ಶಿಲ್ಪಿಗಳಿಂದ ಇತಿಹಾಸ ಚಿರಸ್ಥಾಯಿ


Team Udayavani, Oct 22, 2018, 5:03 PM IST

22-october-22.gif

ಬೀಳಗಿ: ಶಿಲ್ಪಕ್ಕೆ ಉಳಿ ಪೆಟ್ಟು ನೀಡಿ ಸುಂದರ ಮೂರ್ತಿ ನಿರ್ಮಿಸುವ ಮೂಲಕ ಅದನ್ನು ಲೋಕ ವಿಖ್ಯಾತಗೊಳಿಸುವ ಶಿಲ್ಪಿಗಳು ಜಗದ ಇತಿಹಾಸ ಚಿರಸ್ಥಾಯಿಗೊಳಿಸಿದ್ದಾರೆ. ಕಲ್ಲಿನಲ್ಲಿ ದೈವತ್ವ, ರಾಕ್ಷಸತ್ವ, ಮನುಷ್ಯಲೋಕದ ಶೃಂಗಾರ ವೈವಿಧ್ಯ ಕೆತ್ತನೆ ಮೂಲಕ ಅರಳಿಸುವ ಶಿಲ್ಪಿಗಳು ಕಲೆಯ ಮೂಲಕ ಜೀವಂತಿಕೆ ಪಡೆದಿದ್ದಾರೆ ಎಂದು ಮಾಜಿ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಸಭಾ ಭವನದಲ್ಲಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಮತ್ತು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಅ. 21ರಿಂದ ನ.4ರವರೆಗೆ ನಡೆಯುವ ರಾಜ್ಯಮಟ್ಟದ ಶಿಲಾ ಶಿಲ್ಪ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣವೆಂದರೆ ಕೇವಲ ಅಕ್ಷರಾಭ್ಯಾಸವಲ್ಲ. ಶಿಕ್ಷಣ ಉಜ್ವಲ ಬದುಕು ರೂಪಿಸಬೇಕು. ಸಾಂಸ್ಕೃತಿಕ ಲೋಕ ಪರಿಚಯಿಸುವ ಲಲಿತಕಲೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ, ಕುತೂಹಲವನ್ನುಂಟು ಮಾಡಬೇಕು. ಆ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯು ಇಂತಹ ಶಿಬಿರ ಆಯೋಜಿಸುವ ಮೂಲಕ ತನ್ನ ಜವಾಬ್ದಾರಿ ಹೆಚ್ಚಿಸಿಕೊಂಡಿದೆ ಎಂದು ಶ್ಲಾಘಿಸಿದರು. 

ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಎಂ.ಎನ್‌. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪಠ್ಯಕ್ರಮವಲ್ಲ. ಅದೊಂದು ಸಾಂಸ್ಕೃತಿಕ ಜವಾಬ್ದಾರಿ. ಅಕ್ಷರದ ಜತೆಗೆ ನೈತಿಕ, ಮೌಲ್ಯಯುತವಾಗಿ, ಮನುಷ್ಯ ಲೋಕ ಕಟ್ಟುವುದೆಂದು ನಮ್ಮ ಸಂಸ್ಥೆ ಭಾವಿಸಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಕನ್ನಡಪರ ಸಂಘಟನೆಗಳ ಜತೆಗೂಡಿ ವಿದ್ಯಾಸಂಸ್ಥೆಯಲ್ಲಿ ಅನೇಕ ವಿಧಾಯಕ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಎಂದರು.

ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಮಲ್ಲೋಜ ಮಾಯಾಚಾರ್ಯ ಬಂಡೆಗೆ ಉಳಿ ಮುಟ್ಟಿಸುವ ಮೂಲಕ ಶಿಲಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿ.ಕೆ. ನದಾಫ್‌ ಪ್ರಾಸ್ತಾವಿಕ ಮಾತನಾಡಿದರು. ಬೀಳಗಿ ಸಹಕಾರಿ ಬ್ಯಾಂಕ್‌ ಉಪಾಧ್ಯಕ್ಷ ಸತ್ಯಪ್ಪ ಮೇಲನಾಡ, ಶಿಲ್ಪಕಲಾ ಅಕಾಡೆಮಿ ಸದಸ್ಯ ಅಲ್ಲಿಸಾಬ್‌ ನದಾಫ್‌, ದೇವಿ ಪ್ರಸಾದ ಮಾಯಾಚಾರಿ, ಬಸವರಾಜ ಕಂಬಾರ, ಎ.ಕೆ. ಕಾರಜೋಳ, ನೂರಲಿ ತಹಶೀಲ್ದಾರ್‌, ಸಂತೋಷ ಜಂಬಗಿ, ಬಸವರಾಜ ಪಾಟೀಲ, ರಾಜು ಬೋರ್ಜಿ ಇದ್ದರು. ಗಂಗಾಧರ ಪಾಟೀಲ ಸ್ವಾಗತಿಸಿದರು.

ಟಾಪ್ ನ್ಯೂಸ್

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-kulageri-cross

Kulageri Cross: ಹೂಳು ತುಂಬಿದ ಕಾಲುವೆ…ಪೋಲಾಗುತ್ತಿದೆ ಮಲಪ್ರಭಾ ಎಡದಂಡೆ ಕಾಲುವೆ ನೀರು…

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

10

Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

puttige-6-

Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.