ಸಿದ್ಧರಾಮೇಶ್ವರ ಮನುಕುಲ ಆಸ್ತಿ
Team Udayavani, Feb 1, 2019, 10:30 AM IST
ಬೀಳಗಿ: ಹನ್ನೆರಡನೇ ಶತಮಾನದ ಕಲ್ಯಾಣ ಕ್ರಾಂತಿ ಕಾಲಘಟ್ಟದ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಮನುಕುಲದ ಬಹುದೊಡ್ಡ ಆಸ್ತಿಯಾಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಹೇಳಿದರು. ತಾಲೂಕು ಆಡಳಿತ ಹಾಗೂ ತಾಪಂ ಸಹಯೋಗದಲ್ಲಿ ಮಿನಿ ವಿಧಾನಸೌಧ ಹೊರಾಂಗಣದಲ್ಲಿ ಗುರುವಾರ ಹಮ್ಮಿಕೊಂಡ ಶರಣ ಶಿವಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ವಚನ ಸಾಹಿತ್ಯಕ್ಕೆ ಕೊಡುಗೆ: ಶಿವಯೋಗಿ ಸಿದ್ಧರಾಮೇಶ್ವರರು ಸುಮಾರು ಅರವತ್ತೆಂಟು ಸಾವಿರದಷ್ಟು ವಚನ ರಚಿಸುವ ಮೂಲಕ ವಚನ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದ ಅಂಕು-ಡೊಂಕು ತಿದ್ದಲು ಈಗಲೂ ಸಿದ್ಧರಾಮೇಶ್ವರರ ವಚನ ಸಾಹಿತ್ಯ ದಾರಿದೀಪವಾಗಿದೆ. ಸಿದ್ಧರಾಮೇಶ್ವರರು ಸಮಾನತೆ ಹರಿಕಾರ ಹಾಗೂ ಶ್ರೇಷ್ಠ ಚಿಂತಕರಾಗಿದ್ದರು. ಹನ್ನೆರಡನೇ ಶತಮಾನದಲ್ಲಿಯೇ ಕೆರೆ-ಕಟ್ಟೆ, ಬಾವಿ ನಿರ್ಮಿಸುವುದಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಜೀವಜಲದ ಕುರಿತು ಜಾಗೃತಿ ಮೂಡಿಸಿದ ದೂರದೃಷ್ಟಿ ಅವರದು. ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹ ಹಾಗೂ ಅಂತರ್ಜಾತಿ ವಿವಾಹಕ್ಕೂ ಆದ್ಯತೆ ನೀಡುವ ಮೂಲಕ ಜಾತ್ಯತೀತ ವ್ಯವಸ್ಥೆಗೆ ಅಡಿಪಾಯ ಹಾಕಿದ್ದರು. ಇಂತಹ ಮಹನೀಯರ ಆದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.
ಸಾಹಿತಿ ಎಸ್.ಎಸ್. ಕರಿದುರ್ಗನ್ನವರ ಉಪನ್ಯಾಸ ನೀಡಿದರು. ನಂತರ ಬಡ ಮಕ್ಕಳಿಗೆ ನೋಟ್ಬುಕ್, ಪೆನ್ ವಿತರಿಸಲಾಯಿತು. ಚಿತ್ರದುರ್ಗದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಹುಚ್ಚಪ್ಪಯ್ಯನ ಮಠದ ಫಕ್ಕೀರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಪಂ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಜಿಪಂ ಸದಸ್ಯ ಹನುಮಂತ ಕಾಖಂಡಕಿ, ಬಿಇಒ ಹನುಮಂತಗೌಡ ಮಿರ್ಜಿ, ಸಿಪಿಐ ರವಿಚಂದ್ರ ಡಿ.ಬಿ ಇದ್ದರು. ಗ್ರೇಡ್-2 ತಹಶೀಲ್ದಾರ್ ಸ್ವಾಗತಿಸಿದರು. ವಿಠ್ಠಲ ಹಿರೇನಿಂಗಪ್ಪನವರ ನಿರೂಪಿಸಿದರು. ಗುರುರಾಜ ಲೂತಿ ವಂದಿಸಿದರು.
ಭವ್ಯ ಮೆರವಣಿಗೆ
ಹುಚ್ಚಪ್ಪಯ್ಯನ ಕಟ್ಟೆಯಿಂದ ಮಿನಿ ವಿಧಾನಸೌಧದ ಮುಖ್ಯ ವೇದಿಕೆವರೆಗೆ ನೂರಾರು ಸುಮಂಗಲೆಯರ ಕುಂಭಮೇಳ, ವಾದ್ಯ ವೈಭವಗಳೊಂದಿಗೆ ಸಾರೋಟದಲ್ಲಿ ಚಿತ್ರದುರ್ಗದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ನಗರದ ಹುಚ್ಚಪ್ಪಯ್ಯನ ಮಠದ ಫಕ್ಕೀರಯ್ಯ ಸ್ವಾಮೀಜಿ ಅವರ ಭವ್ಯ ಮೆರವಣಿಗೆ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.