ನೇಕಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹ
Team Udayavani, Jan 18, 2020, 12:32 PM IST
ಬನಹಟ್ಟಿ: ರಾಜ್ಯದಲ್ಲಿ ನೇಕಾರಿಕೆಯನ್ನೇ ನಂಬಿ ಉಪಜೀವನ ಸಾಗಿಸುತ್ತಿರುವ ನೇಕಾರ ಸಮುದಾಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ರಾಜ್ಯ ನೇಕಾರ ಸೇವಾ ಸಂಘವು ಒತ್ತಾಯಿಸಿತು. ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಉಪತಹಶೀಲ್ದಾರ್ ಸಂಗಮೇಶ ಕಾಗಿಯವರರಿಗೆ ಶುಕ್ರವಾರ ಮನವಿ ಸಲ್ಲಿಸಲಾಯತು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಎಲ್ಲ ರಂಗಗಳಲ್ಲಿಯೂ ನೇಕಾರ ಸಮುದಾಯ ವಂಚಿತಗೊಂಡಿವೆ. ನೇಕಾರರಿಂದಲೇ ಸಾಕಷ್ಟು ರಾಜಕೀಯ, ಆರ್ಥಿಕ ಹೀಗೆ ಹಲವಾರು ರಂಗಗಳನ್ನು ಪ್ರವೇಶ ಮಾಡಿರುವ ಜನಪ್ರತಿನಿಧಿ ಗಳು ನೇಕಾರ ಪರ ಕಾಳಜಿ ಕಿಂಚಿತ್ತೂ ವಹಿಸದೆ ನಿರ್ಲಕ್ಷಕ್ಕೆ ಕಾರಣರಾಗಿದ್ದಾರೆ. ಕೆಎಚ್‌ಡಿಸಿಗೆ ಆವೃತ್ತ ನಿಧಿ, ನೇಕಾರ ಸಮುದಾಯಕ್ಕೆ ಮೂಲ ಸೌಲಭ್ಯ, ಡಚ್ ಕಾಲೋನಿಯ ಕುಟುಂಬಗಳಿಗೆ ಸಿಟಿಎಸ್ ಉತಾರೆ, ಅಕ್ರಮ ಸಕ್ರಮಪೂರ್ಣಗೊಳಿಸುವುದು, ಗುಡಿ ಕೈಗಾರಿಕೆ ಎಂದು ಪರಿಗಣನೆ, ವಿದ್ಯುತ್ ಚಾಲಿತ ಮಗ್ಗಕ್ಕೆ 50 ಸಾವಿರ ರೂ. ಸಹಾಯಧನ ನೀಡುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸಬೇಕು. ಮುಂಬರುವ ಜ.21ರಂದು ಬೆಂಗಳೂರು ವಿಧಾನಸೌಧ ಚಲೋ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ ಎಂದು ಟಿರಕಿ ತಿಳಿಸಿದರು.
ಸಂತೋಷ ಮಾಚಕನೂರ, ಶ್ರೀಶೈಲ ಮುಗಳೊಳ್ಳಿ, ಕೋಪರ್ಡೆ, ಮಲ್ಲಿಕಾರ್ಜುನ ಜೋತಾವರ, ಕೆ.ಎಸ್. ಮುನ್ನೋಳ್ಳಿ, ಅರ್ಜುನ ಗುರ್ಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.