇಸಾಯಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.