![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jan 5, 2023, 5:27 PM IST
ಕುಳಗೇರಿ ಕ್ರಾಸ್: ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿ ಚಳುವಳಿ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆ ಕೊಟ್ಟ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ. ಅವರು ಸ್ವಾತಂತ್ರ್ಯ ಹೋರಾಟದ ಪೂರ್ವದಲ್ಲಿಯೇ ಪ್ರಥಮ ಬಾರಿಗೆ ಮಹಿಳಾ ಶಿಕ್ಷಣ ನಾಂದಿ ಹಾಡಿದ ಜಗತ್ತಿನ ಮೊದಲ ಶಿಕ್ಷಣದ ತಾಯಿ, ಅಕ್ಷರ ವಂಚಿತರ ಎದೆಯಲ್ಲಿ ಅಕ್ಷರ ಬಿತ್ತಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ. ಇಂತಹ ಶೋಷಿತ ವರ್ಗದ ಹೋರಾಟಗಾರರಾದ ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫುಲೆಯವರಂತಹ ಮಹನೀಯರನ್ನು ಪುರಾಣ ಪುರುಷರನ್ನಾಗಿ ಮಾಡಿದ ಕೀರ್ತಿ ಗದುಗಿನ ಜಗದ್ಗುರು ಡಾ| ಸಿದ್ದಲಿಂಗ ಶ್ರೀಗಳಿಗೆ ಸಲ್ಲುತ್ತದೆ ಎಂದು ಶಾಂತಲಿಂಗ ಶ್ರೀ ಹೇಳಿದರು.
ಸುಕ್ಷೇತ್ರ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆಯವರ 192ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿವರ್ಣ ಪದ್ದತಿಯ ಕಾಲದಲ್ಲಿ ಶೋಷಿತರ ಪರವಾಗಿ ಧ್ವನಿ ಎತ್ತಿ ಸಮಾಜದ ಅನಿಷ್ಠ ಪದ್ದತಿಗಳಾದ ಬಾಲ್ಯವಿವಾಹ, ಸತಿಸಹಗಮನ ಪದ್ಧತಿ, ಜಾತಿಪದ್ದತಿಯ ವಿರುದ್ದ ಹೋರಾಡಿದ ಸಾವಿತ್ರಿಬಾಯಿ ಫುಲೆ ಮಹಿಳೆಯರಿಗೋಸ್ಕರ ಸುಮಾರು 14 ಶಾಲೆಗಳನ್ನು ಸ್ಥಾಪನೆ ಮಾಡಿ ಆ ಮೂಲಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿ ಬಿಸಿಯೂಟದಂತಹ ಹಲವಾರು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು.
ಮಲ್ಲವ್ವ ಹದಲಿ, ಯಲ್ಲಕ್ಕ ಐನಾಪೂರ, ನಿರ್ಮಲಾ ತೆಗ್ಗಿನಮನಿ, ರೇಣುಕಾ ನರಸಾಪೂರ, ಸವಿತಾ ತಿಗಡಿ, ಕಸ್ತೂರಿ ತೆಗ್ಗಿನಮನಿ, ಪಾರವ್ವ ಕೀಲಕೈ, ಬಸಮ್ಮ ನರಸಾಪುರ, ರೇಣುಕಾ ಬೆನ್ನೂರ, ದೇವಕ್ಕ ಪಾಟೀಲ, ನಿರ್ಮಲಾ ನರಸಾಪೂರ, ನಿಂಗಪ್ಪ ನರಗುಂದ, ಭೀಮಪ್ಪ ಪೂಜಾರ ಪ್ರಮುಖರು ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ನಿರೂಪಿಸಿದರು, ಪ್ರಭಯ್ಯ ಸಾಂಭಯ್ಯನಮಠ ಸ್ವಾಗತಿಸಿ ವಂದಿಸಿದರು.
You seem to have an Ad Blocker on.
To continue reading, please turn it off or whitelist Udayavani.