ಎರಡಿದ್ದ ಎಸ್‌ಟಿ ಮೀಸಲು ಈ ಬಾರಿ 3ಕ್ಕೇರಿಕೆ
40 ಸ್ಥಾನಗಳಲ್ಲಿ 20 ಮಹಿಳೆಯರಿಗೆ ಮೀಸಲು !110 ತಾಪಂನಲ್ಲೂ 58 ಸ್ಥಾನ ಮಹಿಳೆಯರಿಗೆ
Team Udayavani, May 2, 2021, 7:04 PM IST
ವರದಿ : ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರವಾರು ಮೀಸಲಾತಿ ನಿಗದಿ ಪಡಿಸಲು ರಾಜ್ಯ ಚುನಾವಣೆ ಆಯೋಗ, ಮೀಸಲಾತಿ ಪ್ರಮಾಣ ನಿಗದಿಯ ಅಧಿಸೂಚನೆ ಹೊರಡಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಸ್ಥಾನಗಳು ಈ ಬಾರಿ 3ಕ್ಕೆ ಏರಿಕೆಯಾಗಲಿವೆ.
ಹೌದು. ಕಳೆದ ಬಾರಿ 36 ಇದ್ದ ಜಿಪಂ ಕ್ಷೇತ್ರಗಳು ಈ ಬಾರಿ 40ಕ್ಕೆ ಏರಿಕೆಯಾಗಿವೆ. 36 ಸದಸ್ಯ ಬಲದ ಜಿಪಂನಲ್ಲಿ ಎಸ್‌ಟಿ ವರ್ಗಕ್ಕೆ ತಲಾ ಒಂದು ಮಹಿಳೆ ಮತ್ತು ಒಂದು ಪುರುಷ ಸ್ಥಾನಕ್ಕೆ ಮಾತ್ರ ಅವಕಾಶವಿತ್ತು. ಈ ಬಾರಿ ಎಸ್‌ಟಿ ವರ್ಗಕ್ಕೆ ಮೂರು ಸ್ಥಾನ ನೀಡಿದ್ದು, ಅದರಲ್ಲಿ 2 ಮಹಿಳೆಯರಿಗೆ, 1 ಪುರುಷರಿಗೆ ಮೀಸಲಾಗಲಿದೆ. ಪುರುಷ ಸದಸ್ಯ ಸ್ಥಾನ ಬಾಗಲಕೋಟೆ ತಾಲೂಕಿಗೆ ದೊರೆಯುವ ಸಾಧ್ಯತೆ ಇದೆ.
ಶೇ. 50 ಮಹಿಳೆಯರಿಗೆ ಮೀಸಲು:
ಜಿಪಂನ ಒಟ್ಟು 40 ಸ್ಥಾನಗಳಲ್ಲಿ 20 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಅದರಲ್ಲಿ ಎಸ್‌ಸಿ ವರ್ಗಕ್ಕೆ 4, ಎಸ್‌ಟಿ ವರ್ಗಕ್ಕೆ 2, ಹಿಂದುಳಿದ ಅ ವರ್ಗಕ್ಕೆ 6 ಹಾಗೂ ಹಿಂದುಳಿದ ವರ್ಗ ಬಕ್ಕೆ 1, ಸಾಮಾನ್ಯ ವರ್ಗಕ್ಕೆ 9 ಸೇರಿ ಒಟ್ಟು 20 ಸ್ಥಾನಗಳಲ್ಲಿ ಮಹಿಳೆಯರು ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಈ 20 ಸ್ಥಾನಗಳಲ್ಲಿ ಮಹಿಳೆಯರೇ ಸ್ಪರ್ಧಿಸಬೇಕು. ಅಲ್ಲದೇ ಜಿಪಂನ 40 ಸ್ಥಾನಗಳಲ್ಲಿ ಎಸ್‌ಸಿ (ಮಹಿಳೆ-4), ಎಸ್‌ಟಿ-3 (ಮಹಿಳೆ-2), ಹಿಂದುಳಿದ ಅ ವರ್ಗ (ಮಹಿಳೆ-6), ಹಿಂದುಳಿದ ಬ ವರ್ಗ 2 (1), ಸಾಮಾನ್ಯ 20 (ಮಹಿಳೆ) ವರ್ಗಕ್ಕೆ ಮೀಸಲಿಡಲಾಗುತ್ತಿದೆ.
