ಸಾಮಾಜಿಕ ಹೋರಾಟಗಾರ ಕಲ್ಲಪ್ಪಕಡಬಲ್ಲನವರ ಆಮರಣ ಸತ್ಯಾಗ್ರಹ
Team Udayavani, Jan 27, 2021, 6:31 PM IST
ಬನಹಟ್ಟಿ: ಅನಾವಶ್ಯಕವಾಗಿ ಮಾನಸಿಕ ಹಿಂಸೆ ನೀಡುತ್ತಿರುವ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಕ್ರಮ ಖಂಡಿಸಿ ಸಾಮಾಜಿಕ ಹೋರಾಟಗಾರ ಕಲ್ಲಪ್ಪ ಕಡಬಲ್ಲನವರ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಆಮರಣ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಕಳೆದ ಹಲವಾರು ದಶಕಗಳಿಂದ ಢವಳೇಶ್ವರದ ಸಮಸ್ಯೆಗಳಿಗೆ ಹೋರಾಟ ಮಾಡುತ್ತಿದ್ದೇನೆ. ಕಳೆದ 2009 ಮತ್ತು 2019 ರಲ್ಲಿನ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದು ಕೊಂಡವರಿಗೆ ಮನೆ ಕೊಡುವುದರಲ್ಲಿ ತಾರತಮ್ಯವಾಗಿದ್ದು, ಇದನ್ನು ಪ್ರಶ್ನಿಸುವುದೇ ತನ್ನ ದೊಡ್ಡ ತಪ್ಪೇ.
ಈ ಕುರಿತು ಕಳೆದ ವರ್ಷ ಪ್ರತಿಭಟನೆ ಮಾಡಿದಾಗ ಅದನ್ನು ಮರು ಪರಿಶೀಲನೆ ಮಾಡುವುದಾಗಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ಹೇಳಿದ್ದರಿಂದ ಆಗ ಪ್ರತಿಭಟನೆ ಕೈ ಬಿಟ್ಟಿದ್ದೇ. ಆದರೆ, ಈಗ ನನ್ನ ಮೇಲೆ ವಿನಾಕಾರಣ ಆಪಾದನೆ ಮಾಡುತ್ತಿರುವುದು ಸರಿಯಲ್ಲ. ತಹಶೀಲ್ದಾರರು ನನಗೆ ಪತ್ರ ಬರೆದು ಸುಳ್ಳು ಆಪಾದನೆ ಮಾಡುತ್ತಿದ್ದಾರೆ ಎನ್ನುವುದು ಸರಿಯಲ್ಲ.
ಇದನ್ನೂ ಓದಿ:ಅಂಬೇಡ್ಕರ್ ವಿಶ್ವ ನಾಯಕ: ಶ್ರೀರಾಮುಲು
ಈ ಕೂಡಲೇ ಅದನ್ನು ಅವರು ಸಾಬೀತು ಮಾಡಬೇಕು. ಮತ್ತು ಪೊಲೀಸ್ ಇಲಾಖೆಯವರು ವಿನಾಕಾರಣ ನನ್ನ ಮೇಲೆ ರೌಡಿ ಶೀಟರ್ ಹಾಕಿ ಮಾನಸಿಕ ಹಿಂಸೆ ನೀಡುತ್ತಿದ್ದು ಇದನ್ನು ಸಾಬೀತು ಮಾಡುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.