![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 20, 2023, 8:31 PM IST
ರಬಕವಿ-ಬನಹಟ್ಟಿ: ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಸಿದ್ದು ಸವದಿ ಅವರು ನಾಮಪತ್ರ ಸಲ್ಲಿಸುವದಕ್ಕೂ ಮೊದಲು ಮುಂಜಾನೆ ರಬಕವಿಯ ಬಸ್ ನಿಲ್ದಾಣದಿಂದ ಸುಮಾರು ೨ ಕಿ.ಮೀನಷ್ಟು ಅದ್ದೂರಿ ರೋಡ್ ಶೋ ನಡೆಸಿ ಎತ್ತಿನ ಬಂಡಿಯ ಮೂಲಕ ಸಾವಿರಾರು ಕಾರ್ಯಕರ್ತರೊಂದಿಗೆ ರಬಕವಿ-ಬನಹಟ್ಟಿ ತಹಶೀಲ್ದಾರ ಕಛೇರಿಯಲ್ಲಿನ ಚುನಾವಣೆ ಕಾರ್ಯಾಲಯಕ್ಕೆ ಆಗಮಿಸಿ ಚುನಾವಣಾಧಿಕಾರಿ ಡಾ. ಶಶಿಧರ ನಾಡಗೌಡ ಅವರಿಗೆ ನಾಮಪತ್ರ ಸಲ್ಲಿಸಿದರು.
ನಾಮ ಪತ್ರ ಸಲ್ಲಕೆಯ ನಿಮಿತ್ತ ಗುರುವಾರ ಬೆಳಿಗ್ಗೆ ಕಾಡಸಿದ್ಧೇಶ್ವರ, ಮಲ್ಲಿಕಾರ್ಜುನ ದೇವರು ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಪೂಜೆಗೈದು ರಬಕವಿಯ ಬಸ್ ನಿಲ್ದಾಣದಿಂದ ಬೃಹತ್ ಮೆರವಣಿಗೆ ಮೂಲಕ ದಾನಮ್ಮದೇವಿ ದೇವಸ್ಥಾನ, ಹಳೇ ಬಸ್ ನಿಲ್ದಾಣ, ಶಂಕರಲಿಂಗ ದೇವಸ್ಥಾನ, ಶ್ರೀನಿವಾಸ ಚಿತ್ರ ಮಂದಿರ, ರಾಮಪುರ ರಾಮದೇವರ ಮಂದಿರ, ನಗರಸಭೆ ಕಾರ್ಯಾಲಯ, ಪೊಲಿಸ್ ಠಾಣೆ ಮಾರ್ಗವಾಗಿ ರೋಡ್ ಶೋ ಮೂಲಕ ಚುನಾವಣೆ ಅಧಿಕಾರಿಗಳಿಗೆ ತಮ್ಮ ನಾಮ ಪತ್ರ ಸಲ್ಲಿಸಿದರು.
ಮೆರವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಸಿದ್ದು ಸವದಿ ಎತ್ತಿನ ಬಂಡಿ ಮೂಲಕ ರೋಡ್ ಶೋ ನಡೆಸಿ ಮತದಾರರತ್ತ ಕೈ ಬೀಸಿದರು. ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ಬಿಸಿಲಿನ ತಾಪಕ್ಕೆ ಬಸವಳಿದರು. ಗಿಡಮರ ಮತ್ತು ಕಟ್ಟಡಗಳ ನೆರಳಿನಲ್ಲಿ ಜನರು ತಂಡತಂಡವಾಗಿ ನಿಂತಿದ್ದರು. ಸಂಘಟಕರು ಸಾಕಷ್ಟು ನೀರಿನ ಸೌಲಭ್ಯ ಒದಗಿಸಿದ್ದರು. ಸ್ಥಳೀಯ ಪೊಲೀಸ್ ವೃತ್ತದ ಬಳಿಯಿರುವ ಸುತ್ತ ಮುತ್ತಲಿನ ಅಂಗಡಿಗಳಲ್ಲಿ ನೀರಿನ ಬಾಟಲಗಳು, ತಂಪು ಪಾನೀಯಗಳಿಗೆ ಭಾರಿ ಬೇಡಿಕೆ ಇತ್ತು. ಕಬ್ಜಿನ ಹಾಲಿನ ಮಾರಾಟ ಜೋರಾಗಿತ್ತು.
