ಏರಿದ ತಾಲೂಕು; ಇಳಿದ ಜಿಲ್ಲಾ ಪಂಚಾಯಿತಿ! ಭವಿಷ್ಯದ ಕನಸು ಹೊತ್ತವರಿಗೆ ನಿರಾಶೆ
ಟಿಕೆಟ್ ಹಂಚಿಕೆಯಿಂದ ಹಿಡಿದು ಅನುದಾನ ಬಳಸಿಕೊಳ್ಳಲೂ ಅಡೆತಡೆಯಾಗುವ ಸಾಧ್ಯತೆ ಇದೆ
Team Udayavani, Sep 13, 2023, 1:34 PM IST
ಬಾಗಲಕೋಟೆ: ಜಿಪಂ, ತಾಪಂ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಸದಾಗಿ ಸೃಷ್ಟಿಯಾಗಿದ್ದ ಕ್ಷೇತ್ರಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಹಲವರಿಗೆ ನಿರಾಶೆಯಾಗಿದೆ. ಹೊಸದಾಗಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದ್ದು, ತಾಲೂಕು ಪಂಚಾಯಿತಿಗಳ ಸಂಖ್ಯೆ ಏರಿಕೆಯಾದರೆ, ಜಿಪಂ ಕ್ಷೇತ್ರಗಳ ಸಂಖ್ಯೆ ಇಳಿಕೆಯಾಗಿದೆ.
ಹೌದು, ಈ ಹಿಂದೆ ಜಿಲ್ಲೆಯಲ್ಲಿ ಆರು ತಾಲೂಕು ಅಸ್ತಿತ್ವದಲ್ಲಿದ್ದಾಗಲೇ ಜಿಲ್ಲೆಯಲ್ಲಿ 36 ಜಿಪಂ ಕ್ಷೇತ್ರಗಳಿದ್ದವು. ಗುಳೇದಗುಡ್ಡ,
ಇಳಕಲ್ಲ ಹಾಗೂ ರಬಕವಿ-ಬನಹಟ್ಟಿ ಸಹಿತ 9 ಹೊಸ ತಾಲೂಕು ರಚನೆಯಾದಾಗ, ಕಳೆದ 2021ರಲ್ಲಿ ಅಂದಿನ ಬಿಜೆಪಿ ಸರ್ಕಾರ,
ತಾಲೂಕು ಪಂಚಾಯಿತಿ ಸಂಖ್ಯೆ ಇಳಿಸಿ, ಜಿಪಂ ಸಂಖ್ಯೆಗಳನ್ನು 40ಕ್ಕೆ ಏರಿಸಿತ್ತು. ಆಗ ತಾಲೂಕು ಪಂಚಾಯಿತಿ ವ್ಯವಸ್ಥೆಯನ್ನೇ
ರದ್ದುಗೊಳಿಸುತ್ತಾರೆ ಎಂಬ ದೊಡ್ಡ ಚರ್ಚೆಯೂ ನಡೆದಿತ್ತು. ಕೊನೆಗೆ 2021ರ ಮಾರ್ಚ್ 29ರಂದು ಅಧಿಸೂಚನೆ ಹೊರಡಿಸಿ, 130 ಇದ್ದ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು 110ಕ್ಕೆ ಇಳಿಸಿದರೆ, 36ಇದ್ದ ಜಿ.ಪಂ. ಕ್ಷೇತ್ರಗಳನ್ನು 46ಕ್ಕೆ ಏರಿಸಿ, ಹೊಸ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿತ್ತು.
ತಾಪಂ ಏರಿಕೆ-ಜಿಪಂ ಇಳಿಕೆ: ಪ್ರಸ್ತುತ ಅಧಿಸೂಚನೆ ಪ್ರಕಾರ, ಕಳೆದ ಬಾರಿ ವಿಂಗಡಿಸಿದ ಬಹುತೇಕ ಹೊಸ ಕ್ಷೇತ್ರಗಳನ್ನು
ರದ್ದುಪಡಿಸಿ, ಈ ಹಿಂದೆ 2016ರಲ್ಲಿ ಇದ್ದ ಕ್ಷೇತ್ರಗಳನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ. ಜಿಪಂ ಕ್ಷೇತ್ರಗಳಲ್ಲಿ ಒಂದನ್ನು ಕಡಿತ ಮಾಡಿದ್ದು, 35 ನಿಗದಿಯಾಗಿವೆ. ತಾಪಂ ಕ್ಷೇತ್ರಗಳಲ್ಲಿ 130 ಇದ್ದಿದ್ದು 134ಕ್ಕೆ ಏರಿಸಲಾಗಿದೆ. ಆದರೆ, 2021ರ ಅಧಿಸೂಚನೆಗೆ ಹೋಲಿಕೆ ಮಾಡಿದರೆ, 40 ಇದ್ದ ಜಿ.ಪಂ.ಗಳು 35 ಹಾಗೂ 110 ಇದ್ದ ತಾ.ಪಂ.ಗಳು 134ಕ್ಕೆ ಏರಿಸಲಾಗಿದೆ.
