ರಬಕವಿ-ಬನಹಟ್ಟಿ: ಶಾಲಾ ವಾಹನ ಅಪಘಾತ: ತಪ್ಪಿದ ಭಾರೀ ಅನಾಹುತ
Team Udayavani, Dec 13, 2021, 6:42 PM IST
ರಬಕವಿ-ಬನಹಟ್ಟಿ: ತಾಲ್ಲೂಕಿನ ರಾಮಪುರದ ಇಂಗ್ಲಿಷ ಮಾಧ್ಯಮ ಶಾಲೆಯ ಬಸ್ ಸೋಮವಾರ ಬೆಳಗ್ಗೆ ಅಪಾಘಾತಕ್ಕೆ ಒಳಗಾಗಿದ್ದು, ಬಸ್‍ನಲ್ಲಿ 4 ಶಿಕ್ಷಕರು ಸೇರಿದಂತೆ 50 ವಿದ್ಯಾರ್ಥಿಗಳಿದ್ದರು. ಬಸ್‍ನಲ್ಲಿರುವ ಯಾವುದೆ ತೊಂದರೆಯಾಗಿಲ್ಲ.
ಹೊಸೂರ ಮತ್ತು ರಬಕವಿಗೆ ತೆರಳುವ ರಸ್ತೆ ವಿಭಾಜಕದ ಹತ್ತಿರ ಹೊಸೂರ ಕಡೆಯಿಂದ ಬರುತ್ತಿದ್ದ ಕಬ್ಬಿನ ಟ್ರ್ಯಾಕ್ಟರ್ ನ್ನು ಹಿಂದೆ ಹಾಕಿ ಬಸ್ ಬರುತ್ತಿದ್ದಂತೆ, ಮುಂದೆ ಟ್ಯಾಂಕರ್ ಬಂದಿದೆ. ಈ ಮಧ್ಯದಲ್ಲಿ ಚಾಲಕ ಬಸ್‍ನ್ನು ಚಲಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಬ್ರೆಕ್ ಹತ್ತದೆ ಇರುವುದರಿಂದ ಶಾಲಾ ವಾಹನಕ್ಕೆ ಢಿಕ್ಕೆ ಹೊಡೆದಿದೆ. ಇದರಿಂದಾಗಿ ಶಾಲಾ ವಾಹನ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ತಾಗಿಕೊಂಡು ನಿಂತಿತು. ಇದರಿಂದಾಗಿ ಭಾರಿ ಅನಾಹುತವಾಗುವುದು ತಪ್ಪಿದಂತಾಗಿದ್ದು, ಕೆಲವು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ವೇಗ ತಡೆಗಳು ಅಗತ್ಯವಾಗಿವೆ: ಹೊಸೂರ ಮತ್ತು ರಬಕವಿಯಿಂದ ಬನಹಟ್ಟಿಗೆ ಬರುವಾಗಿ ವಾಹನಗಳು ಅತ್ಯಂತ ಜೋರಾಗಿ ಬರುತ್ತವೆ. ಇದರಿಂದಾಗಿ ಹೊಸೂರ ಕಡೆಯಿಂದ ಬರುವಾಗ ರಬಕವಿ ಬನಹಟ್ಟಿ ನಗರಸಭೆಯ ಮುಂಭಾಗದಲ್ಲಿ ಮತ್ತು ರಬಕವಿಯಿಂದ ಬರುವಾಗ ಕರಲಟ್ಟಿಯವರ ಮನೆಯ ಮುಂಭಾಗದಲ್ಲಿ ವೈಜ್ಞಾನಿಕ ವೇಗ ತಡೆಗಳನ್ನು ಅಳವಡಿಸಬೇಕಾಗಿದೆ. ಬನಹಟ್ಟಿಯ ಭದ್ರನವರ ಕಲ್ಯಾಣ ಮಂಟಪದ ಮುಂಭಾಗದಲ್ಲಿಯೂ ವೇಗ ತಡೆಗಳ ಅಗತ್ಯವಾಗಿದೆ.
ಇದು ರಾಜ್ಯ ಹೆದ್ದಾರಿಯಾಗಿದ್ದು, ದಿನ ನಿತ್ಯ ನೂರಾರು ವಾಹನಗಳು ವೇಗವಾಗಿ ಸಂಚರಿಸುತ್ತಿವೆ. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಗೆ ಅಪಘಾತಗಳಾಗಿವೆ. ನಗರದ ಪ್ರಮುಖ ಶಾಲಾ ಕಾಲೇಜುಗಳು ಇಲ್ಲಿಯೇ ಇವೆ. ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ವಿನಂತಿಸಿಕೊಂಡರೂ ಯಾವುದೆ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ನೀಡಿ ಆದಷ್ಟು ಬೇಗನೆ ಇಲ್ಲಿ ವೇಗ ತಡೆಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.