ಈ ಸಂದರ್ಭದಲ್ಲಿ ಸಂಸದ ಕೆ. ನಾರಾಯಣಸ್ವಾಮಿ, ಧರೆಪ್ಪ ಉಳ್ಳಾಗಡ್ಡಿ, ನಾಡೋಜ ಜಗದೀಶ ಗುಡಗುಂಟಿ, ಬಸವರಾಜ ಕೊಣ್ಣೂರ, ಬಸನಗೌಡ ಪಾಟೀಲ, ಗಣಪತರಾವ ಹಜಾರೆ, ಶ್ರೀಶೈಲ ಬೀಳಗಿ, ಪುಂಡಲಿಕ ಪಾಲಬಾಂವಿ, ಸುರೇಶ ಅಕ್ಕಿವಾಟ, ಆನಂದ ಕಂಪು, ಲಕ್ಕಪ್ಪ ಪಾಟೀಲ, ಸಂಜಯ ತೆಗ್ಗಿ, ಅಶೋಕ ರಾವಳ, ಮೋಹನ ಜಾಧವ, ಜಿ. ಎಸ್. ನ್ಯಾಮಗೌಡ, ಮಹಾಂತೇಶ ಹಿಟ್ಟನಮಠ, ಡಾ.ಎಸ್.ಎಸ್.ಹೂಲಿ, ದುಂಡಪ್ಪ ಮಾಚಕನೂರ, ಸಿದ್ದನಗೌಡ ಪಾಟೀಲ, ಬಸವರಾಜ ತೆಗ್ಗಿ, ಸುರೇಶ ಚಿಂಡಕ, ಬಾಬಾಗೌಡ ಪಾಟೀಲ, ಜಿ.ಎಸ್.ಗೊಂಬಿ, ಪ್ರಭಾಕರ ಮೊಳೇದ, ಶಿವಾನಂದ ಬುದ್ನಿ, ಗಟ್ಟು ಮಾಲಪಾಣಿ, ಶ್ರೀಶೈಲ ಯಾದವಾಡ, ಶಿವಾನಂದ ಕಾಗಿ, ಈಶ್ವರ ಪಾಟೀಲ, ವರ್ಧಮಾನ ಕೋರಿ, ಅಶೋಕ ರಾವಳ, ಈರಣ್ಣ ಚಿಂಚಖಂಡಿ, ಶಿವು ಗುಂಡಿ, ಭೀಮಶಿ ಪಾಟೀಲ, ಆನಂದ ಬಾಡಗಂಡಿ, ಶ್ರೀಶೈಲ ಗಸ್ತಿ, ಸದಾಶಿವ ಪರೀಟ, ಶ್ರೀಶೈಲ ಬೀಳಗಿ, ಶಂಕರ ಅಂಗಡಿ, ಗೋವಿಂದ ಡಾಗಾ, ಬಾಳಯ್ಯ ಪೂಜಾರಿ, ಚಿದಾನಂದ ಹೊರಟ್ಟಿ, ಲಿಂಗರಾಜ ನಾಯಕ, ಸದಾಶಿವ ದೆಸಟ್ಟಿ, ಪ್ರವೀಣ ಧಬಾಡಿ, ಮಲ್ಲು ಬೀಳಗಿ, ಜಯವಂತ ಹಳ್ಯಾಳ, ಶ್ರೀಧರ ಸುಣಧೋಳಿಮಠ, ರವಿ ದೇವಾಡಿಗ ಸೇರಿದಂತೆ ಅನೇಕರು ಇದ್ದರು.
ಇದನ್ನೂ ಓದಿ: Gangavati: ನಿಯಮ ಉಲ್ಲಂಘಿಸಿದ ರಸಗೊಬ್ಬರ ಅಂಗಡಿಗಳ ಪರವಾನಿಗೆ ರದ್ದು
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.