ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ: ಬೊಮ್ಮಣ್ಣವರ
34 ಗ್ರಾಮಗಳಲ್ಲಿ ಒಟ್ಟು 1057 ಕಂದಾಯ ದಾಖಲೆಗಳನ್ನು ರೈತರ ಮನೆಗೆ ತೆರಳಿ ವಿತರಿಸಲಾಯಿತು.
Team Udayavani, Mar 14, 2022, 5:32 PM IST
ಗುಳೇದಗುಡ್ಡ: ರೈತರು ತಮ್ಮ ಜಮೀನಿನ ಪಹಣಿ, ಉತಾರ, ನಕಾಶ, ಜಾತಿ ಆದಾಯ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಲು ತಾಲೂಕು, ಹೋಬಳಿ ಮಟ್ಟದ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರಕಾರ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಹಮ್ಮಿಕೊಂಡಿದ್ದು, ಇಂತಹ ಯೋಜನೆಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎಸ್.ಎಫ್. ಬೊಮ್ಮಣ್ಣವರ ಹೇಳಿದರು.
ಪಾದನಕಟ್ಟಿ ಗ್ರಾಮದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ರೈತರಿಗೆ ಪಹಣಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಾದನಕಟ್ಟಿ ಗ್ರಾಮದಲ್ಲಿ 118, ಪರ್ವತಿ 65, ಹುಲ್ಲಿಕೇರಿ ಎಸ್.ಪಿ. 32, ಹಾನಾಪುರ ಎಸ್.ಪಿ 35, ಖಾನಾಪುರ 32, ಮುರುಡಿ 25, ನಾಗರಾಳ ಎಸ್.ಪಿ. 40, ಸಬ್ಬಲಹುಣಸಿ 25, ಕೆಲವಡಿ 21, ಕೋಟೆಕಲ್ಲ 65, ಬೂದಿನಗಡ 25 ಸೇರಿದಂತೆ ತಾಲೂಕಿನ 34 ಗ್ರಾಮಗಳಲ್ಲಿ ಒಟ್ಟು 1057 ಕಂದಾಯ ದಾಖಲೆಗಳನ್ನು ರೈತರ ಮನೆಗೆ ತೆರಳಿ ವಿತರಿಸಲಾಯಿತು.
ಗ್ರಾಪಂ ಸದಸ್ಯರಾದ ಹನಮಂತ ದನದಮನಿ, ಲಕ್ಷ್ಮಣ ನಾಗರಾಳ, ದೇವೆಕ್ಕೆವ್ವ ವಾಲ್ಮೀಕಿ, ಚಂದ್ರವ್ವ ಮಾದರ, ಉಪತಹಶೀಲ್ದಾರ್ ವೀರೇಶ ಬಡಿಗೇರ, ಶಿರಸ್ತೆದಾರ ಸುಭಾಷ ವಡವಡಗಿ, ಕಂದಾಯ ನಿರೀಕ್ಷಕ ಎಸ್.ಎಚ್. ಜೋಗಿನ, ಎಂ.ಎಂ. ತುಪ್ಪದ, ಹನಮಪ್ಪ ಭೀಮನಗಡೆ, ಹನಮಗೌಡ ಗೌಡರ, ಮುದುಕಪ್ಪ ಹೊಸಮನಿ, ಆಸಂಗೆಪ್ಪ ಗಡೇದ, ಶಂಕರ ಹುಲ್ಯಾಳ, ಮಹಾದೇವ ಹಿರೇಮಠ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.