ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ
Team Udayavani, Mar 10, 2020, 3:18 PM IST
ಸಾಂದರ್ಭಿಕ ಚಿತ್ರ
ಬೀಳಗಿ: ಎಲ್ಲ ವಿಧದ ಪಡಿತರ ಚೀಟಿಗಳ ಸದಸ್ಯರು ಇ-ಕೆವೈಸಿ ಯೋಜನೆಯಡಿ ಕಡ್ಡಾಯವಾಗಿ ಬಯೋಮೆಟ್ರಿಕ್ ದೃಢಿಕರಣ ಹೊಂದಬೇಕು. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಇ-ಕೆವೈಸಿ ಪ್ರಗತಿ ಕುಂಟುತ್ತ ಸಾಗಿದೆ. ಪರಿಣಾಮ, ನಿತ್ಯವೂ ನೂರಾರು ಪಡಿತರ ಕಾರ್ಡ್‌ದಾರರು ತಮ್ಮ ಕೆಲಸವನ್ನು ಬದಿಗೊತ್ತಿ ಇಡೀ ದಿವಸ ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ನಿಲ್ಲುವಂತಾಗಿದೆ.
ಇ-ಕೆವೈಸಿ ಕಡ್ಡಾಯ: ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿ ಹೊಂದಿದ ಎಲ್ಲ ಸದಸ್ಯರು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸರಕಾರದ ಆದೇಶದಂತೆ ಈಗಾಗಲೇ ಪ್ರತಿ ತಿಂಗಳು 1ರಿಂದ 10ನೇ ದಿನಾಂಕದವರೆಗೆ ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿ ಸದಸ್ಯರ ಬಯೋಮೆಟ್ರಿಕ್ ದೃಢೀಕರಣ ಆರಂಭವಾಗಿದೆ. ಈ ಮಧ್ಯೆ ತಾಂತ್ರಿಕ ತೊಂದರೆಯಿಂದ ಜನವರಿ 2019ರಂದು ಒಂದು ತಿಂಗಳು ಇ-ಕೆವೈಸಿ ಸ್ಥಗಿತವಾಗಿದೆ.
ಆದರೆ, ಐದು ತಿಂಗಳ ಅವ ಧಿಯಲ್ಲಿ ಇ-ಕೆವೈಸಿ ಅಡಿ ಇದುವರೆಗೆ 20,420 ಪಡಿತರ ಚೀಟಿ ಹಾಗೂ 65,041 ಪಡಿತರ ಸದಸ್ಯರು ಬಯೋಮೆಟ್ರಿಕ್ ದೃಢೀಕರಣ ಹೊಂದಿದ್ದಾರೆ. ಅಂದರೆ ಶೇ. 61.47ರಷ್ಟು ಪಡಿತರ ಚೀಟಿ ಹಾಗೂ ಶೇ. 57.79ರಷ್ಟು ಪಡಿತರ ಸದಸ್ಯರ ಇ-ಕೆವೈಸಿ ಪ್ರಗತಿಯಾಗಿದೆ. ಇನ್ನು ಶೇ. 40 ಪಡಿತರ ಚೀಟಿ ಹಾಗೂ ಶೇ. 43ರಷ್ಟು ಪಡಿತರ ಸದಸ್ಯರು ಇ-ಕೆವೈಸಿ ಹೊಂದಬೇಕಿದೆ. ಇಲ್ಲದಿದ್ದರೆ ಅಂತವರ ಪಡಿತರ ಚೀಟಿಗೆ ಆಹಾರ ಧಾನ್ಯ ನೀಡುವುದನ್ನು ಸ್ಥಗಿತಗೊಳಿಸಲಾಗುವುದು ಎನ್ನುವ ಆಹಾರ ಇಲಾಖೆಯ ಆತಂಕ ಪಡಿತರದಾರರನ್ನು ಕಾಡುತ್ತಿದೆ.
ಹೀಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಮುಗಿಬಿದ್ದಿರುವ ಪಡಿತರದಾರರು ಬಯೋಮೆಟ್ರಿಕ್ ದೃಢಿಕರಣಕ್ಕೆ ದುಂಬಾಲು ಬಿದ್ದಿದ್ದಾರೆ. ಆದರೆ, ಸರ್ವರ್ ಸಮಸ್ಯೆಗೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪಡಿತರದಾರರು ಸುಸ್ತೋ..ಸುಸ್ತು. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ನಿತ್ಯ ಹತ್ತಾರು ಕಾರ್ಡ್‌ದಾರರು ದೃಢಿಕರಣ ಹೊಂದಲು ಆಗುತ್ತಿಲ್ಲ.
