ರೋಗಿಗಳ ಸೇವೆಯೇ ದೇವರಿಗೆ ಸಲ್ಲಿಸುವ ನಿಜ ಸೇವೆ- ಶಿವಯೋಗಿ ರಾಜೇಂದ್ರ ಸ್ವಾಮೀಜಿ
Team Udayavani, Aug 19, 2024, 5:05 PM IST
ಉದಯವಾಣಿ ಸಮಾಚಾರ
ಮಹಾಲಿಂಗಪುರ: ವೈದ್ಯರನ್ನು ಜೀವಂತ ದೇವರ ಸ್ವರೂಪದಲ್ಲಿ ಕಾಣುವ ರೋಗಿಗಳ ಸೇವೆಯೇ ಭಗವಂತನಿಗೆ ಮತ್ತು ಸಮಾಜಕ್ಕೆ ಸಲ್ಲಿಸುವ ನಿಜವಾದ ಸೇವೆಯಾಗಿದೆ ಎಂದು ಮಹಾಲಿಂಗೇಶ್ವರ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಡಾ|ವಿಜಯ ಹಂಚಿನಾಳ ಅವರ ಅನುಪ ಆಸ್ಪತ್ರೆ ಹಾಗೂ ಹಾರ್ಟಕೇರ್ ಸೆಂಟರ್‌ಲ್ಲಿ ನೂತನವಾಗಿ ಆರಂಭಿಸುತ್ತಿರುವ ಅತ್ಯಾಧುನಿಕ ಸೌಲಭ್ಯವುಳ್ಳ ನಾಲ್ಕು ನೂತನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ| ಹಂಚಿನಾಳ ಕುಟುಂಬವು ಕಳೆದ ಮೂರು ದಶಕಗಳ ಆರೋಗ್ಯಸೇವೆಯಿಂದಾಗಿ ಬಾಗಲಕೋಟೆ- ಬೆಳಗಾವಿ, ವಿಜಯಪುರ ಜಿಲ್ಲೆಗಳ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಕುಟುಂಬವಾಗಿದೆ.
ಮಹಾಲಿಂಗಪುರದಂತಹ ಪಟ್ಟಣದಲ್ಲಿ ಮಹಾನಗರಗಳಲ್ಲಿ ಇರುವಂತಹ ಅತ್ಯಾಧುನೀಕ ಸೌಲಭ್ಯಯುಳ್ಳ ಘಟಕಗಳನ್ನು ಆರಂಭಿಸಿದ್ದು, ಈ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ನಾಲ್ಕು ನೂತನ ಘಟಕಗಳ ಉದ್ಘಾಟನೆ: ಅನುಪ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಹೃದಯರೋಗಕ್ಕೆ ಸಂಬಂಧಿಸಿದ ಕಾರ್ಡಿಯಾಕ್ ಕ್ಯಾತ ಲ್ಯಾಬ್, ಸ್ತ್ರೀ ರೋಗಗಳಿಗೆ ಸಂಬಂ ವೂಮೆನ್ಸ್ ಕ್ಲಿನಿಕ್, ವಿವಿಧ ಶಸ್ತ್ರಚಿಕಿತ್ಸಾ ರೋಗಿಗಳ ಸಂಬಂಧಿಸಿದ ಮ್ಯಾಡೂಲರ್ ಆಪರೇಷನ್ ಥಿಯೇಟರ್, ತುರ್ತು ರೋಗಿಗಳ ಸಂಬಂಧಿಸಿದ ಆಯ್ .ಸಿ.ಸಿ.ಯು(ತುರ್ತು ನಿಗಾ ಘಟಕ) ಸೇರಿದಂತೆ ನಾಲ್ಕು ಘಟಕಗಳನ್ನು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಬೆಳಗಾವಿಯ ನರರೋಗ ತಜ್ಞ ಡಾ| ಜಿ.ಎಂ.ವಾಲಿ, ಮಹಾಲಿಂಗಪುರದ ಶಸ್ತ್ರ ಚಿಕಿತ್ಸಾತಜ್ಞ ಡಾ| ಎ.ಆರ್ .ಬೆಳಗಲಿ ಮಾತನಾಡಿ, ಡಾ| ಅನೂಪ ಮತ್ತು ಡಾ| ಅಪೂರ್ವ ಹಂಚಿನಾಳ ದಂಪತಿ ಹುಟ್ಟೂರು ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರ ಸೇವೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭಿಸಿ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಮುಂದಾಗಿದ್ದು ಸ್ವಾಗತಾರ್ಹ. ಭವಿಷ್ಯದಲ್ಲಿ ಅನುಪ ಆಸ್ಪತ್ರೆ ಹಾಗೂ ಹಾರ್ಟ್‌ಕೇರ್ ಸೆಂಟರ್ ಜೊತೆಗೆ ಇಂದು ಪ್ರಾರಂಭವಾದ ವಿವಿಧ ಘಟಕಗಳೊಂದಿಗೆ ಅನುಪ ಆಸ್ಪತ್ರೆ ಹಾಗೂ ಹಾರ್ಟಕೇರ್ ಸೆಂಟರ್ ಆಸ್ಪತ್ರೆಯು
ಈ ಭಾಗದಲ್ಲಿನ ರೋಗಿಗಳ ಪಾಲಿನ ಸಂಜೀವಿನಿಯಾಗಿ ಬೆಳೆದು, ಉತ್ತಮ ಆರೋಗ್ಯ ಸೇವೆ ನೀಡಲಿ ಎಂದು ಶುಭ ಹಾರೈಸಿದರು.