ಹಲವರಿಗೆ ನಿರಾಶೆ: ಹೊಸ ತಾಪಂ ಹಾಗೂ ಜಿಪಂ ಕ್ಷೇತ್ರ ಪುನರ್‌ವಿಂಗಡಣೆ ಮೂಲಕ, ತಮ್ಮೂರು ಜಿಪಂ, ತಾಪಂ ಕೇಂದ್ರ
ಸ್ಥಾನಗಳಾಗಿದ್ದು, ರಾಜಕೀಯ ಭವಿಷ್ಯ ಕಂಡುಕೊಳ್ಳಬೇಕೆಂಬ ಆಶಯ ಹೊತ್ತಿದ್ದವರಿಗೆ ಸಧ್ಯ ನಿರಾಶೆಯಾಗಿದೆ. ಅಲ್ಲದೇ ಕೆಲ
ಜಿ.ಪಂ. ಕ್ಷೇತ್ರಗಳನ್ನು, ಎರಡು ವಿಧಾನಸಭೆ ಮತಕ್ಷೇತ್ರಗಳ ವ್ಯಾಪ್ತಿಯ ಹಳ್ಳಿಗಳನ್ನು ವಿಂಗಡಿಸಿದ್ದು, ಯಾವುದೇ ರಾಜಕೀಯ ಪಕ್ಷದ ಟಿಕೆಟ್ ಹಂಚಿಕೆಯಿಂದ ಹಿಡಿದು ಅನುದಾನ ಬಳಸಿಕೊಳ್ಳಲೂ ಅಡೆತಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ 2016ರಲ್ಲಿ ಜಿಲ್ಲೆಯಲ್ಲಿ ಕೇವಲ 6 ತಾಲೂಕು ಅಸ್ತಿತ್ವದಲ್ಲಿದ್ದವು. ಆಗ ಜಿ.ಪಂ-36, ತಾಪಂ 130 ಕ್ಷೇತ್ರಗಳಿದ್ದವು. ಈಗ ಜಿಲ್ಲೆಯಲ್ಲಿ ತೇರದಾಳ ಸಹಿತ ಒಟ್ಟು 10 ತಾಲೂಕು ಅಸ್ತಿತ್ವದಲ್ಲಿವೆ. ತಾಲೂಕು ಹೆಚ್ಚಾದರೂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಿಲ್ಲ ಎಂದು ಹೇಳಲಾಗಿದೆ. ಒಟ್ಟಾರೆ, ಜಿಲ್ಲೆಯಲ್ಲಿ ಸದ್ಯ ಜಿಪಂ, ತಾಪಂ. ಕ್ಷೇತ್ರ ಪುನರ್‌ವಿಂಗಡೆ ಕುರಿತು ಹಲವು ಅಪಸ್ವರ ಕೇಳಿ ಬಂದಿದ್ದು, ಸೆ. 19ರವರೆಗೆ ಆಕ್ಷೇಪಣೆ ಸಲ್ಲಿಸಲು ಚುನಾವಣೆ ಆಯೋಗ ಅವಕಾಶ ನೀಡಿದೆ.
ಜಿಲ್ಲೆಯಲ್ಲಿ ಜಿಪಂ ಮತ್ತು ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಲೋಪಗಳಾಗಿವೆ. ಸರ್ಕಾರ ತನ್ನದೇ ನಿಯಮ ಮೀರಿ
ನಡೆದುಕೊಂಡಿದೆ. ಭೌಗೋಳಿಕ ಕ್ಷೇತ್ರ ಹಾಗೂ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಪುನರ್‌ವಿಂಗಡಣೆ ಆಗಬೇಕು. ಆದರೆ, ಕಾಂಗ್ರೆಸ್ ಸರ್ಕಾರ, ತನಗೆ ಅನುಕೂಲಕ್ಕೆ ತಕ್ಕಂತೆ ವಿಂಗಡೆ ಮಾಡಿದೆ. ಈ ಕುರಿತು ಚುನಾವಣೆ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದ್ದೇವೆ.
ಹೂವಪ್ಪ ರಾಠೊಡ, ಜಿ.ಪಂ. ಮಾಜಿ ಅಧ್ಯಕ್ಷ
*ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.