![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 16, 2020, 7:01 AM IST
ಹುನಗುಂದ: ಸರ್ಕಾರ ಪರಿಶಿಷ್ಟ ಪಂಗಡದ ಪರಿವಾರ ಮತ್ತು ತಳವಾರ ಪರ್ಯಾಯ ಪದಗಳಾದ ಕೋಳಿ ಬೆಸ್ತಾರ, ಮಹಾದೇವ ಕೋಳಿ ಹಾಗೂ ಅಂಬಿಗೇರ (ಸುಣಗಾರ) ಸಮುದಾಯಗಳಿಗೆ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡದಂತೆ ಒತ್ತಾಯಿಸಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಹುನಗುಂದ ತಾಲೂಕು ಘಟಕದಿಂದ ಸೋಮವಾರ ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ತಾಲೂಕು ಅಧ್ಯಕ್ಷ ಸಿದ್ದಪ್ಪ ಜಾಲಿಗಿಡದ ಮಾತನಾಡಿ, ವಾಲ್ಮೀಕಿ ನಾಯಕ ಸಮುದಾಯದಲ್ಲಿ ವಾಲ್ಮೀಕಿ, ನಾಯ್ಕ ಮತ್ತು ನಾಯಕ ಮುಖ್ಯ ಜಾತಿಗಳಾಗಿದ್ದು, ಇತ್ತೀಚೆಗೆ ಪರಿವಾರ ಮತ್ತು ತಳವಾರ ಸಮುದಾಯವನ್ನು ಕೇಂದ್ರ ಸರ್ಕಾರ ಎಸ್.ಟಿ ಪಟ್ಟಿಗೆ ಸೇರ್ಪಡೆ ಮಾಡಿದೆ. ಆದರೆ ಪರಿವಾರ ಮತ್ತು ತಳವಾರ ಪರ್ಯಾಯ ಪದಗಳಾದ ಕೋಳಿ ಬೆಸ್ತಾರ, ಮಹಾದೇವ ಕೋಳಿ ಮತ್ತು ಅಂಬಿಗೇರಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹುನ್ನಾರ ನಡೆದಿದ್ದು, ತಳವಾರ ಮತ್ತು ಪರಿವಾರ ಜಾತಿಯ ಪರ್ಯಾಯ ಇತರೆ ಜಾತಿಯವರು ತಪ್ಪು ಮಾಹಿತಿ ನೀಡಿ ಪ್ರಮಾಣ ಪತ್ರ ಪಡೆಯಲು ಮುಂದಾಗುತ್ತಿದ್ದಾರೆ.
ಆದ್ದರಿಂದ ಯಾವುದೇ ಕಾರಣಕ್ಕೂ ಈ ಜಾತಿಗಳಿಗೆ ಎಸ್.ಟಿ ಪ್ರಮಾಣ ಪತ್ರ ನೀಡಬಾರದು. ಈ ಜಾತಿಯವರು ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಕೇಳಲು ಬಂದರೆ ಪೂರ್ವಾಪರ ವಿಚಾರಣೆ ನಡೆಸಿ ನಂತರ ಪ್ರಮಾಣ ಪತ್ರ ನೀಡಬೇಕೆಂದು ತಹಶೀಲ್ದಾರ್‌ಗೆ ಮನವಿ ಮಾಡಿದರು.
ಈ ವೇಳೆ ಕಾರ್ಯಕರ್ತರಾದ ಮಂಜುನಾಥ ವಾಲೀಕಾರ, ಹನಮಂತ ತಳವಾರ, ಮಂಜುನಾಥ ತಳವಾರ, ಹನಮಂತ ಸುಣಕಲ್ಲ, ಮಹಾಂತೇಶ ರಾವಜಿ, ಶಿವಾನಂದ ಸುಣಕಲ್ಲ, ಮಂಜುನಾಥ ವಾಲ್ಮೀಕಿ, ಸೋಮಣ್ಣ ವಾಲೀಕಾರ, ತಿಪ್ಪಣ್ಣ ಗೌಡರ, ಪುಂಡಲೀಕ ಪೂಜಾರಿ ಇದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.