ತಾಪಂನಲ್ಲೂ ಮಹಿಳೆಯರ ಮೇಲುಗೈ:
ಜಿಲ್ಲೆಯ 9 ತಾಪಂ ವ್ಯಾಪ್ತಿಯಲ್ಲಿ ಒಟ್ಟು 110 ಕ್ಷೇತ್ರಗಳಿದ್ದು, ಇದರಲ್ಲಿ 58 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ. ಹೀಗಾಗಿ ಜಿಪಂನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಸಮಬಲವಾಗಲಿದ್ದರೆ, ತಾಪಂಗಳಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಲಿದೆ. ಬಾಗಲಕೋಟೆ ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, ಅದರಲ್ಲಿ 7 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-3 (ಮಹಿಳೆ-2), ಎಸ್‌ಟಿ ಒಂದು ಸ್ಥಾನವಿದ್ದು, ಅದು ಮಹಿಳೆಗೆ ಮೀಸಲಾಗಲಿದೆ. ಹಿಂದುಳಿದ ವರ್ಗ ಅ-2 (ಮಹಿಳೆ-1), ಸಾಮಾನ್ಯ-7 (3) ಸ್ಥಾನ ಮೀಸಲಾಗಲಿವೆ. ತಾಪಂಗೆ ಹಿಂದುಳಿದ ವರ್ಗ ಬ ವರ್ಗಕ್ಕೆ ಒಂದೂ ಸ್ಥಾನ ಮೀಸಲಾಗಿಲ್ಲ. ಹುನಗುಂದ ತಾಪಂನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 5 ಮಹಿಳೆಯರಿಗೆ ಮೀಸಲು ಎಸ್‌ಸಿ-2 (ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಅ ವರ್ಗಕ್ಕೆ ತಲಾ ಒಂದು ಸ್ಥಾನಗಳಿದ್ದು, ಅವು ಮಹಿಳೆಯರಿಗೆ ಮೀಸಲಾಗಲಿವೆ. ಇನ್ನು ಸಾಮಾನ್ಯ-5 (ಮಹಿಳೆ-2) ನಿಗದಿಯಾಗಲಿವೆ. ಬಾದಾಮಿ ತಾಪಂನಲ್ಲಿ ಒಟ್ಟು 16 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನ ಮೀಸಲಾಗಲಿವೆ. ಎಸ್‌ಸಿ-2 (ಮಹಿಳೆ-1), ಎಸ್‌ಟಿ-2 (ಮಹಿಳೆ-1), ಹಿಂದುಳಿದ ಅ ವರ್ಗ-3 (ಮಹಿಳೆ-2), ಹಿಂದುಳಿದ ಬ ವರ್ಗ-1, ಸಾಮಾನ್ಯ-8 (ಮಹಿಳೆ-4). ಇಳಕಲ್ಲ ತಾಪಂನಲ್ಲಿ ಒಟ್ಟು 9 ಸ್ಥಾನಗಳಿದ್ದು, ಅದರಲ್ಲಿ 5 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-2 (ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಅ ವರ್ಗಕ್ಕೆ ತಲಾ 1 ಸ್ಥಾನಗಳಿದ್ದು ಅವೂ ಮಹಿಳೆಯರಿಗೆ ಮೀಸಲಾಗಲಿವೆ.
ಅಲ್ಲದೇ ಸಾಮಾನ್ಯ-5(ಮಹಿಳೆ-2). ಗುಳೇದಗುಡ್ಡ ಹೊಸ ತಾಲೂಕಿಗೆ 6 ಮಹಿಳೆಯರು: ಗುಳೇದಗುಡ್ಡ ಹೊಸ ತಾಲೂಕು ಪಂಚಾಯಿತಿಯಲ್ಲಿ ಒಟ್ಟು 11 ಸ್ಥಾನಗಳಲಿದ್ದು ಅದರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ-1 ಸ್ಥಾನ ಇದ್ದು, ಅದು ಮಹಿಳೆಗೆ ಮೀಸಲು. ಹಿಂದುಳಿದ ಅ ವರ್ಗ-2(ಮಹಿಳೆ-1), ಸಾಮಾನ್ಯ-6 (ಮಹಿಳೆ-3). ಜಮಖಂಡಿ ತಾಪಂನಲ್ಲಿ 16 ಸ್ಥಾನಗಳಿದ್ದು, ಅದರಲ್ಲಿ 8 ಸ್ಥಾನ ಮಹಿಳೆಯರಿಗೆ. ಎಸ್‌ಸಿ-3 (ಮಹಿಳೆ-2), ಎಸ್‌ಟಿಗೆ ಒಂದು ಸ್ಥಾನವಿದ್ದು ಮಹಿಳೆಗೆ ಮೀಸಲಾಗಲಿದೆ. ಹಿಂದುಳಿದ ಅ ವರ್ಗ-3 (ಮಹಿಳೆ-2), ಹಿಂದುಳಿದ ಬ ವರ್ಗ-1, ಸಾಮಾನ್ಯ-8 (ಮಹಿಳೆ-3). ಮುಧೋಳ ತಾಪಂನಲ್ಲಿ ಒಟ್ಟು 13 ಸ್ಥಾನಗಳಿದ್ದು, 7 ಸ್ಥಾನ ಮಹಿಳೆಯರಿಗೆ ಮೀಸಲು. ಎಸ್‌ಸಿ-3 (ಮಹಿಳೆ-2), ಎಸ್‌ಟಿ ಒಂದು ಸ್ಥಾನವಿದ್ದು, ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ಅ ವರ್ಗ-2 (ಮಹಿಳೆ-1), ಸಾಮಾ ನ್ಯ-7 (ಮಹಿಳೆ-3). ಬೀಳಗಿ ತಾಪಂನಲ್ಲಿ 12 ಸದಸ್ಯರಲ್ಲಿ 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ ಮತ್ತು ಹಿಂದುಳಿದ ಬ ವರ್ಗಕ್ಕೆ ತಲಾ ಒಂದು ಸ್ಥಾನ ಮೀಸಲಿದ್ದು, ಅವು ಮಹಿಳೆಯರಿಗೆ ಮೀಸಲಿವೆ. ರಬಕವಿ-ಬನಹಟ್ಟಿ ಹೊಸ ತಾಲೂಕಿನಲ್ಲಿ 11 ಸ್ಥಾನಗಳಿದ್ದು, 6 ಸ್ಥಾನ ಮಹಿಳೆಯರಿಗೆ ಮೀಸಲಾಗಲಿವೆ. ಎಸ್‌ಸಿ-2(ಮಹಿಳೆ-1), ಎಸ್‌ಟಿ ಒಂದು ಸ್ಥಾನವಿದ್ದು, ಅದೂ ಮಹಿಳೆಗೆ. ಹಿಂದುಳಿದ ಅ ವರ್ಗ-2 (ಮಹಿಳೆ-1), ಸಾಮಾನ್ಯ 6 (ಮಹಿಳೆ-3) ಸ್ಥಾನ ಮೀಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.