ಸಸಾಲಟ್ಟಿ ಏತ ನೀರಾವರಿಗೆ ಮುಕ್ತಿ ಎಂದು?
Team Udayavani, Mar 4, 2020, 12:32 PM IST
ಸಾಂದರ್ಭಿಕ ಚಿತ್ರ
ಮಹಾಲಿಂಗಪುರ: ರಬಕವಿ-ಬನಹಟ್ಟಿ, ಮುಧೋಳ, ಜಮಖಂಡಿ, ಬೀಳಗಿ ತಾಲೂಕಿನ ರೈತರ ಆಶಾಕಿರಣ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಅನುದಾನದ ನಿರೀಕ್ಷೆ ಹೊಂದಿರುವ ತೇರದಾಳ ಮತಕ್ಷೇತ್ರದ ರೈತರು ಯೋಜನೆ ಪೂರ್ಣಗೊಳ್ಳುವ ಆಶಾಭಾವನೆ ಹೊಂದಿದ್ದಾರೆ.
ಏನಿದು ಯೋಜನೆ?: ಸಸಾಲಟ್ಟಿ ಏತ ನೀರಾವರಿ ಯೋಜನೆಯು ಮಳೆಗಾಲದಲ್ಲಿ ಕೃಷ್ಣಾ ನದಿಯಲ್ಲಿ ಹರಿದು ಹೋಗುವ ನೀರನ್ನು 12 ಕಿ.ಮಿ. ಲಿಪ್ಟ್ ಮೂಲಕ ಸಸಾಲಟ್ಟಿ ಹತ್ತಿರ ಘಟಪ್ರಭಾ ಕಾಲುವೆಗೆ ನೀರು ಹರಿಸುವುದಾಗಿದೆ. ರಾಯಬಾಗ ತಾಲೂಕಿನ ಕೆಲ ಹಳ್ಳಿಗಳು ಸೇರಿದಂತೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ, ಮುಧೋಳ-ಬೀಳಗಿ, ಜಮಖಂಡಿ ತಾಲೂಕಿನ ಸುಮಾರು 36 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುವ ಪ್ರಮುಖ ಯೋಜನೆಯಾಗಿದೆ. ಇದರಿಂದ ನಾಲ್ಕು ತಾಲೂಕಿನ ರೈತರಿಗೆ ಸಂಪೂರ್ಣ ನೀರಾವರಿ ಸೌಲಭ್ಯ ದೊರಕಲಿದೆ.
ರೈತ ಸಂಘದ ದಶಕಗಳ ಹೋರಾಟ: ಈ ಯೋಜನೆ ಜಾರಿಗೆ ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳು ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಿವೆ. ಅಲ್ಲದೇ, ಕಳೆದ 10ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಘಟಪ್ರಭಾ ಕಾಲುವೆ ನೀರು ನಿಗದಿತ ಪ್ರಮಾಣದಲ್ಲಿ ಬಾರದೇ ರೈತ ಸಮುದಾಯ ಕಂಗಾಲಾಗಿದೆ. ಏತ ನೀರಾವರಿ ಯೋಜನೆಯಿಂದ ಮಳೆಗಾಲದ 4 ತಿಂಗಳಲ್ಲಿ ಕೃಷ್ಣಾ ನದಿಯಿಂದ ಸುಮಾರು 8.47 ಟಿಎಂಸಿ ನೀರನ್ನು ಬಳಸಿ, ಹಿಡಕಲ್ ಜಲಾಶಯದಿಂದ ಕಾಲುವೆ ನೀರನ್ನು ಸಂಗ್ರಹಿಸಿಕೊಂಡರೆ ಬೇಸಿಗೆಯಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ.
