ವೇತನ ಆಯೋಗದ 2ನೇ ವರದಿ ಜಾರಿಗೆ ಆಗ್ರಹ
ಒಂದು ವರ್ಷ ವಿಳಂಬವಾಗಿ 2017ರಲ್ಲಿ ರಾಜ್ಯ ಸರಕಾರ 6ನೇ ವೇತನ ಆಯೋಗ ರಚಿಸಿದೆ.
Team Udayavani, Dec 31, 2021, 5:42 PM IST
ಜಮಖಂಡಿ: ರಾಜ್ಯ 6ನೇ ವೇತನ ಆಯೋಗ ನೀಡಿದ 2ನೇ ವರದಿಯನ್ನು ಇಂದಿನವರೆಗೆ ರಾಜ್ಯ ಸರಕಾರ ಜಾರಿಗೊಳಿಸಿಲ್ಲ. ಕೇಂದ್ರ ಸರ್ಕಾರಿ ನೌಕರರ ಸರಿಸಮಾನವಾದ ವೇತನ, ಭತ್ಯೆಗಳನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಬಿ. ಅಜ್ಜನ್ನವರ ಸರಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಶಾಸಕರ ಜನಸಂಪರ್ಕ ನಿವಾಸದಲ್ಲಿ 6ನೇ ವೇತನ ಆಯೋಗದ 2ನೇ ವರದಿ ಜಾರಿಗೆ ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕೆಂದು ಒತ್ತಾಯಿಸಿ ಶಾಸಕ ಆನಂದ ನ್ಯಾಮಗೌಡ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ 2016ರಲ್ಲಿ ವೇತನ ಆಯೋಗ ರಚಿಸಿ ವೇತನ ಭತ್ಯೆಗಳನ್ನು ಪರಿಷ್ಕರಿಸಬೇಕಾಗಿದೆ.
ಆದರೆ ಒಂದು ವರ್ಷ ವಿಳಂಬವಾಗಿ 2017ರಲ್ಲಿ ರಾಜ್ಯ ಸರಕಾರ 6ನೇ ವೇತನ ಆಯೋಗ ರಚಿಸಿದೆ. ಸಂಘ ಮಂಡಿಸಿದ್ದ ಬಹುತೇಕ ಅಂಕಿ-ಅಂಶಗಳು ಮಂಡನೆಗಳನ್ನು ಪರಿಗಣಿಸಿಲ್ಲ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೌಕರರು ವೇತನ ಭತ್ಯೆಗಳು ಮತ್ತು ಮನೆಬಾಡಿಗೆ ಭತ್ಯೆಯಲ್ಲಿ ಗರಿಷ್ಠ ಪ್ರಮಾಣದ ವ್ಯತ್ಯಾಸ ಉಂಟಾಗಿದೆ ಎಂದರು. ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಪಿಂಚಣಿ ಯೋಜನೆ ಜಾರಿಗೆ ತರಬೇಕು. ಸರಕಾರ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಶೀಘ್ರ ಸ್ಪಂದಿಸಬೇಕು ಎಂದರು. ಕಾರ್ಯದರ್ಶಿ ಎಸ್.ಎಂ. ಕಾಯಿ, ಪಾಂಡು ಅಂಬಲಜೇರಿ, ಮಲ್ಲು ಹಂಚಿನಾಳ, ಜೆ.ಎನ್. ಪಾಸೋಡೆ, ಜಿ.ಜಿ.ಕಡಕೋಳ, ವಿನೋದ ಭೂಸರಡ್ಡಿ, ವಿರೂಪಾಕ್ಷ ಗುಬಚಿ, ಶೋಭಾ ದೊಡಮನಿ, ರಾಜೇಶ್ವರಿ ತಿಮ್ಮಾಪುರ, ಶೀಲಾ ಬೂದಿಹಾಳ, ಜಿ.ಎಚ್.ನಿಡೋಣಿ, ಎನ್. ಎಂ.ಮಿರ್ಜಿ, ನಂದು ಕುಲಕರ್ಣಿ, ಎನ್. ಎಚ್. ತಿಪ್ಪನ್ನವರ, ಸಿ.ಎಂ.ಸಿದ್ದಗೊಂಡ, ಶೈಲಶ್ರೀ ಗಾಣಿಗೇರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.