ಅನುಪ ಆಸ್ಪತ್ರೆಯ ಮುಖ್ಯಸ್ಥರಾದ ಡಾ| ವಿಜಯ ಹಂಚಿನಾಳ ಮಾತನಾಡಿ, ಕಳೆದ ಮೂರು ದಶಕಗಳಿಂದ ಆಸ್ಪತ್ರೆಯು ಜನರಿಗೆ ಉತ್ತಮ ಆರೋಗ್ಯ ಸೇವೆನೀಡುತ್ತಾ ಬಂದಿದೆ. ಇದೀಗ ಮಹಾಲಿಂಗಪುರದ ಜನತೆಯು ಹೆಚ್ಚಿನ ಆರೋಗ್ಯ ಚಿಕಿತ್ಸೆಗಾಗಿ ಬೇರೆ ಬೇರೆ ಮಹಾನಗರಗಳಿಗೆ ಹೋಗುವುದನ್ನು ತಪ್ಪಿಸುವದಕ್ಕಾಗಿ, ರೋಗಿಗಳಿಗೆ ಅವಶ್ಯವಿರುವ ಎಲ್ಲ ಚಿಕಿತ್ಸೆಗಳನ್ನು ಒಂದೇ
ಆಸ್ಪತ್ರೆಯ ಅಡಿಯಲ್ಲಿ ನೀಡುವ ಉದ್ದೇಶದಿಂದ ನೂತನವಾಗಿ 4 ಪ್ರತ್ಯೇಕ ಘಟಕ ಆರಂಭಿಸಿದ್ದೇವೆ. ನುರಿತ ಹಾಗೂ ತಜ್ಞವೈದ್ಯರ ತಂಡವನ್ನು ಒಳಗೊಂಡ ಅನುಪ ಆಸ್ಪತ್ರೆಯು 24ಗಿ7 ಆರೋಗ್ಯ ಸೇವೆ ಒದಗಿಸಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಡಾ|ಅನೂಪ ಹಂಚಿನಾಳ, ಡಾ| ಎಂ.ಜಿ.ಹಿರೇಮಠ, ಡಾ|ಅಪೂರ್ವ ಹಂಚಿನಾಳ, ನಲಿನಿ ಹಂಚಿನಾಳ, ಡಾ| ಸುಭಾಶಿನಿ ಹಿರೇಮಠ, ಡಾ| ಎಂ.ಜಿ.ಹಿರೇಮಠ ಇದ್ದರು. ಅನುಪ ಆಸ್ಪತ್ರೆಯ ನೂತನ ಘಟಕಗಳನ್ನು ಪ್ರಾರಂಭಿಸಿದ ಡಾ|ವಿಜಯ ಹಂಚಿನಾಳ, ಡಾ|ಅನುಪ ಹಂಚಿನಾಳ ಅವರಿಗೆ ತೇರದಾಳ ಶಾಸಕ ಸಿದ್ದು ಸವದಿ ಸೇರಿದಂತೆ ವಿವಿಧ ಊರುಗಳ ವೈದ್ಯರು, ಉದ್ಯಮಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.