38 ದಿನಗಳ ಹೋರಾಟಕ್ಕೆ ಸಿಕ್ಕ ಫಲ: ಸಸಾಲಟ್ಟಿ ಏತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಮಹಾಲಿಂಗಪುರ ಚನ್ನಮ್ಮ ವೃತ್ತದಲ್ಲಿ 16-1-2017ರಿಂದ 22-2-2017ರವರೆಗೆ ರೈತ ಸಂಘದ ನೇತೃತ್ವದಲ್ಲಿ ಪಕ್ಷಾತೀತವಾಗಿ 38 ದಿನಗಳ ಕಾಲ ಹೋರಾಟ ಮಾಡಲಾಗಿತ್ತು. ಈ ಹೋರಾಟದಲ್ಲಿ ಮತಕ್ಷೇತ್ರದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘಟನೆಗಳು ಭಾಗವಹಿಸಿ ಬೆಂಬಲ ಸೂಚಿಸಿದ್ದವು.
ಭರವಸೆ ಈಡೇರಿಸಿದ್ದ ಉಮಾಶ್ರೀ-ಪಾಟೀಲ: ಹೋರಾಟದ ವೇದಿಕೆಗೆ ಭೇಟಿ ನೀಡಿದ್ದ ಅಂದಿನ ನೀರಾವರಿ ಸಚಿವ ಎಂ.ಬಿ.ಪಾಟೀಲ, ಅಂದಿನ ಶಾಸಕಿ, ಸಚಿವೆ ಉಮಾಶ್ರೀ ಯೋಜನೆ ಜಾರಿ ಮಾಡುವ ಭರವಸೆ ನೀಡಿದ್ದರಿಂದ ಹೋರಾಟ ಅಂತ್ಯಗೊಳಿಸಿದ್ದರು. ಅದರಂತೆ 2018ರ ರಾಜ್ಯ ಬಜೆಟ್‌ನಲ್ಲಿ ಸಸಾಲಟ್ಟಿ ಏತ ನೀರಾವರಿ ಯೋಜನೆ ಜಾರಿಗೆ 140ಕೋಟಿ ಮಂಜೂರಿ ಮಾಡಿಸುವ ಮೂಲಕ ಹೋರಾಟಗಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದರು.
ಘೋಷಣೆಗೆ ಮಾತ್ರ ಸೀಮಿತ?: ಅನುದಾನ ಮಂಜೂರು ಮಾಡಿಸಿದ್ದ ಉಮಾಶ್ರೀ 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿ, ಬಿಜೆಪಿಯ ಸಿದ್ದು ಸವದಿ ಶಾಸಕರಾದರು. ನಂತರ ಸಮ್ಮಿಶ್ರ ಸರಕಾರ ರಚನೆ ಹಗ್ಗಜಗ್ಗಾಟ, ಪಕ್ಷಾಂತರ ಪರ್ವ ಸೇರಿದಂತೆ ಹಲವು ಕಾರಣಗಳಿಂದ ಯೋಜನೆ ಘೋಷಣೆಗೆ ಮಾತ್ರ ಸೀಮಿತವಾಗಿಯೇ ಉಳಿಯಿತು. ಕಳೆದ ಎರಡು ವರ್ಷಗಳಲ್ಲಿ ಯೋಜನೆ ಜಾರಿ ಕುರಿತು ಯಾವುದೇ ಬೆಳವಣಿಗೆ ನಡೆದಿಲ್ಲ.
ಈ ಬಜೆಟ್‌ನಲ್ಲಾದರೂ ಪೂರ್ಣಗೊಳ್ಳಲಿ : ತೇರದಾಳ ಮತಕ್ಷೇತ್ರದಲ್ಲಿ ಬಿಜೆಪಿಯ ಸಿದ್ದು ಸವದಿ ಶಾಸಕರಿದ್ದಾರೆ. ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರಕಾರ ಅ ಧಿಕಾರದಲ್ಲಿದೆ. ಮುಧೋಳ ಶಾಸಕ ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಗಳು ಇರುವುದರಿಂದ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಬಿಡುಗಡೆಗೊಂಡು ನಾಲ್ಕು ತಾಲೂಕಿನ ರೈತರ ದಶಕಗಳ ಕನಸು ನನಸಾಗಲಿ. –ಗಂಗಾಧರ ಮೇಟಿ, ಸಸಾಲಟ್ಟಿ ಏತ ನೀರಾವರಿಯ ಹೋರಾಟಗಾರರು.
-ಚಂದ್ರ ಶೇಖರ ಮೋರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.