ಇ-ಕೆವೈಸಿಯಲ್ಲಿ ಬೀಳಗಿ ದ್ವಿತೀಯ: ಪಟ್ಟಣದಲ್ಲಿ 260 ಅಂತ್ಯೋದಯ, ಗ್ರಾಮೀಣ 4521 ಹಾಗೂ ಪಟ್ಟಣದಲ್ಲಿ ಬಿಪಿಎಲ್ 3264 ಹಾಗೂ ಗ್ರಾಮೀಣ 25173 ಮತ್ತು ಪಟ್ಟಣದಲ್ಲಿ ಎಪಿಎಲ್ 649 ಹಾಗೂ ಗ್ರಾಮೀಣ ಭಾಗದಲ್ಲಿ 7262 ಸೇರಿತಾಲೂಕಿನಾದ್ಯಂತ ಒಟ್ಟು 36,956 ಪಡಿತರ ಚೀಟಿ ಮತ್ತು 1,12,549 ಪಡಿತರ ಸದಸ್ಯರಿದ್ದಾರೆ. ಇನ್ನು, 16,536 ಪಡಿತರ ಚೀಟಿ ಮತ್ತು 47,508 ಪಡಿತರ ಸದಸ್ಯರು ಇ-ಕೆವೈಸಿ ಹೊಂದಬೇಕಿದೆ ಎಂದು ಆಹಾರ ನಿರೀಕ್ಷಕ ಎಂ.ಎಸ್.ಹುರಕಡ್ಲಿ ತಿಳಿಸಿದ್ದಾರೆ.
ಶೇ. 61.47 ಸಾಧನೆ ಮಾಡುವ ಮೂಲಕ ಇ-ಕೆವೈಸಿ ಪ್ರಗತಿಯಲ್ಲಿ ತಾಲೂಕು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಶೇ. 63.05 ಸಾಧನೆ ಮಾಡಿದ ಮುಧೋಳ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಸರ್ವರ್ ಸಮಸ್ಯೆಯಾಗದಿದ್ದರೆ ಮಾತ್ರ ತ್ವರಿತಗತಿಯಲ್ಲಿ ಇ-ಕೆವೈಸಿ ಪೂರ್ಣಗೊಳ್ಳಲು ಸಾಧ್ಯ. ಇಲ್ಲದಿದ್ದರೆ ಇಲಾಖೆ ಅವಧಿ ವಿಸ್ತರಿಸುವುದು ಅನಿವಾರ್ಯ.
ಪಡಿತರ ಚೀಟಿ ಇ-ಕೆವೈಸಿ ಹೊಂದುವುದು ಕಡ್ಡಾಯ. ಇಲ್ಲದಿದ್ದರೆ ಅಂತಹ ಪಡಿತರ ಚೀಟಿಗೆ ಆಹಾರ ಧಾನ್ಯ ಪೂರೈಕೆ ಸ್ಥಗಿತಗೊಳ್ಳಲಿದೆ. ಸರ್ವರ್ ಸಮಸ್ಯೆ ಯಿಂದಾಗಿ ತೊಂದರೆಯಾಗಿದೆ. ಕಾರಣ, ಇ-ಕೆವೈಸಿ ಮಾಡಿಸಿಕೊಳ್ಳಲು ಇನ್ನಷ್ಟು ಅವ ಧಿ ವಿಸ್ತರಿಸಲಾಗುವುದು. ಎಲ್ಲ ಪಡಿತರದಾರರು ಇ-ಕೆವೈಸಿ ಹೊಂದಬೇಕು. ಶ್ರೀಶೈಲ ಕಂಕಣವಾಡಿ, ಉಪನಿರ್ದೇಶಕರು ಆಹಾರ ಇಲಾಖೆ, ಬಾಗಲಕೋಟೆ
-ರವೀಂದ್ರ ಕಣವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalkot : ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಮಹೇಶ್ ಮರೆಗೊಂಡ ಅಂತ್ಯಸಂಸ್ಕಾರ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Udupi: ವಾಹನ ದಟ್ಟಣೆ ನಿಯಂತ್ರಣ ಕ್ರಮ ಎಷ್ಟು ಫಲಪ್ರದ?
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Udupi: ವಾರಾಹಿ ನೀರು ನಗರಕ್ಕೆ ಇನ್ನೂ ಬಂದಿಲ್ಲ, ಅಗೆಯುವುದೂ ನಿಂತಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.