ಜಾತಿ-ಮತ ಮರೆತು ಬಾಳಿದರೆ ಧರ್ಮ ಉಳಿಯಲು ಸಾಧ್ಯ: ತಿಮ್ಮಾಪುರ
ಜಾತಿ, ಮತ, ಪಂಥಗಳನ್ನು ಮರೆತು ಎಲ್ಲರೂ ಒಂದಾಗಿ ಬಾಳಿದರೆ ಮಾತ್ರ ದೇಶ ಅಭಿವೃದ್ಧಿ
Team Udayavani, Dec 26, 2023, 5:23 PM IST
ಜಮಖಂಡಿ: ಪ್ರಾಮಾಣಿಕ, ನಿಷ್ಠಾವಂತ, ನಿಸ್ವಾರ್ಥ ಮನೋಭಾವ ರಾಜಕಾರಣಿಗಳು ಸಿಗುವುದು ಅಪರೂಪವಾಗಿದೆ. ಇಂದಿನ ದಿನಮಾನದಲ್ಲಿ ರಾಜಕಾರಣಿ ಎಂಬುದು ವ್ಯಾಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನಗರದ ರುದ್ರಾವಧೂತರ 93ನೇ ಪುಣ್ಯಾರಾಧನೆ ಹಾಗೂ 38ನೇ ವೇದಾಂತ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಕಲುಷಿತಗೊಂಡಿದೆ. ಡಾ| ಅಂಬೇಡ್ಕರ್ ಅವರು ದುಡಿಯುವ ವ್ಯಕ್ತಿಗೂ, ವಿಮಾನದಲ್ಲಿ ಪ್ರಯಾಣಿಸುವ ವ್ಯಕ್ತಿಗೂ ಒಂದೇ ವೋಟು ನೀಡಿದ್ದಾರೆ. ಮತದಾನ ಮಾಡುವ ಸಮಯದಲ್ಲಿ ಜಾಗೃತರಾಗಿ ಮತದಾನ ಮಾಡಬೇಕು. ದಲಿತ ಸಮಾಜದ ಕೇರಿಯಲ್ಲಿ ದುರ್ಗಾದೇವಿ ಜಾತ್ರೆ ಅಷ್ಟಕ್ಕೆ ಸೀಮಿತವಾಗಿತ್ತು.
ಆದರೆ, ಇಂದು ವೇದಾಂತ ಪರಿಷತ್ ನಡೆಯುತ್ತಿರುವುದು ಶ್ಲಾಘನೀಯ. ದೇವರು, ಧರ್ಮ ಎಂಬುದು ಪವಿತ್ರವಾಗಿದ್ದು. ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಜಾತಿ, ಮತಗಳನ್ನು ಮರೆತು ಬಾಳಿದರೆ ಮಾತ್ರ ಧರ್ಮ ಉಳಿಯಲು ಸಾಧ್ಯ. ವೇದಾಂತ ಪರಿಷತ್ ನಡೆಸುವ ಹಿತವಚನಗಳನ್ನು ಕೇಳುವುದರಿಂದ ಸಮಾಜ ಬದಲಾವಣೆಯಾಗಲು ಸಾಧ್ಯ ಎಂದು ಹೇಳಿದರು ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ದೇವರನ್ನು ಕಾಣಬೇಕಾದರೆ ಶ್ರಮ, ಭಕ್ತಿ, ಶ್ರದ್ಧೆಯಿಂದ ಸಾಧ್ಯ. ದೇವರು ಕಣ್ಣಿಗೆ ಕಾಣರು. ಆದರೆ ಪ್ರತಿಯೊಂದು ಜೀವರಾಶಿಯಲ್ಲಿ ದೇವರಿದ್ದಾರೆ. ಎಲ್ಲ ಸಮಾಜದವರು ಜಾತಿ, ಮತ, ಪಂಥಗಳನ್ನು ಮರೆತು ಎಲ್ಲರೂ ಒಂದಾಗಿ ಬಾಳಿದರೆ ಮಾತ್ರ ದೇಶ ಅಭಿವೃದ್ಧಿ ಎಂದರು.
ರುದ್ರಾವಧೂತ ಮಠದ ಸಹಜಾನಂದ ಅವಧೂತರು, ಕೃಷ್ಣಾನಂದ ಅವಧೂತರು, ಬಸವಾನಂದ ಶ್ರೀ, ನಾಗೇಶ್ವವರ ಶ್ರೀಗಳು,
ಶಿವರಾಮಕೃಷ್ಣಾನಂದ ಶ್ರೀ, ಚಿನ್ಮಯಾನಂದ ಶ್ರೀಗಳು, ಅಮರೇಶ್ವರ ಶ್ರೀ, ಶಿವಪುತ್ರ ಅವಧೂತರು, ಪ್ರಭುದೇವರು, ಸ್ವರೂಪಾನಂದ ಶ್ರೀಗಳು ಆಶೀರ್ವಚನ ನೀಡಿದರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕ ಜಗದೀಶ ಗುಡಗುಂಟಿ ಅವರಿಗೆ ರುದ್ರಾವಧೂತ ಮಠದ ಕಮೀಟಿಯವರು ನೂತನ ಕೊಠಡಿಗಳ ನಿರ್ಮಾಣ ಮಾಡಲು ಮನವಿ ನೀಡಿದರು. ಶಾಸಕರ ನಿಧಿಯಿಂದ 5 ಲಕ್ಷ ರೂ. ನೀಡುತ್ತೇನೆ. ಕೊಠಡಿಗಳ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ತಹಶೀಲ್ದಾರ್ ಸದಾಶಿವ ಮಕ್ಕೋಜಿ, ಅಜೇಯ ಕಡಪಟ್ಟಿ, ಡಾ| ರಾಕೇಶ ಲಾಡ್, ಎನ್. ಎಸ್.ದೇವರವರ, ತೌಫೀಕ್ ಪಾರ್ಥನ್ನಳಿ, ಸಿದ್ದು ಮೀಶಿ, ಶಶಿಧರ ಚಲವಾದಿ, ಯಲ್ಲಪ್ಪ ಬಿದರಿ, ಸಂತೋಷ ಬಾಡಗಿ, ಬಿ.ಪಿ.ಮಾಶನ್ನವರ, ಡಾ|ವಿನಾಯಕ ಬಬಲೇಶ್ವರ, ಸಂತೋಷ ಶೆಟ್ಟಿ, ಡಾ| ಈ.ಎನ್.ಸನದಿ, ಶಿವಾನಂದ ಆಲಬಾಳ, ಶ್ರೀಶೈಲ ಬಿದರಿ, ಭೀಮಶಿ ನಡುವಿಮನಿ, ಪ್ರದೀಪ ಮೆಟಗುಡ, ಎಸ್.ಎಸ್.ಪೋತರಾಜ, ಮಂಜುನಾಥ ಹಿಪ್ಪರಗಿ ಹಾಜರಿದ್ದರು. ರವೀಂದ್ರ ಲಗಳಿ ನಿರೂಪಿಸಿದರು. ರುದ್ರಾವಧೂತ ಮಠದ
ಕೃಷ್ಣಾನಂದ ಅವಧೂತರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.