ಸಾವರಿನ್ ಶುಗರ್ ಕಾರ್ಖಾನೆಗೆ ಮುತ್ತಿಗೆ
Team Udayavani, Jun 6, 2019, 1:24 PM IST
ತೇರದಾಳ: ನಗರದ ಸಾವರಿನ್ ಶುಗರ್ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತೇರದಾಳ: ರೈತರಿಗೆ ಕಬ್ಬಿನ ಬಿಲ್ ಪಾವತಿಸದ ಸಾವರಿನ್ ಶುಗರ್ ಕಾರ್ಖಾನೆಯ ಗೇಟ್ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸಿದರು.
ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಹಳಿಂಗಳಿ, ತಮದಡ್ಡಿ, ಹನಗಂಡಿ, ಸಸಾಲಟ್ಟಿ ಸೇರಿದಂತೆ ಮತ್ತಿತರ ಗ್ರಾಮದ ರೈತರು ಸಾವರಿನ್ ಶುಗರ್ ಕಾರ್ಖಾನೆಗೆ ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಐದಾರು ತಿಂಗಳುಗಳಿಂದ ನಮ್ಮ ಬಿಲ್ ಬಾಕಿ ಹಣ ಪಾವತಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮಹಿಳೆಯರು ಪಾಲ್ಗೊಂಡು ಕಾರ್ಖಾನೆಯಿಂದ ಸರಿಯಾದ ಸಮಯಕ್ಕೆ ಹಣ ಪಾವತಿಯಾಗದೇ ಇರುವುದರಿಂದ ಬಹಳಷ್ಟು ಸಮಸ್ಯೆ ಎದುರಿಸಬೇಕಾಗಿದೆ ಎಂದರು. ಕಾರ್ಖಾನೆ ಸಿಬ್ಬಂದಿ ರೈತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಸಂಜೆ ನಾಲ್ಕು ಗಂಟೆಯವರೆಗೆ ಗೇಟ್ ತೆಗೆಯದೇ ಇರುವುದರಿಂದ ಒಳಗಿದ್ದ ಸಿಬ್ಬಂದಿಯವರು ಹೈರಾಣಾಾದರು.
ಕಾರ್ಖಾನೆ ಅಧಿಕಾರಿಗಳಾದ ಶಿವಣ್ಣನವರ, ಮಹಾವೀರ ಮುರಗುಂಡಿ ಮಾತನಾಡಿ, ಶೀಘ್ರ ಬಿಲ್ ನೀಡುವ ಭರವಸೆ ನೀಡಿದರು. ರೈತರಾದ ಗಂಭೀರ ಪಾಟೀಲ, ಶಾಂತಿನಾಥ ಖೇಬೋಜಿ, ಆದೇಶ ಕುಳ್ಳಿ, ಅರುಣ ಹನಗಂಡಿ, ಭರತೇಶ ಜಮಖಂಡಿ, ಗಂಗಪ್ಪ ಜಕ್ಕನ್ನವರ, ಆನಂದ ಮುದಕನ್ನವರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.